No menu items!
11.1 C
Munich
Wednesday, April 29, 2026

ಸೆಲ್ಫಿ ಹುಚ್ಚು ತಂದಿತು ಕುತ್ತು..! ಯುವ ವೈದ್ಯರ ಜೀವಕ್ಕೆ ಮುಳುವಾಯ್ತು ಸೆಲ್ಫಿ..! #Video

Must read

ಅತಿಯಾದ್ರೆ ಅಮೃತವೂ ವಿಷ..! ಈಗ ನಮ್ಮ ಯುವ ಜನತೆಯಲ್ಲಿ ಬಹುತೇಕರಲ್ಲಿ ಅತಿತೇಕಕ್ಕೆ ಹೋಗಿರೋದು ಸೆಲ್ಫಿ ಗೀಳು..! ಕಂಡಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳದೇ ಇದ್ರೆ ಕೆಲವರಿಗೆ ತಿಂದ ಅನ್ನ ಜೀರ್ಣ ಆಗಲ್ಲ ಅನ್ನಿಸುತ್ತೆ..! ಈ ಸೆಲ್ಫಿ ಗೀಳಿನಿಂದ ನಮ್ಮ ಕನ್ನಡದ ಮೂವರು ಜೀವವನ್ನೇ ಕಳೆದುಕೊಂಡಿದ್ದಾರೆ..! ಇದು ತುಂಬಾ ಬೇಸರದ ಸಂಗತಿ.
ಹೌದು, ವೈದ್ಯಕೀಯ ಪದವಿ ಮುಗಿಸಿ ಹೌಸ್ ತರಬೇತಿಪಡೆದು ಕೊಂಡು ಇನ್ನೇನು ಕೆಲವೇ ಸಮಯದಲ್ಲಿ ವೈದ್ಯರಾಗಬೇಕೆಂದು ಕೊಂಡಿದ್ದ ಮೂವರು ಮಂಡ್ಯ ತಾಲ್ಲೂಕಿನ ಹುಲಿವಾಲ ಹೊರವಲಯದಲ್ಲಿರುವ ವಿಶ್ವೇಶ್ವರ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ..! ಇವರ ಸಾವಿಗೆ ಸೆಲ್ಫಿ ಹುಚ್ಚೇ ಕಾರಣ..!
ನಾಲೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ತಾ ಇದ್ದ ಐವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ..! ಇಬ್ಬರು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ, ಮೂವರು ಮರಣವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಬೆಂಗಳೂರಿನ ಕಬ್ಬನ್ ಪೇಟೆಯ ಎಸ್ ಜಯರಾಮ್ರ ಮಗ ಜೀವನ್, ರಾಜಾಜಿನಗರದ ಎಲ್ ಪ್ರಕಾಶ್ರವರ ಮಗಳು ಶ್ರುತಿ, ಮತ್ತು ತುಮಕೂರಿನ ಶ್ರೀಧರ್ ಎಂಬುವವರ ಮಗ ಗಿರೀಶ್ ಮೃತ ದುರ್ದೈವಿಗಳೆಂದು ತಿಳಿದುಬಂದಿದೆ.

Video :

https://www.youtube.com/playlist?list=PLrnE4LMxty4ZDEpU0fi3e7vjzFdXzyqV6

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article