ಅಮ್ಮ ಇದ್ದಿದ್ರೆ ಐಎಎಸ್ ಅಧಿಕಾರಿಯನ್ನಾಗಿ ಮಾಡ್ತಿದ್ರು…!

1
365

ಈಕೆ ಚಿಕ್ಕವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡ ಹೆಣ್ಣುಮಗಳು. ಅಪ್ಪ ಇಲ್ಲದ ಕೊರಗು ಎಂದಿಗೂ ಕಾಡಲು ಬಿಡಲಿಲ್ಲ ಅಮ್ಮ. ನಾನು ಪಟ್ಟ ಕಷ್ಟವನ್ನು ನನ್ನ ಮಗಳು ಪಡಬಾರದು ಅವಳನ್ನು ದೊಡ್ಡ ಅಧಿಕಾರಿಯನ್ನಾಗಿ ಮಾಡ್ಬೇಕು ಅಂತ ಬಡತನದ ನಡುವೆಯೂ ಮಗಳನ್ನು ಓದಿಸ್ತಾ ಇದ್ರು ಆ ತಾಯಿ. ವಿಧಿ ಇಲ್ಲಿಯೂ ಸುಮ್ಮನಿರಲಿಲ್ಲ…! ತನ್ನ ಆಟವನ್ನಾಡಿಯೇ ಬಿಟ್ಟ…! ತನ್ನ ಇಡೀ ಜೀವನವನ್ನು ಮಗಳಿಗಾಗಿ ಮುಡಿಪಾಗಿಟ್ಟ ಆ ಮಹಾತಾಯಿ ವಿಧಿವಶರಾದ್ರು…! ಐಎಎಸ್ ಅಧಿಕಾರಿ ಆಗಬೇಕೆಂದು ಆಸೆಪಟ್ಟಿದ್ದ ಅವರು ಬದುಕು ಕಟ್ಟಿಕೊಳ್ಳಲು ಮಾಧ್ಯಮ ಕ್ಷೇತ್ರಕ್ಕೆ ಬರಬೇಕಾಯ್ತು…!

ಇದು ನಿರೂಪಕಿ ಶಿಲ್ಪ ಕೆ.ಎನ್ ಅವರ ಲೈಫ್ ಸ್ಟೋರಿ. ತಾಯಿಮನೆ ದಾವಣಗೆರೆಯ ಲಿಂಗದಹಳ್ಳಿಯಲ್ಲಿ ಹುಟ್ಟಿದ ಶಿಲ್ಪ ಅವರು ಲಿಂಗದಹಳ್ಳಿ ಹಾಗೂ ತಂದೆಮನೆ ಕಮ್ಮತಹಳ್ಳಿಯಲ್ಲಿ ಬೆಳೆದವರು. ಈಗ ಈ ಎರಡೂ ಊರಿನ ಹೆಮ್ಮೆಯ ಮಗಳು. ಇವರ ತಂದೆ ದಿ.ನಿಂಗಪ್ಪ, ತಾಯಿ ದಿ. ನಂದಿನಿ. ಸಹೋದರ ಮಂಜುನಾಥ್, ಪತಿ ರಾಜನ್.


ಶಿಲ್ಪ ಶಾಲೆ ಮೆಟ್ಟಿಲು ಹತ್ತುವ ಮುನ್ನವೇ, 5 ವರ್ಷದ ಮಗುವಾಗಿದ್ದಾಗಲೇ ತಂದೆ ವಿಧಿವಶರಾದ್ರು. ಇಡೀ ಕುಟುಂಬದ ಹೊಣೆ ತಾಯಿಯ ಹೆಗಲಮೇಲೆ ಬಿತ್ತು. ಮುದ್ದಿನ ಮಗಳಿಗೆ ತಂದೆ ಇಲ್ಲದ ನೋವು ಯಾವತ್ತಿಗೂ ಬರಬಾರದು. ಈಕೆಯ ಇಷ್ಟಗಳನ್ನೆಲ್ಲಾ ನಾನೇ ಪೂರೈಸುವೆ ಅಂತೆ ಕಷ್ಟದಲ್ಲೂ ಮಗಳ ಇಷ್ಟಗಳಿಗೆ ಇಲ್ಲ ಅನ್ನದೆ ಪ್ರೀತಿಯಿಂದ ಬೆಳೆಸಿದ್ರು. ಸರ್ಕಾರಿ ಉದ್ಯೋಗಿ/ದೊಡ್ಡ ಅಧಿಕಾರಿಯನ್ನಾಗಿ ಮಾಡ್ಬೇಕು ಎಂಬುದು ಅವರ ಆಸೆಯಾಗಿತ್ತು. ಅಂತೆಯೇ ಶಿಲ್ಪ ಅವರು ಸಹ ಓದುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

ದಾವಣಗೆರೆಯಲ್ಲಿಯೇ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಹಾಗೂ ಪದವಿ ಶಿಕ್ಷಣವೂ ಆಯ್ತು. ಪಿಯುಸಿಯಲ್ಲಿ ಕಲಾವಿಭಾಗದ ವಿದ್ಯಾರ್ಥಿನಿ ನಂತರ ಬಿಬಿಎಂ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಗೆ ಅಂತ ಧಾರವಾಡಕ್ಕೆ ಹೋದ್ರು. ಅಲ್ಲಿ ಜಾಯಿನ್ ಆಗಿ ಆರೇ ಆರು ತಿಂಗಳಲ್ಲಿ ತಾಯಿಯ ಅನಾರೋಗ್ಯಕ್ಕೆ ತುತ್ತಾದರು. ಅವರನ್ನು ಉಳಿಸಿಕೊಳ್ಳಬೇಕು ಅಂತ ತುಂಬಾ ಪ್ರಯತ್ನಪಟ್ಟರು ಶಿಲ್ಪ. ಆದ್ರೆ, ದೇವರು ಕರುಣೆ ತೋರಲಿಲ್ಲ. ಮಗಳ ಉಜ್ವಲ ಭವಿಷ್ಯದ ಕನಸು ಕಂಡಿದ್ದ ತಾಯಿ ಕನಸು ನನಸಾಗುವ ಕಾಲ ಹತ್ತಿರ ಬಂದಾಗಲೇ ಕಾಲವಾದರು…!


ತಾಯಿ ಮರಣ ನಂತರ ಕುಟುಂಬ ನಿರ್ವಹಣೆಗೆ ಶಿಲ್ಪ ಓದುವುದನ್ನು ಬಿಟ್ಟು ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಯ್ತು. ಧಾರವಾಡದಲ್ಲಿ ಮುತ್ತೋಟ್ ಫೈನಾನ್ಸ್ ಮತ್ತು ಕೋಚಿಂಗ್ ಸೆಂಟರ್ ಒಂದರಲ್ಲಿ ಕೆಲಸ ಮಾಡಲಾರಂಭಿಸಿದ್ರು. ಕೆಲಸ ಮಾಡುತ್ತಲೇ ಕಾಂಪಿಟೇಟಿವ್ ಎಕ್ಸಾಮ್ ಗೆ ತಯಾರಿ ನಡೆಸ್ತಿದ್ರು.


ಪತ್ರಕರ್ತ ಚಂದ್ರು ಎಂಬುವವರ ಪರಿಚಯವಿತ್ತು. ಅವರು ಕಸ್ತೂರಿ ಚಾನಲ್ ನಗೆ ಆ್ಯಂಕರ್ ಬೇಕಾಗಿದ್ದಾರೆ ಟ್ರೈ ಮಾಡು ಅಂದ್ರು. ಕಸ್ತೂರಿ ಚಾನಲ್ ಗೆ ಬಂದು ಸ್ಕ್ರೀನ್ ಟೆಸ್ಟ್ ಕೊಟ್ಟ ಶಿಲ್ಪ ರೈಲಿನಲ್ಲಿ ವಾಪಸ್ಸು ಹೋಗ್ತಾ ಇರುವಾಗಲೇ ‘ನೀವು ಸೆಲೆಕ್ಟ್ ಆಗಿದ್ದೀರಿ’ ಎಂಬ ಕರೆ ಕಸ್ತೂರಿಯಿಂದ ಬಂತು.


ಆದ್ರೆ ಮೊದಲು ಕೆಲಸ ಮಾಡ್ತಿದ್ದಲ್ಲಿಗಿಂತ ಕಸ್ತೂರಿಯಲ್ಲಿ ಕಡಿಮೆ ಸಂಬಳ. ದಾವಣಗೆರೆ, ಧಾರವಾಡಕ್ಕೆ ಹೋಲಿಸಿದ್ರೆ ಬೆಂಗಳೂರಲ್ಲಿ ಜೀವನ ನಿರ್ವಹಣೆ ಕಷ್ಟ. ಏನ್ ಮಾಡೋದು ಅಂತ ಯೋಚಿಸಿ, ಆಗಿದ್ದಾಗಲಿ ಅಂತ ಡಿಸೈಡ್ ಮಾಡಿ ಕಸ್ತೂರಿ ಚಾನಲ್ ಗೆ ಸೇರಿದ್ರು. ಇಲ್ಲಿಂದ ಇವರ ಜೀವನ ಬದಲಾಯ್ತು. ಅದು 2012ನೇ ಇಸವಿ.


ಕೇವಲ 1 ವರ್ಷದಲ್ಲಿ ಬಿಟಿವಿಯಿಂದ ಆಫರ್ ಬಂತು. ಅಲ್ಲಿ 1.5 ವರ್ಷ ಕೆಲಸ ಮಾಡಿದ ಇವರಿಗೆ ಮತ್ತೆ ಮಾತೃಸಂಸ್ಥೆ ಕೈಬೀಸಿ ಕರೆಯಿತು. ಮತ್ತೆ ಅಲ್ಲಿ ಅವಕಾಶ ಸಿಗುತ್ತೆ ಅಂತ ಅಂದುಕೊಂಡಿರದ ಶಿಲ್ಪ ಸೀನಿಯರ್ ಆ್ಯಂಕರ್ ಆಗಿ ರೀ ಜಾಯಿನ್ ಆದ್ರು. ಮತ್ತೆ ಆ್ಯಂಕರಿಂಗ್ ವಿಭಾಗದ ಮುಖ್ಯಸ್ಥರೂ ಆದ್ರು.


ಈ ಬಾರಿ ಕಸ್ತೂರಿಯಲ್ಲಿ ಪೊಲಿಟಿಕನ್ ಡಿಸ್ಕಷನ್ ಸೇರಿದಂತೆ ಎಲ್ಲಾ ಬಗೆಯ ಡಿಸ್ಕಷನ್ಸ್ ಗಳನ್ನು ನಡೆಸಿಕೊಡ್ತಿದ್ರು. ಕಸ್ತೂರಿ ನ್ಯೂಸ್ ಜೊತೆಗೆ ಎಂಟರ್‍ಟ್ರೈನ್ಮೆಂಟ್ ನಲ್ಲೂ ನಿರೂಪಣೆ ವಿಭಾಗದ ಹೊಣೆ ಇವರದ್ದಾಗಿತ್ತು. ಕಸ್ತೂರಿ ಎಂಟರ್‍ಟೈನ್ಮೆಂಟ್ ನಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ಇವರು ನಡೆಸಿಕೊಟ್ಟಿದ್ದಾರೆ. ಬಿಬಿಎಂಪಿ ಚುನಾವಣೆ ಮತ ಎಣಿಕೆ ದಿನ ಬೆಳಗ್ಗೆ 8ಗಂಟೆಯಿಂದ ಸಂಜೆ 6 ಗಂಟೆ ತನಕ ನಿರಂತರವಾಗಿ ನ್ಯೂಸ್, ಡಿಸ್ಕಷನ್ಸ್ ಗಳನ್ನು ನಡೆಸಿಕೊಟ್ಟ ಹಿರಿಮೆ ಶಿಲ್ಪ ಅವರದ್ದು.


ಹೀಗೆ ಅತಿ ಕಡಿಮೆ ಅವಧಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಶಿಲ್ಪ ಅವರೀಗ ಈ ವರ್ಷದ (2017ರ) ಮಾರ್ಚ್‍ನಲ್ಲಿ ಸುವರ್ಣ ಚಾನಲ್ ಸೇರಿದ್ದಾರೆ. ಮಾಮೂಲಿ ಡಿಸ್ಕಷನ್ಸ್, ವಾರ್ತೆ ವಾಚನ ಮಾಡ್ತಾರೆ. ಪ್ರತಿದಿನ ಸಂಜೆ 6 ಗಂಟೆಗೆ ಇವರು ನಡೆಸಿಕೊಡೋ ‘ವಲ್ರ್ಡ್ ವಾರ್’ ಕಾರ್ಯಕ್ರಮ ಸೂಪರ್ ಹಿಟ್ ಆಗಿದೆ.


ಹೊಸ ಕಾರ್ಯಕ್ರಮ ಅಂತ ಬಂತು ಅಂತಾದ್ರೆ ಶಿಲ್ಪ ಅವರಿಗೆ ಮೊದಲ ಆದ್ಯತೆ. ಕಾರ್ಯಕ್ರಮಕ್ಕೆ ತಕ್ಕಂತೆ ವೇಷಭೂಷಣ ಹಾಕಿಕೊಂಡು ಪ್ರೆಂಸೆಂಟ್ ಮಾಡುವಲ್ಲಿ ಎತ್ತಿದ ಕೈ ಶಿಲ್ಪ. ಆನ್ ಸ್ಕ್ರೀನ್ ನಲ್ಲಿ ಕೂರುವ ಗತ್ತು, ಮಾತಾಡೋ ಶೈಲಿಯೇ ಇವರ ಪ್ಲಸ್ ಪಾಯಿಂಟ್. ತಂದೆ-ತಾಯಿ ಇಲ್ಲದ ವಿಷ್ಯವನ್ನು ಮೊದಮೊದಲು ಯಾರಲ್ಲೂ ಹೇಳಿಕೊಂಡಿರ್ಲಿಲ್ಲ. ಬೇರೆಯವರು ಕನಿಕರ ತೋರಿಸೋದು ಇವರಿಗೆ ಇಷ್ಟವಿಲ್ಲ. ಸ್ವಾಭಿಮಾನಿ. ಅನಿತಾ ಕುಮಾರ ಸ್ವಾಮಿಯವರಿಗೂ ಈಕೆಯನ್ನು ಬಿಟ್ಟು ಕಳುಹಿಸುವುದು ಇಷ್ಟವಿರಲಿಲ್ಲ. ಆದ್ರೆ ವೃತ್ತಿ ಬದುಕಿನ ಅನಿವಾರ್ಯ ಬದಲಾವಣೆ ಬಯಸಿ ಕಸ್ತೂರಿ ಬಳಗ ಬಿಟ್ರು ಅಂತ ಜೊತೆಯಲ್ಲಿ ಕೆಲಸ ಮಾಡಿದವ್ರು ಹೇಳ್ತಾರೆ.


ಮೊದಲಿನಿಂದಲೂ ಶಿಲ್ಪ ಮಾತಿನಮಲ್ಲಿ. ಮಾತು ಮಾತು ಮಾತು…! ಆದ್ರೆ ಕ್ಯಾಮೆರಾ ಎದುರು ಮಾತು ಸಿಕ್ಕಾಪಟ್ಟೆ ಕಡಿಮೆ ಇತ್ತು. ಯಾವಾಗ ಕ್ಯಾಮೆರಾ ಹಿಂದಿನ ಶಿಲ್ಪ ಕ್ಯಾಮೆರಾ ಮುಂದೆ ಬಂದರೋ ಅವತ್ತಿನಿಂದ ಯಶಸ್ಸು ಇವರನ್ನು ತನ್ನಿಂದ ತಾನೇ ಅಪ್ಪಿಕೊಳ್ತಾ ಬಂತು. ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಏರ್ತಿದ್ದಾರೆ.


ಮೀಡಿಯಾಕ್ಕೆ ಎಂಟ್ರಿಕೊಟ್ಟ ಆರಂಭದ ದಿನಗಳಲ್ಲಿ ‘ಇವಳು ಆ್ಯಂಕರ್ ಆಗೋಕೆ ಅರ್ಹಳಲ್ಲ’ ಅಂತ ಯಾರೋ ಹೇಳಿದ್ದರು. ಆ ಕ್ಷಣದಲ್ಲಿ ತುಂಬಾ ನೊಂದುಕೊಂಡಿದ್ದ ಶಿಲ್ಪ ತನ್ನಮೇಲೆ ತನಗಿದ್ದ ನಂಬಿಕೆಯಿಂದ ಇವತ್ತು ಅಂದು ಬಾಯಿ ತೆವಲಿಗೆ ಮಾತಾಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಅನೇಕ ವೇದಿಕೆ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಟ್ಟಿದ್ದಾರೆ.


ಬಿಟಿವಿಯಲ್ಲಿರುವಾಗ ‘ಮಾಧ್ಯಮ ರತ್ನ’ ಪ್ರಶಸ್ತಿಗೆ ಭಾಜನೆರಾಗಿದ್ದರು. ನಂತರ ಕೆಲವೊಂದು ಪ್ರಶಸ್ತಿಗಳು ಅರಸಿ ಬಂದರೂ ಅವುಗಳಿಂದ ದೂರವಿದ್ದಾರೆ. ಇಲ್ಲಿ ತನಕ ಸಾಧಿಸಿದ್ದರ ಬಗ್ಗೆ ತೃಪ್ತಿಯಿದೆ ಸಾಧನೆಯ ಹಸಿವು ಇನ್ನೂ ಇವರಲ್ಲಿದೆ. ‘ನಿಮ್ಮ ಬಗ್ಗೆ ನಿಮಗೆ ಕಾನ್ಫಿಡೆನ್ಸ್ ಇದ್ರೆ ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಎದೆಗುಂದದೆ ಮುಂದೆ ಸಾಗಿ’ ಎನ್ನುವುದು ಶಿಲ್ಪ ಅವರು ಹೇಳುವ ಕಿವಿಮಾತು.


‘ಮಾಧ್ಯಮದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಪ್ರಾತಿನಿಧ್ಯ ಸಿಗಬೇಕು. ಫೀಮೇಲ್ ಜರ್ನಲಿಸ್ಟ್ ಗಳು ಇಂಥಾ ಕಾರ್ಯಕ್ರಮಗಳನ್ನು ಮಾತ್ರ ನಡೆಸಿಕೊಡಬೇಕು ಎಂಬ ಬೌಂಡರಿ ಗೆರೆಯನ್ನು ಅಳಿಸಿಹಾಕಿ ಮುಕ್ತ ಅವಕಾಶಗಳನ್ನು ನೀಡಬೇಕು’ ಎಂಬುದು ಶಿಲ್ಪ ಅವರಾಸೆ.
ಆರಂಭದ ದಿನಗಳಲ್ಲಿ ನನಗೆ ಪ್ರೋತ್ಸಾಹ ನೀಡಿ ಬೆಳೆಸಿದ ಮನೋಜ್ ಸರ್, ಆನಂದ್ ಸರ್, ಚನ್ನಕೇಶವ ಸರ್, ಗಜಾನನ ಹೆಗ್ಡೆ ಸರ್, ಅನಿತಾ ಕುಮಾರಸ್ವಾಮಿ ಹಾಗೂ ಸುವರ್ಣದಲ್ಲಿ ಅವಕಾಶ ನೀಡಿದ ಅಜಿತ್ ಹನುಮಕ್ಕನವರ್ ಮತ್ತು ಜೊತೆಗೆ ಪ್ರೋತ್ಸಾಹ ನೀಡ್ತಿರೋ ಸ್ವರೂಪ್ ಸರ್, ಸಿದ್ದು ಕಾಳೋಜಿ ಸರ್ ಅವರನ್ನು ಸ್ಮರಿಸಿಕೊಳ್ಳುತ್ತಾರೆ ಶಿಲ್ಪ.


ಪತಿ ರಾಜನ್ ಅವರು ಸಾಪ್ಟ್ ವೇರ್ ಇಂಜಿನಿಯರ್. ಅವರು ತುಂಬಾ ಸಪೋರ್ಟ್ ಮಾಡ್ತಾರೆ. ನನ್ನ ಇಷ್ಟೆಲ್ಲಾ ಸಾಧನೆಗೆ ನನ್ನ ತಾಯಿಯೇ ಸ್ಪೂರ್ತಿ. ಅವರು ಈಗಲೂ ಜೊತೆಗಿರಬೇಕಿತ್ತು. ಆದರೆ ಎಲ್ಲೋ ದೂರದಿಂದ ನೋಡಿ ಖುಷಿ ಪಡ್ತಿದ್ದಾರೆ ಎನ್ನುವುದು ಶಿಲ್ಪ ಅವರ ಭಾವನಾತ್ಮಕ ನುಡಿ. ಬಾಲ್ಯದಿಂದಲೂ ನೋವು, ಬಡತನದ ಕಷ್ಟಗಳನ್ನು ಅನುಭವಿಸಿ, ಅವುಗಳನ್ನು ಧೈರ್ಯದಿಂದ ಎದುರಿಸಿ ಬೆಳೆದ ಶಿಲ್ಪ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಮಾಧ್ಯಮ ಕ್ಷೇತ್ರದಲ್ಲಿ ಎಂದೂ ಮರೆಯಲಾಗದ ಹೆಸರು ಶಿಲ್ಪ ಅವರದ್ದಾಗಲಿ ಎಂದು ಆಶಿಸುತ್ತಾ…

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

1 COMMENT

LEAVE A REPLY

Please enter your comment!
Please enter your name here