ವಿಪರೀತ ಮಳೆ ಹಿನ್ನೆಲೆ ವಿಷಸರ್ಪಗಳ ಕಾಟ ಹುಷಾರ್..!

1
40

ಬೆಂಗಳೂರು : ಬೆಂಗಳೂರಿನಲ್ಲಿ ವಿಪರೀತ ಮಳೆ ಹಿನ್ನೆಲೆ ವಿಷಸರ್ಪಗಳ ಕಾಟ ಹೆಚ್ಚಾಗಿದೆ. ನಿರಂತರ ಮಳೆ ಆಗುತ್ತಿರುವ ಕಾರಣ ಬೆಂಗಳೂರಿನ ಮನೆಗಳಲ್ಲಿ ಹಾವುಗಳು ಬಂದು ಸೇರಿಕೊಳ್ಳುತ್ತಿವೆ. ಜೂನ್ ಹಾಗೂ ಜುಲೈ ತಿಂಗಳು ಹಾವುಗಳ ಸಂತಾನೋತ್ಪತ್ತಿ ಸಮಯ ಆಗಿರುವುದರಿಂದ ಮೊಟ್ಟೆಯೊಡೆದು ಮರಿಗಳು ಹೊರಬರುತ್ತಿವೆ. ಈ ಸಮಯದಲ್ಲಿ ಮಳೆ, ಚಳಿ ಇದ್ದು ಬೆಚ್ಚಗಿನ ಜಾಗ ಹುಡುಕಿಕೊಂಡು ಅವುಗಳು ಸಂಚಾರ ನಡೆಸುತ್ತವೆ. ಹಾಗಾಗಿ, ಮನೆಯಲ್ಲಿರುವ ಎಲ್ಲ ಜಾಗಗಳನ್ನೂ ಪ್ರತಿದಿನ ಶುಚಿಯಾಗಿಡುವಂತೆ ಪಾಲಿಕೆ ಮನವಿ ಮಾಡಿದೆ.

 

ಪ್ರತಿದಿನ ನಗರದಲ್ಲಿ 50ಕ್ಕೂ ಹೆಚ್ಚಿನ ವಿಷಕಾರಿ ಹಾವುಗಳು ಮನೆಯ ಅಡುಗೆ ಕೋಣೆ, ಶೂ ಮುಂತಾದ ಜಾಗದಲ್ಲಿ ಪತ್ತೆಯಾಗುತ್ತಿವೆ. ಪಾಲಿಕೆಯಿಂದ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಹಾವುಗಳನ್ನು ಕಂಡು ಆತಂಕಗೊಳ್ಳದೇ ಕೂಡಲೇ ಪಾಲಿಕೆಯ ಅನಿಮಲ್ ರೆಸ್ಕ್ಯೂ ಟೀಮ್​​ಗೆ ಮಾಹಿತಿ ನೀಡಬಹುದು ಎಂದು ಮೋಹನ್ ಹೇಳಿದರು.

1 COMMENT

LEAVE A REPLY

Please enter your comment!
Please enter your name here