ಬೌಲರ್ ಗಳಿಗೂ ಹೆಲ್ಮೆಟ್…! ಯುವ ಆಟಗಾರನ ಬೌಲಿಂಗ್ ಶೈಲಿಯೇ ಇದಕ್ಕೆ ಕಾರಣ…!

ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಗಳು ಹೆಲ್ಮೆಟ್ ಧರಿಸೋದು ಗೊತ್ತಿದೆ. ಆದ್ರೆ, ಬೌಲರ್ ಗಳು ಹೆಲ್ಮೆಟ್ ಧರಿಸೋದನ್ನು ನೋಡಿದ್ದೀರ…? ಇಂಥಾ ಒಂದು ಹೊಸ ಪ್ರಯೋಗಕ್ಕೆ ನ್ಯೂಜಿಲ್ಯಾಂಡ್ ಕ್ರಿಕೆಟ್ ನಾಂದಿ ಹಾಡಿದೆ.


ಇಲ್ಲಿನ ಸೂಪರ್ ಸ್ಮಾಶ್ ಟಿ20 ಟೂರ್ನಿಯ ನಾರ್ಥನ್ ಡಿಸ್ಟ್ರಿಕ್ಟ್ಸ್ ಹಾಗೂ ಒಟಾಗೊ ತಂಡದ ನಡುವಿನ ಪಂದ್ಯದಲ್ಲಿ ವೇಗದ ಬೌಲರ್ ಬಾರ್ನೆಸ್ ಹೆಲ್ಮೆಟ್ ಧರಿಸಿ ಬೌಲಿಂಗ್ ಮಾಡಿದ್ರು…! ಇವರ ಬೌಲಿಂಗ್ ಶೈಲಿಗೆ ಇದು ಅವಶ್ಯಕವೂ ಹೌದು…!
ಉದಯೋನ್ಮುಖ ಆಟಗಾರ ವಾರೆನ್ ಬೌಲ್ ಮಾಡೋ ವೇಳೆ ತಲೆ ನೆಲದತ್ತ ಬಾಗಿರುತ್ತೆ…! ಬ್ಯಾಟ್ಸ್ಮನ್ ನೇರವಾಗಿ ಚಂಡನ್ನು ಬಾರಿಸಿದರೆ ಇವರ ಮುಖಕ್ಕೆ ಬಂದು ಬಡಿಯುವ ಅಪಾಯ ಇರೋದ್ರಿಂದ ಹೊಸ ವಿನ್ಯಾಸದ ಹೆಲ್ಮೆಟ್ ಧರಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಹೆಲ್ಮೆಟ್ ಧರಿಸಿ ಬೌಲಿಂಗ್ ಮಾಡಿದ ಮೊದಲ ಆಟಗಾರ ವಾರೆನ್.