No menu items!
15.6 C
Munich
Thursday, May 21, 2026

ತಮಾಷೆ ಮಾಡ್ತಾ ಇಲ್ಲಾ..! ಕಪಿಲ್ ಶರ್ಮಾ ಮತ್ತು ಅವರ ತಂಡದ ವೇತನ ಎಷ್ಟು ಗೊತ್ತಾ…?

Must read

ಈ ಸ್ಟೋರಿ ಓದಿದ ಕೂಡಲೇ ಇವರೇನೋ ತಮಾಷೆ ಮಾಡ್ತಾ ಇದಾರೆ ಅಂತ ಅನ್ಕೊಂಡ್ರೆ… ಅದು ನಿಮ್ಮ ತಪ್ಪು ಕಲ್ಪನೆ… ಖ್ಯಾತ ಹಾಸ್ಯ ಕಲಾವಿದ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಖ್ಯಾತಿಯ ಕಪಿಲ್ ಶರ್ಮಾ ಹಾಗೂ ಆತನ ತಂಡದ ಸದಸ್ಯರುಗಳ ವೇತನ ಎಷ್ಟು ಅಂತ ನಿಮ್ಗೇನಾದ್ರೂ ಗೊತ್ತಾ…? ಹಾಗಾದ್ರೆ ಈ ಸ್ಟೋರಿ ಓದಿ… ಕಲರ್ಸ್‍ನಲ್ಲಿ ಈ ಹಿಂದೆ ಪ್ರಸಾರವಾಗ್ತಾ ಇದ್ದ ‘ಕಾಮಿಡಿ ನೈಟ್ ವಿತ್ ಕಪಿಲ್’ ಕಾರ್ಯಕ್ರಮ ಇದ್ದಕ್ಕಿದ್ದ ಹಾಗೆ ನಿಂತು ಹೋದದ್ದು ನಿಮಗೆಲ್ಲಾ ಗೊತ್ತೇ ಇರುವ ವಿಷಯ. ಇದಕ್ಕಾಗಿನೇ ಕಾಯ್ತಾ ಇದ್ದ ಸೋನಿ ಟೆಲಿವಿಷನ್ ಸಂಸ್ಥೆ ಕಪಿಲ್ ಶರ್ಮಾ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿದ್ದಾರಲ್ಲದೇ ಈ ಸಂಸ್ಥೆ ‘ದಿ ಕಪಿಲ್ ಶರ್ಮಾ ಶೋ’ ಎಂಬ ಪ್ರೈಮ್ ಟೈಮ್ ಕಾರ್ಯಕ್ರಮ ಪ್ರಸಾರ ಮಾಡತೊಡಗಿತು. ಈ ಕಾಮಿಡಿ ಶೋ ಎಷ್ಟು ಜನ ಮನ್ನಣೆ ಗಳಿಸಿದೆ ಅಂದ್ರೆ..! ದೇಶದಲ್ಲಿ ಈ ಶೋವನ್ನು ಕೇವಲ ಟಿವಿಲಿ ಮಾತ್ರವಲ್ಲ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ನೋಡ್ತಾ ಇದಾರೆ ಜನ…! ಅಷ್ಟೇ ಅಲ್ಲ. ಈ ಕಾರ್ಯಕ್ರಮದಿಂದ ಅತ್ತ ಕಲರ್ಸ್ ಶರ್ಮಾರನ್ನು ಬಿಟ್ಟುಕೊಟ್ಟು ತಲೆ ಮೇಲೆ ಕೈ ಹೊತ್ತು ಕುಳಿತಿದ್ರೆ, ಇತ್ತ ಸೋನಿ ಟಿಆರ್‍ಪಿಯಂತೂ ರಾಕೆಟ್ ರೀತಿಯಲ್ಲಿ ಹರಿದು ಬರ್ತಾ ಇದೆ…!
ಅದೆಲ್ಲಾ ಹೋಗ್ಲಿ ನಾವೀಗ ಮೇನ್ ವಿಷ್ಯಕ್ಕೆ ಬರೋಣ ಸೊನಿಯಲ್ಲಿ ಪ್ರಸಾರವಾಗ್ತಾ ಇರೋ ಕಪಿಲ್ ಕಾಮಿಡಿ ಶೋಗೇನೋ ಆದಾಯ ವಿಪರೀತವಾಗಿ ಬರ್ತಿದೆ. ಆದ್ರೆ ಈ ಕಾರ್ಯಕ್ರಮ ನಡುಸ್ಕೊಡ್ತಿರೋ ಟೀಮ್‍ಗೆ ಎಷ್ಟು ಆದಾಯ ಗೊತ್ತಾ…? ಮೊದ್ಲಿಗೆ  ಶರ್ಮ ಅವರ ಆದಾಯ ನೋಡೋಣ.. ತನ್ನ ಅತ್ಯದ್ಭುತ ಕಾಮಿಡಿ ಮಾತಿನಿಂದಲೇ ಜನ ಮನ್ನಣೆ ಗಳಿಸಿರುವ ಕಪಿಲ್ ಶರ್ಮಗೆ ಸೊನಿ ನೀಡ್ತಾ ಇರೋ ಸಂಭಾವನೆ ಒಂದು ಎಪಿಸೋಡ್‍ಗೆ 60 ರಿಂದ 80 ಲಕ್ಷ…! ನಾನು ತಿಂಗಳ ವೇತನ ಹೇಳ್ತಾ ಇಲ್ಲಾ ಸ್ವಾಮಿ ಒಂದು ಎಪಿಸೋಡ್‍ನ ವೇತನ ಹೇಳ್ತಾ ಇದೀನಿ..! ಇನ್ನು ತಿಂಗಳಿಗೆ ಶರ್ಮ ಗಳಿಸೋ ಆದಾಯ ಕೇಳುದ್ರೆ ಮಾತ್ರ ಶಾಕ್ ಆಗ್ತೀರಾ… ಅದೆಷ್ಟು ಗೊತ್ತಾ… ಬರೋಬ್ಬರಿ 5 ರಿಂದ 6 ಕೋಟಿ…!
ಇಷ್ಟೊಂದು ಸಂಭಾವನೆ ಬಾಲಿವುಡ್ ನಟ-ನಟಿಯರಾದ ಆಲಿಯಾ ಭಟ್, ಟೈಗರ್ ಶ್ರಾಫ್ ಕೂಡಾ ಪಡೀತಾ ಇಲ್ವಂತೆ..! ಇನ್ನು ಕಪಿಲ್ ತಂಡದ ಸದಸ್ಯರ ಸಂಭಾವನೆ ಬಗ್ಗೆ ಮಾತಾಡುದ್ರೆ.. ಅವ್ರೂ ಕೂಡ ಯಾರ್ಗೂ ಕಮ್ಮಿ ಇಲ್ಲ.. ಹಾಲಿ ‘ಗುತ್ತಿ’ ಡಾ. ಮಶೂರ್ ಗುಲಾಟಿ ಪಾತ್ರದಲ್ಲಿ ನಟಿಸೋ ಸುನೀಲ್ ಗ್ರೋವರ್ ಒಂದು ಎಪಿಸೋಡ್‍ಗೆ 10-12 ಲಕ್ಷ ತಮ್ಮ ಕಿಸೆಗೆ ಹಾಕೊಳ್ತಾರೆ. ಇನ್ನು ಕಿಶಾ ಶಾರದಾ 5-7 ಲಕ್ಷ ಪಡೆದರೆ, ಅಲಿ ಅಸ್ಗರ್ ಕೂಡ 5-7 ಲಕ್ಷ ಪಡೆಯುತ್ತಾರೆ. ಇನ್ನು ಚಂದು ಪಾತ್ರಧಾರಿ ಪ್ರಭಾಕರ್‍ಗೆ 4 ಲಕ್ಷ, ಸುಮೋನಾ ಚಕ್ರವರ್ತಿಗೆ 6-7 ಲಕ್ಷ, ಹಾಗೂ ರಾಷೆಲ್ ರಾವ್ ಅವರಿಗೆ 3-4 ಲಕ್ಷ ಪ್ರತಿ ಎಪಿಸೋಡ್‍ಗೆ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಶೋನಲ್ಲಿ ಕುಳಿತು ಬರೀ ನಗೆ ಚಟಾಕಿ ಹಾರಿಸೋ ಮಾಜೀ ಕ್ರಿಕೇಟಿಗ ನವಜೋತ್ ಸಿಂಗ್ ಸಿದ್ದು ಪ್ರತಿ ಎಪಿಸೊಡ್‍ಗೆ 8-10 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ…!

POPULAR  STORIES :

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!

ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!

ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!

ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!

ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article