No menu items!
15 C
Munich
Saturday, June 13, 2026

ಫೇಸ್ಬುಕ್ ಲೈವ್ ಮಾಡಿ ಪಾಗಲ್ ಪ್ರೇಮಿ ಆತ್ಮಹತ್ಯೆ…!

Must read

ಪಾಗಲ್ ಪ್ರೇಮಿಯೊಬ್ಬ ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದು ಫೇಸ್‌ಬುಕ್‌ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಹಳ್ಳದ ಹೊಸಹಳ್ಳಿಯಲ್ಲಿ ನಡೆದಿದೆ.ಮೋಹನ್ ಗೌಡ (25) ಆತ್ಮಹತ್ಯೆಗೆ ಶರಣಾದ ಪ್ರೇಮಿ. ಈತ 15ದಿನ ಹಿಂದೆ ಪ್ರೀತಿಸಿದ ಹುಡುಗಿ ಹಿಂದೆ ಓಡಿ ಹೋಗಿ ಮದುವೆಯಾಗಿದ್ದ. ಬಳಿಕ ಯುವತಿಯ ಪೋಷಕರು ಆಕೆಯ ಮನವೊಲಿಸಿ ಕರೆಸಿಕೊಂಡು ಹೋಗಿದ್ದರು. ಇದರಿಂದ ‌ಮನನೊಂದ ಮೋಹನ್ ಫೇಸ್ ಬುಕ್ ಲೈವ್ ಮಾಡಿ‌ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ನಾನು ನೋವು ಅನುಭವಿಸಿಕೊಂಡು ನೀನು ಸುಖವಾಗಿರು ಅನ್ನೋ ದೊಡ್ಡ ಮನಸ್ಸು ನನ್ನದಲ್ಲ. ನನ್ನ ನೋವನ್ನೂ ನೀನೂ ಅನುಭವಿಸು, ನನ್ನ ಕಣ್ಣೀರು ನನ್ನ ಅಮ್ಮನ ಕಣ್ಣೀರಿನ ಶಾಪ ನಿಮ್ಮ ಕುಟುಂಬಕ್ಕೆ ತಟ್ಟದೆ ಇರಲ್ಲ. ಮುಂದೆ ನಗುನಗುತ್ತಾ ಇದ್ದೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕಿದೆ. ದಯವಿಟ್ಟು ಯಾರೂ ಇಂತಹ ಹುಡುಗೀರ್ ಅನ್ನು ನಂಬಬೇಡಿ ನಾನು ಅನುಭವಿಸಿದ ನರಕವನ್ನು ಇವಳು ಅನುಭವಿಸಲಿ ಎಂದು ಹೇಳಿ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article