No menu items!
16.9 C
Munich
Monday, June 15, 2026

ವಿರಾಟ್ ಮತ್ತೊಂದು ಶತಕ….!

Must read

ಟೀಂ‌ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತೊಂದು‌ ಅಮೋಘ ಶತಕ ದಾಖಲಿಸಿದ್ದಾರೆ.
ಕೇಪ್ ಟೌನ್ ನಲ್ಲಿ ಆತಿಥೇಯ ದ. ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮಿಂಚಿನ ಆಟ ಮುಂದುವರೆಸಿದ್ದು, ಶತಕ ಬಾರಿಸಿದ್ದಾರೆ. ಇದರೊಂದಿಗೆ ಕ್ರಿಕೆಟ್ ಸಾಮ್ರಾಟ್ ವಿರಾಟ್ ಅವರ ಏಕದಿನ‌ ಶತಕದ ಸಂಖ್ಯೆ 34ಕ್ಕೆ ಏರಿದೆ.


ಟಾಸ್ ಗೆದ್ದ ದ. ಆಫ್ರಿಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ ಶತಕ ( 160) ದ ನೆರವಿನಿಂದ 303 ರನ್ ಗಳಿಸಿದೆ.ಶಿಖರ್ ಧವನ್ 76, ಅಜಿಂಕ್ಯ ರಹಾನೆ 11, ಹಾರ್ದಿಕ್ ಪಾಂಡ್ಯ 14, ಮಹೇಂದ್ರ ಸಿಂಗ್ ಧೋನಿ 10 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ ಖಾತೆ ತೆರೆಯದೆ ಮೊದಲನೆಯವರಾಗಿ ಫೆವಿಲಿಯನ್ ಸೇರಿದರು. ಕೇದರ್ ಜಾದವ್ 1 ರನ್ ಗೆ ವಿಕೆಟ್ ಒಪ್ಪಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article