100ಕ್ಕೆ 101 ಅಂಕ ಕೊಟ್ಟ ಶಿಕ್ಷಣ ಇಲಾಖೆ..! ಗುಜರಾತಿನಲ್ಲಿ ನಡೆಯಿತು ಒಂದು ವಿಭಿನ್ನ ಘಟನೆ..!

Must read

ಇಂದಿನ ವಿದ್ಯಾರ್ಥಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು ರಾತ್ರಿ ಎನ್ನದೇ ಓದುತ್ತಾರೆ. ಅವರಿಗೆ ಹೆತ್ತವರು ಕೂಡಾ ಉತ್ತಮವಾಗಿ ಸಪೋರ್ಟ್ ಕೂಡಾ ಮಾಡುತ್ತಾರೆ. ಆದ್ದರಿಂದ ಕೆಲವು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಆದರೆ ಇಲ್ಲೋರ್ವ ವಿದ್ಯಾರ್ಥಿ ನೂರಕ್ಕೆ 101 ಅಂಕ ಪಡೆಯುವ ಮೂಲಕ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದ್ದಾನೆ..!
ಯೆಸ್.. ಗುಜರಾತಿನ ಒಬ್ಬ ವಿದ್ಯಾರ್ಥಿ 100ಕ್ಕೆ 101 ಅಂಕ ಗಳಿಸಿ ಅಚ್ಚರಿ ಮೂಡಿಸಿದ್ದಾನೆ..! 2015 ರಲ್ಲಿ ನಡೆದ ಪರೀಕ್ಷೆಯಲ್ಲಿ 100 ಕ್ಕೆ 101 ಅಂಕ ಬಂದಿದೆ..! ಆದರೆ ಅದು ಆತ ಓದಿ ಪಡೆದಿದ್ದಲ್ಲ, ಬದಲಿಗೆ ಗುಜರಾತ್ ಶಿಕ್ಷಣ ಇಲಾಖೆ ಮಾಡಿದ ಅವಾಂತರದಿಂದ ಇಂಥದ್ದೊಂದು ತಪ್ಪು ಸಂಭವಿಸಿದೆ..! ಇದರಿಂದ ಎಚ್ಚೆತ್ತ ಗುಜರಾತ್ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಇಲಾಖೆಯು ಅಂಕ ಪಟ್ಟಿ ನೀಡುವ ಮೊದಲೇ ತಪ್ಪನ್ನು ತಿದ್ದಿದೆ.
ಗುಜರಾತ್ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಂಕಪಟ್ಟಿಯನ್ನು ಪರಿಶೀಲಿಸುವಾಗ ಆಶ್ಚರ್ಯಗೊಂಡಿದ್ದಾರೆ..! 100 ಕ್ಕೆ 101 ಅಂಕ ಬಂದಿರುವುದನ್ನು ನೋಡಿ ಮತ್ತೆ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷದಿಂದಾಗಿ ಈ ತಪ್ಪು ನಡೆದಿದೆ. ಆದರೆ ಉತ್ತರ ಪತ್ರಿಕೆಯನ್ನು ಮತ್ತೇ ಪರಿಶೀಲಿಸಿದಾಗಲೇ ಆ ವಿದ್ಯಾರ್ಥಿಗೆ 90 ಅಂಕ ಬಂದಿದ್ದು ತಿಳಿದುಬಂದಿದೆ. ತಾಂತ್ರಿಕ ತೊಂದರೆಯಿಂದಾಗಿ 11 ಅಂಕ ಪ್ರತ್ಯೇಕವಾಗಿ ಸೇರ್ಪಡೆಯಾಗಿತ್ತೆಂದು ಬೋರ್ಡ್ ಅಧಿಕಾರಿಗಳು ಹೇಳಿದ್ದಾರೆ.
ಶಿಕ್ಷಣ ಇಲಾಖೆ ಮಾಡುವ ಇಂತಹ ತಪ್ಪುಗಳಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ತಪ್ಪು ಸಂಭವಿಸುವ ಮುನ್ನ ಎರಡೆರಡು ಬಾರಿ ಉತ್ತರ ಪತ್ರಿಕೆಯನ್ನು ಪರಿಶೀಲಿಸಿ, ವಿದ್ಯಾರ್ಥಿಗಳು ಬರೆದ ಉತ್ತರಕ್ಕೆ ತಕ್ಕ ಅಂಕ ನೀಡುವ ಕಾರ್ಯ ಮಾಡಬೇಕಿದೆ.

  • ರಾಜಶೇಖರ ಜೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

- Advertisement -spot_img

More articles

- Advertisement -spot_img

Latest article