No menu items!
11.1 C
Munich
Wednesday, April 29, 2026

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

Must read

ಎಷ್ಟೋ ಜನ ತಾಯಂದಿರು ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ಒಂದೇ ಕಾಲಕ್ಕೆ ಎರಡೆರಡು ಮಕ್ಕಳಿಗೆ ಜನ್ಮ ನೀಡಿರೋ ಸುದ್ದಿ ಹೊಸದಲ್ಲ ಬಿಡಿ..! ಎರಡಕ್ಕಿಂತ ಜಾಸ್ತಿ ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ತಾಯಿಯನ್ನು ಕಂಡಿದ್ದಾರ? ನನಗಂತೂ ಗೊತ್ತಿರಲಿಲ್ಲ..! ಈಗ ತಾಯಿಯೊಬ್ಬಳು ಒಂದಲ್ಲ, ಎರಡರಲ್ಲ, ಮೂರಲ್ಲ.. ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ್ದಾಳೆ..! ಈ ಬಿಸಿ ಬಿಸಿ ಸುದ್ದಿ ಗೊತ್ತಾಗ್ತಾ ಇದ್ದಂತೆ ಅಚ್ಚರಿ ಆಯ್ತು..! ನಿಮಗೂ ಈ ಅಚ್ಚರಿ ಉಣಬಡಿಸೋಣ ಅಂತ ಹೊರಟಿದ್ದೀನಿ..!
ಇದು ನಿಜ, ಮಹಿಳೆಯೊಬ್ಬಳು ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ..! ಎರಡು ಮಕ್ಕಳಿಗಾದ್ರೆ ಟ್ವಿನ್ಸ್ ಅಂತಾರೆ, ಕನ್ನಡದಲ್ಲಿ ಅವಳಿ-ಜವಳಿ. ಆದರೆ ಈಕೆ ಬರೊಬ್ಬರಿ ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ್ದಾಳಲ್ಲಾ? ಈ ಐದು ಮಕ್ಕಳಿಗೆ ಕ್ವಿಂಟುಪ್ಲೆಟ್ಸೆಂದು ಇಂಗ್ಲೀಷ್ ನಲ್ಲಿ ಕರೀತಾರೆ..! ದೇವ್ರಾಣೆಗು ನನಗೆ ಕನ್ನಡದಲ್ಲಿ ಏನ್ ಅಂತಾರಂತ ಗೊತ್ತಿಲ್ಲ..! ನಿಮಗೆ ಗೊತ್ತಾದ್ರೆ ಹೇಳಿ. ಹ್ಞಾಂ ಏನಂಥಾದ್ರೂ ಕರೀಲಿ ಬಿಡಿ. ಆದರೆ ಆಕೆ ಐದು ಒಂದೇ ಸಾರಿ ಜನ್ಮ ನೀಡಿದ್ದಾಳೆಂದ್ರೆ ಅಚ್ಚರಿ ಆಗುತ್ತೆ..! ಆದ್ರೂ ಈ ತಾಯಿ ಸಿಕ್ಕಾಪಟ್ಟೆ ಗ್ರೇಟ್ ಬಿಡ್ರಿ..! ಐದು ಮಕ್ಕಳನ್ನು ಹೊಟ್ಟೆಲಿ ಇಟ್ಕೊಂಡು ಒಂಬತ್ತು ತಿಂಗಳು ಹೊತ್ತಿದ್ದಾಳೆಂದ್ರೆ ಸುಮ್ನೆನಾ?
ಆಕೆ ಕಿಮ್ ಟುಸಿ. ಆಸ್ಟ್ರೇಲಿಯಾದವಳು. ಕಳೆದ ಗುರುವಾರ ತಾಯಿ ಆಗಿದ್ದಾಳೆ. ಬೆಳಿಗ್ಗೆ ಸುಮಾರು 8.20ಕ್ಕೆ ಟುಸಿ ಕಿಂಗ್ ಎಡ್ವಡರ್್ ಆಸ್ಪತ್ರೆಯಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಒಂದು ಮಗು 1269 ಗ್ರಾಂ, ಇನ್ನೊಂದು 1210ಗ್ರಾಂ, ಮತ್ತೊಂದು 1200 ಗ್ರಾಂ, ಮಗದೊಂದು 1170ಗ್ರಾಂ, ಐದನೇ ಮಗು 1160 ಗ್ರಾಂ ತೂಕವನ್ನು ಹುಟ್ಟುವಾಗ ಹೊಂದಿದ್ದವಂತೆ..! ಈ ಮಕ್ಕಳಲ್ಲಿ ಮೊದಲನೆ ಮಗು ಅಂದರೆ1269 ಗ್ರಾಂ ತೂಕದ ಮಗುವಿದೆಯಲ್ಲಾ ಅದು ಮಾತ್ರ ಗಂಡು. ಇನ್ನುಳಿದ ಮಕ್ಕಳು ಹೆಣ್ಣುಮಕ್ಕಳು. (ಒಂದು ಗಂಡು, 4 ಹೆಣ್ಣು).
ಟುಸಿ ಎಷ್ಟೊಂದು ಭಾರ ತಡೆದುಕೊಂಡು ಐದು ಮಕ್ಕಳನ್ನು ಗರ್ಭದಲ್ಲಿ ಪೋಷಿಸಿರಬಹುದು..?! ಎನಿವೇ ಅಂತೂ ತಾಯಿ ಮಕ್ಕಳೆಲ್ಲಾ ಆರೋಗ್ಯದಿಂದ ಇದ್ದಾರಲ್ಲಾ? ಅಷ್ಟು ಸಾಕು.

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article