ಅವರಿಬ್ಬರು ಪ್ರೀತಿಸ್ತಾ ಇದ್ರು, ಇವಳು ಅವನನ್ನು ಪ್ರೀತಿಸಿ ಮದುವೆಯಾದ್ಲು..! ಮುಂದೇನಾಯ್ತು?

0
917

ಸ್ವಪ್ನ, ಸ್ವಪ್ನ ಸ್ವಪ್ನ..! ಅವನು ಎಷ್ಟೇ ಕೂಗಿದರೂ ಅವಳಿಲ್ಲ..! ಮನೆ ತುಂಬಾ ಹುಡುಕಾಡಿದರೂ ಸ್ವಪ್ನ ಸಿಗಲೇ ಇಲ್ಲ..! ಎಲ್ಲೋದಳು ಇವಳು? ಫೋನ್ ಮಾಡಿದ. ಅವಳು ಫೋನ್ ರಿಸೀವ್ ಮಾಡ್ಲಿಲ್ಲ..! ಮತ್ತೆ ಮತ್ತೆ ಫೋನ್ ಮಾಡಿದ ಹ್ಞೂಂ..ಹ್ಞೂಂ ಅವಳು ಕಾಲ್ ಪಿಕ್ ಮಾಡ್ಲೇ ಇಲ್ಲ..! ಮಾರನೇ ದಿನವೂ ಅವಳಿಗೆ ಫೋನ್ ಮಾಡಿದ ಅವಳು ರಿಸೀವ್ ಮಾಡ್ಲೇ ಇಲ್ಲ..! ಅವಳ ಅಮ್ಮ? ಅವರೂ ಅಷ್ಟೇ..! ಅವಳ ಅಣ್ಣ? ಕೊನೆಯದಾಗಿ ಅವಳಪ್ಪನಿಗೂ ಕಾಲ್ ಮಾಡಿದ ಇಲ್ಲ, ಅವರೂ ರಿಸೀವ್ ಮಾಡ್ಲಿಲ್ಲ..! ನೇರವಾಗಿ ಅವಳ ತವರಿಗೇ ಹೋದ.. ಅಲ್ಲಿ ಯಾರೂ ಇರ್ಲಿಲ್ಲ..! ಮನೆ ಬೀಗ ಹಾಕಿತ್ತು. ಪಕ್ಕದ ಮನೆಯವರನ್ನು ಕೇಳಿದ ಇವರ ಮನೆಯಲ್ಲಿ ಎಲ್ಲಾ ಎಲ್ಲಿ ಹೋದರು? ಏನಾದ್ರು ಗೊತ್ತಾ? ನಿನ್ನ ಹೆಂಡತಿ ಸ್ವಪ್ನಳೂ ಬಂದಿದ್ದಾಳಲ್ಲಾ? ಅವರೆಲ್ಲಾ ಒಟ್ಟಾಗಿ ಹೊರಗೆ ಹೋಗಿದ್ದಾರೆ..! ನೀನು ಊರಲಿಲ್ಲ, ಕೆಲಸದ ಮೇಲೆ ಹೊರಗೆಲ್ಲೋ ಹೋಗಿದ್ದೀ ಅಂತ ಸ್ವಪ್ನ ಹೇಳಿದ್ಲಲ್ಲಾ? ಕೆಲಸ ಆಯ್ತಾ? ಯಾವಾಗ ಬಂದೆ ಊರಿಗೆ, ಇರ್ಲಿ, ಒಳಗೆ ಬಾರಪ್ಪಾ ಮೊದ್ಲು, ಅವನನ್ನು ಒಳಕ್ಕೆ ಕರೆದರು, ಪಕ್ಕದ ಮನೆಯಲ್ಲಿದ್ದ ಸ್ವಪ್ನಾಳ ದೊಡ್ಡಪ್ಪ..!

ಅವನು ದಿವಿನ್. ಇಂಜಿನಿಯರಿಂಗ್ ಮಾಡೋಕೆ ಮಂಗಳೂರಿಗೆ ಹೋಗ್ತಾನೆ. ಅಲ್ಲಿ ಅವನ ಕ್ಲಾಸ್ಮೇಟ್ ಮಹಿಮಾಳೊಡನೆ ಪ್ರೀತಿ ಹುಟ್ಟುತ್ತೆ..! ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸ್ತಾರೆ. ಅದ್ಯಾಕೋ ಗೊತ್ತಿಲ್ಲ? ಇದ್ದಕ್ಕಿದ್ದಂತೆ ಮಹಿಮಾ ದಿವಿನ್ನಿಂದ ದೂರಾಗ್ತಾಳೆ..! ಕಾರಣ ಹೇಳದೇ ಮಹಿಮಾ ಬಿಟ್ಟೋದಾಗ ದಿವಿನ್ ಬಿಕ್ಕಿಬಿಕ್ಕಿ ಅಳ್ತಾನೆ..! ಕ್ಲಾಸ್ಗೆ ಸರಿಯಾಗಿ ಹೋಗ್ತಾನೂ ಇರ್ಲಿಲ್ಲ..! ಒಳ್ಳೇ ಹುಡುಗ, ಚೆನ್ನಾಗಿ ಓದ್ತಾನೂ ಇದ್ನಲ್ಲಾ? ಇವನಿಗೆ ಏನಾಯ್ತು..?! ಕ್ಲಾಸ್ಗೆ ಯಾಕ್ ಬರ್ತಿಲ್ಲಾ? ಉಳಿದ ವಿದ್ಯಾರ್ಥಿಗಳನ್ನು ವಿಚಾರಿಸಿದ್ರು ಪ್ರೊಫೆಸರ್. ಹುಡುಗರಿಗೆ ಕಾರಣ ಗೊತ್ತಿದ್ರೂ ಪ್ರೊಫೆಸರ್ ಹತ್ತಿರ ಹೇಳೋಕಾಗುತ್ತಾ? ಅವನು ಹಾಳಾಗಲು ಕಾರಣಳಾದ ಮಹಿಮಾ ಕೂಡ ಕ್ಲಾಸ್ನಲ್ಲೇ ಇದ್ದಾಳೆ..! ಮಹಿಮಾ ಬಿಟ್ಟರೆ ಅವನು ತುಂಬಾ ಯಾರ ಜೊತೆಯೂ ಕ್ಲೋಸ್ ಆಗಿರ್ಲಿಲ್ಲ..! ಆದೆರೆ ಮಹಿಮಾ ಈಗ ದಿವಿನ್ ಜೊತೆ ಮಾಡತಾಡ್ತಾ ಇಲ್ಲ..! ಆಗ, ದಿವಿನ್ನನ್ನು ಮಾತಾಡಿಸಿ, ಬುದ್ಧಿ ಹೇಳಿ ಸರಿಯಾಗಿ ಕ್ಲಾಸ್ಗೆ ಬರುವಂತೆ ಮಾಡಿದ್ದು ಸ್ವಪ್ನ..!
ಮಹಿಮಾಳೊಡನೆ ಪ್ರೀತಿ ಹುಟ್ಟುವ ಮೊದಲೇ ದಿವಿನ್ ಸ್ವಪ್ನಳ ಬೆಸ್ಟ್ ಫ್ರೆಂಡ್ ಆಗಿದ್ದ..! ದಿವಿನ್ ಮತ್ತು ಮಹಿಮಾರ ಪ್ರೀತಿ ವಿಚಾರ ತಿಳಿದ ಮೇಲೆ ಸ್ವಪ್ನ ದಿವಿನ್ ಜೊತೆ ಇರ್ತಾ ಇರ್ಲಿಲ್ಲ..! ಈಗ ಮಹಿಮಾ ದೂರಾಗಿದ್ದರಿಂದ ದಿವಿನ್ ನೊಂದು ಹಾಳಾಗ್ತಾ ಇದ್ದಾನೆ..! ಅವನನ್ನು ಬದಲಾಯಿಸಬೇಕೆಂದು ಸ್ವಪ್ನ ಅವನನ್ನು ಮಾತಾಡಿಸಿ ಬುದ್ದಿ ಹೇಳ್ತಾನೆ..! ನಿಧಾನಕ್ಕೆ ಸ್ವಪ್ನ ಮತ್ತು ದಿವಿನ್ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಕ್ಲೋಸ್ ಆಗ್ತಾರೆ..! ದಿವಿನ್ ಅವಳನ್ನು ಬೆಸ್ಟ್ ಫ್ರೆಂಡ್ ಅಂತ ಟ್ರೀಟ್ ಮಾಡ್ತಾ ಇದ್ದ. ಆದರೆ ಸ್ವಪ್ನ ಅವನನ್ನು ಮೊದಲಿಂದಲೂಬ ಪ್ರೀತಿಸ್ತಾ ಇದ್ದಳು..! ಆ ಪ್ರೀತಿ ವಿಷಯವನ್ನು ಅಣ್ಣನಿಗೂ ಹೇಳಿದ್ದಳು..! ಮೊದ ಮೊದಲಿಗೆ ಬೈದ ಅಣ್ಣಾ ಕೊನೆಗೆ ತಂಗಿಯ ಪ್ರೀತಿಗೆ ಒಪ್ಪಿದ್ದ..! ದಿವಿನ್ ಸ್ವಪ್ನಾಳಿಂದಾಗಿ ಅವಳ ಅಣ್ಣಿನಿಗೂ ತುಂಬಾ ಆತ್ಮೀಯನಾಗಿ ಬಿಟ್ಟಿದ್ದ..! ಅವಳ ಅಪ್ಪ-ಅಮ್ಮನಿಗೂ ಅಷ್ಟೇ. ಅವರ ಮನೆಯಲ್ಲಿನ ಊಟ, ತಿಂಡಿ, ಕಾಫಿ ಎಲ್ಲದರಲ್ಲೂ ದಿವಿನ್ಗೆ ಒಂದು ಪಾಲಿತ್ತು..! ಒಂದು ದಿನ ಸ್ವಪ್ನಳೇ ನೇರವಾಗಿ ದಿವಿನ್ ಗೆ ಪ್ರೀತಿ ನಿವೇಧಿಸಿಕೊಂಡಳು..! ಅದಕ್ಕೆ ದಿವಿನ್ ಒಪ್ಪಲಿಲ್ಲ..! ತಪ್ಪು, ನಾನೀಗಲೇ ಒಬ್ಬಳು ಹುಡುಗಿಯನ್ನು ಪ್ರೀತಿಸಿ ಅವಳಿಂದ ದೂರಾಗಿದ್ದೇನೆ..! ಅದಕ್ಕಿಂತ ಹೆಚ್ಚಾಗಿ, ನೀನು ನನ್ನ ಫ್ರೆಂಡ್, ನಿನ್ನಿಂದಲೇ ನಾನು ಬದಲಾಗಿದ್ದು, ನಿಮ್ಮ ಮನೇಲಿ ಮಗನಂತೆ ನನ್ನನ್ನು ಟ್ರೀಟ್ ಮಾಡ್ತಾರೆ..! ನಾನು ನಿನ್ನ ಪ್ರೀತಿಸಿದ್ರೆ ಅವರ ನಂಬಿಕೆಗೂ ದ್ರೋಹ ಮಾಡಿದಂತಾಗುತ್ತೆ..! ಬೇಡ ನಾವು ಫ್ರೆಂಡ್ಸ್ ಆಗಿಯೇ ಇರೋಣ ಅಂತ ಎಷ್ಟೇ ಕೇಳಿದ್ರೂ ಸ್ವಪ್ನಾಳದ್ದು ಒಂದೇ ಹಠ.. ನಿನ್ನ ಬಿಟ್ಟು ನಾನು ಬದುಕಿರಲ್ಲ..! ಕೊನೆಗೂ ದಿವಿನ್ ಒಪ್ಪಿರಲಿಲ್ಲ. ಓದು ಮುಗಿದ ಮೇಲೆ, ಬೆಂಗಳೂರತ್ತ ಕೆಲಸಕ್ಕೆ ಬರೋ ಮೊದಲು, ಸ್ವಪ್ನ ಅವಳ ಮನೆಯಲ್ಲಿ ಅಣ್ಣನ ಮೂಲಕ ಹೇಳಿಸಿದ ಮೇಲೆ, ಸ್ವಪ್ನಳ ಅಪ್ಪ-ಅಮ್ಮನೇ ದಿವಿನ್ ಬಳಿ ಮಾತಾಡ್ತಾರೆ..! ದಿವಿನ್ಗೆ, ಆಶ್ಚರ್ಯ..! ನೋಡಪ್ಪಾ, ನೀನು ಒಳ್ಳೆಯ ಹುಡುಗ, ಮನೆಮಗನಂತೆ ನೋಡಿಕೊಂಡ ನಿನ್ನ ಅಪ್ಪ ಅಮ್ಮನಿಗೆ ದ್ರೋಹ ಮಾಡಲ್ಲ ಅಂತ ಸ್ವಪ್ನಳಿಗೆ ಹೇಳಿದೆಯಲ್ಲಾ? ಅಷ್ಟು ಸಾಕು ನಿನ್ನ ಗುಣ ಎಂಥಹದ್ದಂತ ತಿಳಿಯೋಕೆ..! ನಮ್ಮ ಒಪ್ಪಿಗೆ ಇದೆ, ನೀನು ಒಪ್ಪಿದರೆ ನಾವೇ ನಿನ್ನ ಮನೆಯಲ್ಲಿ ಮಾತಾಡ್ತೀನಿ ಅಂದ್ರು ಸ್ವಪ್ನಳ ಅಪ್ಪ..! ಯೋಚಿಸಿ, ಕೊನೆಗೆ ಒಪ್ಪಿದ. ಸ್ವಪ್ನಾಳ ಅಪ್ಪ-ಅಮ್ಮ, ದಿವಿನ್ ಮನೆಯಲ್ಲಿ ಮಾತಾಡಿ ಮದುವೆ ನಿಶ್ವಯವಾಯ್ತು..! ಅವರಿಬ್ಬರ ಆಸೆಯಂತೆಯೇ ಎರಡು ವರ್ಷದ ನಂತರ ಮದುವೆ ಮಾಡಿದ್ರು..! ಇಬ್ಬರೂ ಬೆಂಗಳೂರಲ್ಲಿ ಚೆನ್ನಾಗಿ ಇದ್ರು..! ಜಾತಿ-ಮತ ಯಾವುದೂ ಅಡ್ಡಿ ಬರಲಿಲ್ಲ..!
ಮದುವೆಯಾಗಿ ವರ್ಷವಾಗಿತ್ತಷ್ಟೇ..! ಇಬ್ಬರ ನಡುವೆ ಸಣ್ಣ ಜಗಳ, ಸಂಸಾರ ಅಂದ್ಮೇಲೆ ಇದ್ದಿದ್ದೇ ಅಲ್ವಾ? ಆದರೆ ಅದೇ ದೊಡ್ಡದಾಗಿ, `ನಿನ್ನ ಕಟ್ಟಿಕೊಂಡು ತಪ್ಪು ಮಾಡಿದೆ ಅಂತ ಸ್ವಪ್ನ ಕೋಪದಲ್ಲಿ ಆಡಿದ ಮಾತು, ದಿವಿನ್ಗೆ ಚುಚ್ಚಿದಾಗ ನೀನೇ ಹಿಂದೆ ಬಿದ್ದು ಕಟ್ಟಿಕೊಂಡಿದ್ದು, ನಿನ್ನ ಅಪ್ಪ ಅಮ್ಮನೇ ಹೇಳಿ ಮದುವೆ ಮಾಡ್ಸಿದ್ದು ಎಂದಿದ್ದ..! ಹೀಗೆ ಜಗಳ ದೊಡ್ಡದಾಗಿರುವಾಗಲೇ ಯಾವತ್ತೂ ಫೋನ್ ಮಾಡದೇ ಇದ್ದ ಮಹಿಮಾ ದಿವಿನ್ ನಂಬರ್ ಗೆ ಫೋನ್ ಮಾಡ್ತಾಳೆ..!

ಅಂದು ಮಾತು ಬಿಟ್ಟವಳು ಇವತ್ತು ಫೋನ್ ಮಾಡಿರ್ತಾಳೆ..! ಅದನ್ನು ಗಮನಿಸಿದ ಸ್ವಪ್ನ ಅವರಿಬ್ಬರೂ ಮತ್ತೆ ಕಾಂಟ್ಯಾಕ್ಟ್ ನಲ್ಲಿದ್ದಾರಂತ ಅನುಮಾನ ಪಟ್ಟು ಮನೆ ಬಿಟ್ಟು ಹೇಳದೇ ಕೇಳದೆ ತವರೂರಿಗೆ ಹೋಗ್ತಾಳೆ..! ಅವಳನ್ನು ಹುಡುಕಿಕೊಂಡು ದಿವಿನ್ ಅವಳ ಮನೆಗೆ ಹೋಗ್ತಾನೆ. ಅಲ್ಲಿ ಅವರು ಹೊರಗೆಲ್ಲೋ ಹೋಗಿದ್ದಾರೆ, ಸ್ವಪ್ನ ಅಲ್ಲಿಗೆ ಬಂದಿದ್ದಾರಂತ ತಿಳಿದು ಭಯ ಕಡಿಮೆ ಆಗಿರುತ್ತೆ…! ಸ್ವಪ್ನಾಳ ದೊಡ್ಡಪ್ಪನ ಮನೆಯಲ್ಲಿ ಕಾಫಿ ಕುಡಿಯುತ್ತಿರುವಾಗ ಸ್ವಪ್ನ ಅವಳ ಅಪ್ಪ ಅಮ್ಮನ ಜೊತೆ ಬರ್ತಾಳೆ..! ಅವರ ಕಾರಿನ ಶಬ್ದ ಕೇಳಿ ದಿವಿನ್ ಸ್ವಪ್ನಳ ದೊಡ್ಡಪ್ಪನ ಮನೆಯಿಂದ ಆಚೆ ಬರ್ತಾನೆ..! ಅವನನ್ನು ಕಂಡು ಸ್ವಪ್ನ ಕೋಪಿಸಿಕೊಂಡು ಒಳಗೆ ಹೋಗ್ತಾಳೆ..! ಅವರ ಅಪ್ಪ-ಅಮ್ಮನೂ ಅಷ್ಟೇ..!? ಇವನು ಮನೆ ಜಗಳ ಪಕ್ಕಕ್ಕೆ ಗೊತ್ತಾಗ್ಬಾರ್ದಂತ ಅವರು ಕರೆಯದೇ ಇದ್ದರೂ ಮನೆಯೊಳಗೆ ಹೋದ..! ನಡೆದ ವಿಚಾರ ವಿವರಿಸಿದ್ರೂ ಅವರ ಅಪ್ಪ-ಅಮ್ಮ ಕೇಳಲು ತಯಾರಿರ್ಲಿಲ್ಲ..! ಅವಳ ಮಾತನ್ನೇ ನಂಬಿದ್ರು. ಸ್ವಲ್ಪ ಹೊತ್ತಿನ ನಂತರ ಬಂದ, ಸ್ವಪ್ನಳ ಅಣ್ಣ.. ದಿವಿನ್ನನ್ನು ಗೌರವದಿಂದಲೇ ಮಾತಾಡಿಸಿದ..! ಅವನ ಎದುರೇ ಅಪ್ಪ-ಅಮ್ಮ-ತಂಗಿಗೆ ಬುದ್ದಿ ಹೇಳಿದ..! ಆದರೂ ಪ್ರಯೋಜನ ಆಗಿಲ್ಲ..! ಬೇಜಾರಿಂದ ದಿವಿನ್ ಬೆಂಗಳೂರಿಗೆ ವಾಪಾಸ್ಸಾದ…! ಮಹಿಮಾಗೆ ಫೋನ್ ಮಾಡಿ ಬೈದ..! ಅವತ್ತು ಲವ್ ಮಾಡಿ ಮೋಸ ಮಾಡ್ದಿ ಇವತ್ತು? ನನ್ನ ಸಂಸಾರವನ್ನೇ ಹಾಳು ಮಾಡೋಕಂತ ಫೋನ್ ಮಾಡ್ದೀಯಾ? ಅವನ ಮಾತಿಂದ ಮಹಿಮಾಗೆ ಎಲ್ಲಾ ವಿಚಾರ ಗೊತ್ತಾಯ್ತು..! ಸ್ವಪ್ನಾಳ ಮನೆಗೇ ಹೋಗಿ, ಅವಳ ಅಪ್ಪ-ಅಮ್ಮ-ಅಣ್ಣ ಎಲ್ಲರ ಮುಂದೆಯೇ ಸ್ವಪ್ನಳಿಗೆ ” ನೋಡು ಸ್ವಪ್ನ, ಅವತ್ತು ನಾನು ನನ್ನ ಮದುವೆಗೆ ನಿಮ್ಮನ್ನು ಕರೆಯೋಕೆ ಫೋನ್ ಮಾಡಿದ್ದೆ..! ನಿನ್ನ ನಂಬರ್ ಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಅಂತ ಬಂದಿತ್ತು..! ಹಾಗಾಗಿ ದಿವಿನ್ ಗೆ ಕಾಲ್ ಮಾಡಿದೆ..! ಅದಿರಲಿ, ನೀನೂ ಅವನನ್ನು ಪ್ರೀತಿಸ್ತಾ ಇದ್ದೀ ಅಂತ ಗೊತ್ತಾದಾಗ, ನೀನು ಬೇಡಿಕೊಂಡ ಮೇಲೆ ನಾನು ಅವನಿಂದ ದೂರಾಗಿದ್ದು..! ನಾನೇ ಅವನನ್ನು ಲವ್ ಮಾಡಿದ್ರೆ ಜಾತಿ ಅಡ್ಡಿ ಆಗುತ್ತೇನೋ? ಮತ್ತೆ ಕಿರಿಕಿರಿ ಅಂತ ನಿನಗೆ ನನ್ನ ಪ್ರೀತಿ ತ್ಯಾಗ ಮಾಡಿದ್ದೆ..! ಆದ್ಯಾವುದೂ ಅವನಿಗೆ ಗೊತ್ತಿಲ್ಲ..! ಗೊತ್ತಾಗೋದು ಬೇಡ. ನಿನ್ನನ್ನು ತಪ್ಪಾಗಿ ತಿಳಿತಾನೆ..! ಅವನಿಗೆ ನನ್ನ ಮೇಲೆಯೇ ದ್ವೇಷವಿರಲಿ, ನಾನೀಗ ಅಪ್ಪ-ಅಮ್ಮ ನೋಡಿದ ಹುಡುಗನನ್ನು ಮದುವೆ ಆಗ್ತಾ ಇದ್ದೀನಿ ನೀನು ದಿವಿನ್ ಚೆನ್ನಾಗಿರಿ, ಕೋಪ ಬಿಟ್ಟು ಅವನಿದ್ದಲ್ಲಿಗೆ ಹೋಗು, ನನ್ನ ಮದುವೆ ಇಬ್ಬರೂ ಒಟ್ಟಾಗಿ ಬನ್ನಿ ಎಂದು ಹೇಳಿ ಹೊರಟು ಹೋದ್ಲು ಮಹಿಮಾ..!

ಸ್ವಪ್ನ ಮತ್ತು ಅವಳ ಅಪ್ಪ-ಅಮ್ಮನಿಗೂ ತಮ್ಮ ತಪ್ಪಿನ ಅರಿವಾಯ್ತು..! ತಕ್ಷಣವೆ, ಕಾರಿನಲ್ಲಿ ಬೆಂಗಳೂರಿಗೆ ಬಂದ್ರು..! ದಿವಿನ್ ಖುಷಿಯಿಂದ ಅವರನ್ನು ಬರ ಮಾಡಿಕೊಂಡ..! ಎಲ್ಲವನ್ನೂ ಮರೆತು, ಇವತ್ತು ದಿವಿನ್-ಸ್ವಪ್ನ ಚೆನ್ನಾಗಿದ್ದಾರೆ..!

ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ.!

ಕಾಳುಮೆಣಸಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ಈ ಕ್ರಿಕೆಟಿಗರ ಪತ್ನಿಯರು ಯಾವ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ….!

ಸ್ಯಾಂಡಲ್ ವುಡ್ ಈ ಸ್ಟಾರ್ ನಟಗೆ ಪತ್ನಿಯೇ ಕಿಡ್ನಿ ನೀಡಿದ್ದರು ..!

ನೀವು ಫೇಸ್ ಮಾಸ್ಕ್ ಧರಿಸ್ತಿದ್ದೀರಾ? ಹೇಗೆ ಧರಿಸ ಬೇಕು? ಹೇಗೆ ತೆಗೆಯಬೇಕು..? ಮಾಸ್ಕ್ ಬಳಕೆಗೂ ಕ್ರಮವಿದೆ…!

ನಿಮಗಿದು ಗೊತ್ತೇ? ಸ್ಪರ್ಶ ಸಿನಿಮಾದ ವಾಲ್ ಪೋಸ್ಟರ್ ಅಂಟಿಸಿದ್ದರು ಕಿಚ್ಚ…!

ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..!

ನಿಮ್ಮ ರಾಶಿ ಯಾವ್ದು? ನಿಮ್ಗೆ ಎಂಥಾ ಹೆಂಡ್ತಿ ಸಿಗ್ತಾಳೆ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

 

ಸಾಯುವ ಮುನ್ನ ನೀವು ನೀವಾಗಿ ಬದುಕಿ…!

ಯಾರಿಗೆ ಯಾರು ಜೋಡಿ…?

ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ‌

ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!

ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!

ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಪ್ರೀತಿ ನಿವೇಧಿಸಲಾಗದ ಪ್ರೇಮಿ..! ಪ್ರೀತಿಸುತ್ತಿರುವ ಹುಡುಗಿಗೆ ಐ ಲವ್ ಯೂ ಅನ್ನದೆ ಇರುವವರು ಓದಲೇ ಬೇಕಾದ ರಿಯಲ್ ಸ್ಟೋರಿ..!

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

 

 

 

LEAVE A REPLY

Please enter your comment!
Please enter your name here