No menu items!
3.8 C
Munich
Monday, May 18, 2026

22ರ ಹರೆಯದ ಯುವತಿ ಜೊತೆ ಮದುವೆಯಾದ 60 ವರ್ಷದ ವ್ಯಕ್ತಿ ; ಹೀಗೊಂದು ಪ್ರೇಮಕಥೆ

Must read

ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಅನ್ನೋ ಮಾತು ಬಿಹಾರದಲ್ಲಿ ಮತ್ತೊಮ್ಮೆ ಅಕ್ಷರಶಃ ನಿಜವಾಗಿದೆ. ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿರೋ 22 ವರ್ಷದ ಯುವತಿ ಮತ್ತು 60 ವರ್ಷದ ವೃದ್ಧನ ವಿಶಿಷ್ಟ ಪ್ರೇಮ ವಿವಾಹ ಈಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಇವರಿಬ್ಬರ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಣ್ಣು ಅರಳಿಸಿ ನೋಡುವಂತೆ ಮಾಡಿದೆ.

ಈ ರೋಚಕ ಪ್ರೇಮ ಕಥೆಯ ನಾಯಕ 60 ವರ್ಷದ ಸುಗ್ರಿಮ್ ಪಾಸ್ವಾನ್. ಈತನಿಗೆ ಕತಿಹಾರ್‌ನ ಮನಿಹರಿ ಬ್ಲಾಕ್‌ನ ಬಾಗ್ಮಾರ ಪಂಚಾಯತ್ ವ್ಯಾಪ್ತಿಯ ಪಕ್ಕದ ಬೋಲಿಯಾ ಗ್ರಾಮದ 22 ವರ್ಷದ ಯುವತಿಯ ಜೊತೆ ಪ್ರೇಮಾಂಕುರವಾಗಿತ್ತು. ಬರೋಬ್ಬರಿ 38 ವರ್ಷಗಳ ವಯಸ್ಸಿನ ಅಂತರವಿದ್ದರೂ ಇವರಿಬ್ಬರ ಮಧ್ಯೆ ಕಳೆದ ಎರಡು ವರ್ಷಗಳಿಂದ ಗುಟ್ಟಾಗಿ ಲವ್ ಅಫೇರ್ ನಡೀತಾ ಇತ್ತು. ವಿಷಯ ಯಾರಿಗೂ ಗೊತ್ತಾಗದಂತೆ ಇಬ್ಬರೂ ಸದ್ದಿಲ್ಲದೆ ಪ್ರೀತಿಯ ಹಕ್ಕಿಗಳಂತೆ ಓಡಾಡಿಕೊಂಡಿದ್ದರು.

ಆದರೆ, ಕಳೆದ ಬುಧವಾರ ರಾತ್ರಿ ಇವರಿಬ್ಬರ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ. ಗ್ರಾಮದ ಒಂದು ನಿರ್ಜನ ಪ್ರದೇಶದಲ್ಲಿ ಇಬ್ಬರೂ ಒಟ್ಟಿಗೆ ಇರುವುದನ್ನು ಕೆಲವು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದುಬಿಟ್ಟಿದ್ದಾರೆ. ಇಷ್ಟು ಕಡಿಮೆ ವಯಸ್ಸಿನ ಯುವತಿ, 60 ವರ್ಷದ ವೃದ್ಧನ ಜೊತೆ ಇರುವುದನ್ನು ನೋಡಿ ಆರಂಭದಲ್ಲಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ನೋಡನೋಡುತ್ತಿದ್ದಂತೆ ಇಡೀ ಊರಿನ ಜನ ಅಲ್ಲಿ ಜಮಾಯಿಸಿದ್ದು, ಇಬ್ಬರ ಪ್ರೇಮ ಪುರಾಣ ಬೀದಿಗೆ ಬಂದಿದೆ.

ವಿಷಯ ಗಂಭೀರವಾಗುತ್ತಿದ್ದಂತೆ ಗ್ರಾಮಸ್ಥರು ಇಬ್ಬರನ್ನೂ ಎಳೆದುಕೊಂಡು ಬಂದು ಪಂಚಾಯತ್ ಮುಂದೆ ನಿಲ್ಲಿಸಿದ್ದಾರೆ. ಅಲ್ಲಿ ಪಂಚಾಯತ್ ಸದಸ್ಯರು ಇಬ್ಬರನ್ನೂ ಬೇರೆ ಬೇರೆಯಾಗಿ ಕೂರಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಯಾರದ್ದಾದರೂ ಒತ್ತಡವಿದೆಯೇ? ಎಂದು ಕೇಳಿದ ಪ್ರಶ್ನೆಗೆ ಇಬ್ಬರೂ ಜಗ್ಗದೆ, ನಾವು ಒಬ್ಬರನ್ನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೇವೆ, ಒಟ್ಟಿಗೇ ಬದುಕುತ್ತೇವೆ ಎಂದು ಧೈರ್ಯವಾಗಿ ಎಲ್ಲರ ಸಮ್ಮುಖದಲ್ಲೇ ಒಪ್ಪಿಕೊಂಡಿದ್ದಾರೆ.

ಇವರಿಬ್ಬರ ಜಿದ್ದನ್ನು ನೋಡಿದ ಪಂಚಾಯತ್ ಮತ್ತು ಗ್ರಾಮಸ್ಥರು, ಜಗಳ ಅಥವಾ ವಿವಾದ ಮಾಡಿಕೊಳ್ಳುವ ಬದಲು ಒಂದು ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ. ಇಬ್ಬರಿಗೂ ಮದುವೆ ಮಾಡಿಸುವುದೇ ಸೂಕ್ತ ಎಂದು ತೀರ್ಮಾನಿಸಿ, ತಕ್ಷಣವೇ ಗ್ರಾಮದ ಸ್ಥಳೀಯ ದೇವಸ್ಥಾನದಲ್ಲಿ ಮದುವೆಗೆ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ದೇವಸ್ಥಾನದ ಒಳಗೆ ಮಂತ್ರಘೋಷಗಳ ಮೂಲಕ ಇಬ್ಬರಿಗೂ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಗಿದೆ.

ಇಡೀ ಗ್ರಾಮದ ಸಮ್ಮುಖದಲ್ಲಿ 60ರ ವೃದ್ಧ ಸುಗ್ರಿಮ್ ಪಾಸ್ವಾನ್, ತನ್ನ 22 ವರ್ಷದ ಪ್ರೇಯಸಿಯ ಹಣೆಗೆ ಸಿಂಧೂರ ಇಟ್ಟು, ಸಪ್ತಪದಿ ತುಳಿದು ಜೀವನಪೂರ್ತಿ ಜೊತೆಯಾಗಿ ಬಾಳುವ ಭಾಷೆ ಕೊಟ್ಟಿದ್ದಾನೆ. ಮದುವೆಯ ನಂತರ ಯುವತಿ ಗಂಡನ ಹೆಗಲ ಮೇಲೆ ಕೈಹಾಕಿಕೊಂಡು ದೇವಸ್ಥಾನದಿಂದ ಹೊರನಡೆದಿದ್ದಾಳೆ. ಈ ಅಪರೂಪದ ಕ್ಷಣವನ್ನು ಅಲ್ಲಿದ್ದ ಗ್ರಾಮಸ್ಥರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದು, ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಮದುವೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ, ನಾನು ಯಾವುದೇ ಒತ್ತಡಕ್ಕೆ ಮಣಿದು ಈ ನಿರ್ಧಾರ ಮಾಡಿಲ್ಲ, ಸ್ವಯಂಪ್ರೇರಣೆಯಿಂದ ನನ್ನಿಷ್ಟದಂತೆಯೇ ಮದುವೆಯಾಗಿದ್ದೇನೆ. ನಮ್ಮಿಬ್ಬರ ನಡುವೆ ಉತ್ತಮ ತಿಳುವಳಿಕೆಯಿದೆ, ಮುಂದಿನ ಜೀವನದ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಇತ್ತ ಸುಗ್ರಿಮ್ ಪಾಸ್ವಾನ್ ಕೂಡ, ಕೊನೆಗೂ ನನ್ನ ಎರಡು ವರ್ಷದ ಪ್ರೀತಿಗೆ ನ್ಯಾಯ ಸಿಕ್ಕಿದೆ ಎಂದು ಖುಷಿ ಹಂಚಿಕೊಂಡಿದ್ದಾನೆ. ಸದ್ಯ ಬಿಹಾರದ ಹಳ್ಳಿ ಹಳ್ಳಿಗಳಿಂದ ಹಿಡಿದು ಸಿಟಿಯ ಟೀ ಅಂಗಡಿಗಳವರೆಗೂ ಇವರಿಬ್ಬರ ಮದುವೆಯದ್ದೇ ಚರ್ಚೆ ನಡೀತಿದೆ.

- Advertisement -spot_img

More articles

- Advertisement -spot_img

Latest article