No menu items!
11.1 C
Munich
Wednesday, April 29, 2026

ಆ ವಿಡಿಯೋ ನಂದೇ ಎಂದ ರಮೇಶ್ ಜಾರಕಿಹೊಳಿ…ಲೇಡಿಯ ಮುಂದಿನ ನಡೆ?

Must read

ಲೈಂಗಿಕ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಲ್ಟಾ ಹೊಡೆದಿರುವುದು ಇದೀಗ ಸಾಕಷ್ಟು ಕುತೂಹಲಕ್ಕೆ ಗ್ರಾಸವಾಗಿದೆ. ಸಿ.ಡಿಯಲ್ಲಿದ್ದ ವ್ಯಕ್ತಿ ನಾನಲ್ಲ ಎನ್ನುತ್ತಿದ್ದ ರಮೇಶ್ ಇದೀಗ ಅದು ನಾನೇ ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ಈ ಮೂಲಕ ಪ್ರಕರಣ ತಿರುವು ಪಡೆದುಕೊಂಡಿದೆ. ಆದರೆ ಸಿ.ಡಿಯಲ್ಲಿದ್ದ ಸಂತ್ರಸ್ತೆ ಯುವತಿ ಏನು ಹೆಜ್ಜೆಯನ್ನು ಇಡುತ್ತಾರೆ ಎಂಬುವುದು ಕೂಡಾ ಭಾರೀ ಕುತೂಹಲಕ್ಕೆ ಗ್ರಾಸವಾಗಿದೆ.

ರಮೇಶ್ ಜಾರಕಿಹೊಳಿ ನನಗೆ ಸರ್ಕಾರಿ ಕೆಲಸದ ಅಮಿಷ ಒಡ್ಡಿ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪವನ್ನು ಸಂತ್ರಸ್ತೆ ಯುವತಿ ಮಾಡಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಡಿ ಬಹಿರಂಗವಾದ ಬಳಿಕ ಅಜ್ಞಾತವಾಗಿದ್ದ ಯುವತಿ ದಿಢೀರ್ ಪ್ರತ್ಯಕ್ಷಗೊಂಡು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಯನ್ನು ನೀಡಿದ್ದರು. ಅಲ್ಲದೆ ಎಸ್‌ಐಟಿ ತನಿಖೆಯೂ ಒಳಗಾಗಿದ್ದರು. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ತನ್ನನ್ನು ಕೆಲಸ ಆಮಿಷ ಒಡ್ಡಿ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದರು. ಅಲ್ಲದೆ ಗಿಫ್ಟ್‌ಗಳನ್ನು ನೀಡಿದ್ದರು. ಕೊನೆಯಲ್ಲಿ ನನ್ನ ಬಗ್ಗೆ ಅವಾಚ್ಯವಾಗಿ ನಿಂದನೆ ಮಾಡಿದ್ದರು ಎಂದೆಲ್ಲಾ ಉಲ್ಲೇಖಿಸಿದ್ದರು.

ಆದರೆ ಈ ಎಲ್ಲ ಆರೋಪವನ್ನು ನಿರಾಕರಿಸುತ್ತಲ್ಲೇ ಬಂದಿದ್ದ ರಮೇಶ್ ಜಾರಕಿಹೊಳಿ ಇದೀಗ ಕೊನೆಗೂ ಸಿಡಿಯಲ್ಲಿದ್ದ ವ್ಯಕ್ತಿ ನಾನೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಇದೊಂದು ಒಪ್ಪಿತ ಲೈಂಗಿಕ ಸಂಬಂಧ ಎಂದೂ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಪ್ರಕರಣವನ್ನು ಸಂಧಾನದಲ್ಲಿ ಮುಕ್ತಾಯಗೊಳಿಸುವುದು ಇದರ ಹಿಂದೆ ಉದ್ದೇಶ ಇದೆ ಎಂಬ ಮಾಹಿತಿಯೂ ಇದೆ.

ಆದರೆ ಇಲ್ಲಿ ಯುವತಿಯ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಈಗಾಗಲೇ ಯುವತಿ ರಮೇಶ್ ಜಾರಕಿಹೊಳಿ ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದು ಇದೀಗ ರಮೇಶ್ ಹೇಳಿಕೆಯ ಹಿನ್ನೆಲೆಯಲ್ಲಿ ಇದು ಸಮ್ಮತಿ ಕ್ರಿಯೆ ಎಂಬ ಅಭಿಪ್ರಾಯವನ್ನು ಯುವತಿ ಒಪ್ಪಿಕೊಳ್ಳುತ್ತಾರಾ ಎಂಬುವುದು ಮಹತ್ವ ಪಡೆದುಕೊಂಡಿದೆ. ಬಹುಷಃ ಅವರು ಕೂಡಾ ಇದು ಸಮ್ಮತಿ ಕ್ರಿಯೆ ಎಂದು ಒಪ್ಪಿಕೊಂಡಲ್ಲಿ ಪ್ರಕರಣ ಮುಕ್ತಾಯಗೊಳ್ಳುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಗಮನ ಯುವತಿಯ ಹೇಳಿಕೆಯ ಮೇಲೆ ನಿಂತಿದೆ ಎಂಬುವುದು ಸುಳ್ಳಲ್ಲ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article