No menu items!
16.3 C
Munich
Monday, July 27, 2026

ನೀಟ್ ಪ್ರತಿಭಟನೆ ವೇಳೆ AK-47 ನಿಂದ ಶೂಟೌಟ್: ಮೂವರಿಗೆ ಗಾಯ,ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾನ್ಸ್‌ಟೇಬಲ್ ಅಮಾನತು

Must read

ದೇಶಾದ್ಯಂತ ಭಾರೀ ಸದ್ದು ಮಾಡಿದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರತಿಭಟನೆಯ ದೃಶ್ಯಾವಳಿಗಳು ಈಗ ಒಂದೊಂದಾಗಿಯೇ ಹೊರ ಬರುತ್ತಿವೆ. ಪರೀಕ್ಷಾ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಯುವಜನತೆ ನಡೆಸುತ್ತಿದ್ದ ಪ್ರತಿಭಟನೆ ವೇಳೆ, ಪೊಲೀಸ್ ಅಧಿಕಾರಿಯೊಬ್ಬರು ಅಕ್ಷರಶಃ ರೊಚ್ಚಿಗೆದ್ದು AK-47 ರೈಫಲ್‌ನಿಂದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಭೀಕರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಉನ್ನತಾಧಿಕಾರಿಗಳು, ಗುಂಡು ಹಾರಿಸಿದ ಎಸ್‌ಐಟಿ (SIT) ಅಧಿಕಾರಿ ಅಭಿಷೇಕ್ ಪಟೇಲ್ ಅವರನ್ನು ಅಮಾನತುಗೊಳಿಸಿದ್ದಾರೆ.

‘ಬಿಹಾರ ಬಂದ್’ ವೇಳೆ ಉದ್ವಿಗ್ನ ಸ್ಥಿತಿ: ಪೊಲೀಸರು-ಪ್ರತಿಭಟನಾಕಾರರ ನಡುವೆ ರಣರಂಗ

ಸಿವಾನ್ ಜಿಲ್ಲೆಯಲ್ಲಿ ನಡೆದ ‘ಬಿಹಾರ ಬಂದ್’ ಸಂದರ್ಭದಲ್ಲಿ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ದೊಡ್ಡ ಮಟ್ಟದ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ನಿಯೋಜನೆಗೊಂಡಿದ್ದ ವಿಶೇಷ ತನಿಖಾ ತಂಡದ (SIT) ಭಾಗವಾಗಿದ್ದ ಅಧಿಕಾರಿ ಅಭಿಷೇಕ್ ಪಟೇಲ್, ಸಾರ್ವಜನಿಕವಾಗಿ AK-47 ಹಿಡಿದು ಗುಂಡಿನ ದಾಳಿ ನಡೆಸಿದ್ದಾರೆ. ಜನಸಮೂಹವನ್ನು ಚದುರಿಸಲು ಲಾಠಿಚಾರ್ಜ್, ಅಶ್ರುವಾಯು ಮತ್ತು ಜಲಫಿರಂಗಿ ಬಳಕೆಯ ನಡುವೆ, ನೇರವಾಗಿ ಮಾರಕಾಸ್ತ್ರ ಬಳಸಿ ಶೂಟ್ ಮಾಡಿರುವುದು ಆಡಳಿತ ಯಂತ್ರದ ಭದ್ರತಾ ವೈಫಲ್ಯವನ್ನು ಎತ್ತಿಹಿಡಿದಿದೆ.

ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದ 15 ವರ್ಷದ ಬಾಲಕನ ಕುತ್ತಿಗೆಗೆ ತಗುಲಿದ ಗುಂಡು

ಪೊಲೀಸ್ ಅಧಿಕಾರಿಯ ಈ ಹತಾಶೆಯಿಂದಾಗಿ ನಡೆದ ಗುಂಡಿನ ದಾಳಿಯಲ್ಲಿ ಒಟ್ಟು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 15 ವರ್ಷದ ಎಂಡಿ ಆರಿಫ್ ಎಂಬ ಅಮಾಯಕ ಬಾಲಕನೂ ಸೇರಿದ್ದಾನೆ. ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಬಂದ್ ವಾತಾವರಣ ಕಂಡು ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುತ್ತಿದ್ದಾಗ ದುರದೃಷ್ಟವಶಾತ್ ಆತನ ಕುತ್ತಿಗೆಗೆ ಗುಂಡು ತಗುಲಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಗುಂಡನ್ನು ಹೊರತೆಗೆದಿದ್ದಾರೆ. ಪ್ರಸ್ತುತ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ

ಸಿವಾನ್‌ನಲ್ಲಿ ನಡೆದ ಶೂಟೌಟ್‌ನಲ್ಲಿ ಗಾಯಗೊಂಡ ಮೂವರನ್ನು ತಕ್ಷಣವೇ ಉನ್ನತ ಚಿಕಿತ್ಸೆಗಾಗಿ ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ತಂಡ ಗಾಯಾಳುಗಳಿಗೆ ಸತತ ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರುಮಾಡಿದೆ. ಅಮಾಯಕ ಬಾಲಕ ಹಾಗೂ ಇತರ ಪ್ರತಿಭಟನಾಕಾರರ ಮೇಲಿನ ಈ ಮಾರಣಾಂತಿಕ ದಾಳಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ಭಯದ ವಾತಾವರಣ ಸೃಷ್ಟಿಸಿದೆ.

‘ವಿದ್ಯಾರ್ಥಿಗಳ ಮೇಲೆ ಎಸ್‌ಎಫ್‌ಒ/AK-47 ಬಳಕೆಯೇ?!’: ವೀಡಿಯೊ ಹಂಚಿಕೊಂಡು ತೇಜಸ್ವಿ ಯಾದವ್ ಕಿಡಿ

ಪೊಲೀಸ್ ಅಧಿಕಾರಿ AK-47 ಹಿಡಿದು ಗುಂಡು ಹಾರಿಸುತ್ತಿರುವ ವಿಡಿಯೋವನ್ನು ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸರ್ಕಾರವನ್ನು ತೀವ್ರವಾಗಿ ತಳೆದಿದ್ದಾರೆ. ನ್ಯಾಯ ಕೇಳಲು ರಸ್ತೆಗಿಳಿದ ವಿದ್ಯಾರ್ಥಿಗಳ ಮೇಲೆ ಈ ರೀತಿ ಅಸಂವಿಧಾನಿಕವಾಗಿ ಎಕೆ-47 ನಿಂದ ದಾಳಿ ಮಾಡುವುದು ಪ್ರಜಾಪ್ರಭುತ್ವದ ಕೊಲೆ” ಎಂದು ಕಿಡಿಕಾರಿರುವ ಅವರು, ಘಟನೆಗೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಪೆಲೆಟ್ ಗನ್, ಬಿಹಾರದಲ್ಲಿ AK-47: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಈ ಗಂಭೀರ ವಿಷಯವನ್ನು ದೆಹಲಿ ಅಂಗಳಕ್ಕೂ ಕೊಂಡೊಯ್ದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸರ್ಕಾರದ ಧೋರಣೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ದೆಹಲಿಯಲ್ಲಿ ತಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್‌ಗಳನ್ನು ಬಳಸಲಾಗುತ್ತಿದೆ, ಇತ್ತ ಬಿಹಾರದಲ್ಲಿ ಎಕೆ-47ಗಳಂತಹ ಮಾರಕಾಸ್ತ್ರಗಳನ್ನು ಪ್ರಯೋಗಿಸಲಾಗುತ್ತಿದೆ. ವಿದ್ಯಾರ್ಥಿಗಳ ಧ್ವನಿಯನ್ನು ಹತೋಟಿಗೆ ತರಲು ಸರ್ಕಾರ ಭಯೋತ್ಪಾದ ನಿಗ್ರಹಕ್ಕೆ ಬಳಸುವ ಆಯುಧಗಳನ್ನು ತರುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕ್ಯಾಮೆರಾದಲ್ಲಿ ಸೆರೆಯಾಯ್ತು ರಿವಾಲ್ವರ್ ಹಿಡಿದು ಹೆದರಿಸಿದ ವೀಡಿಯೋಗಳು

ಕೇವಲ ಎಕೆ-47 ಶೂಟಿಂಗ್ ಅಷ್ಟೇ ಅಲ್ಲದೇ, ಪ್ರತಿಭಟನಾ ಸ್ಥಳದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ತಮ್ಮ ಕೈಯಲ್ಲಿ ಬಹಿರಂಗವಾಗಿಯೇ ರಿವಾಲ್ವರ್ ಹಿಡಿದು ಸಾರ್ವಜನಿಕರನ್ನು ಬೆದರಿಸುತ್ತಿರುವ ದೃಶ್ಯಗಳು ಸಹ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ರಾಜ್ಯಾದ್ಯಂತ ಶೈಕ್ಷಣಿಕ ಭವಿಷ್ಯಕ್ಕಾಗಿ ಕಳಕಳಿ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿ ಸಂಘಟನೆಗಳ ಮೇಲೆ ಪೊಲೀಸರ ಈ ಅತಿಯಾದ ಬಲಪ್ರಯೋಗವೀಗ ರಾಜ್ಯ ಸರ್ಕಾರದ ಕೊರಳಿಗೆ ಉರುಳಾಗಿದ್ದು, ಬಿಹಾರದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

- Advertisement -spot_img

More articles

- Advertisement -spot_img

Latest article