No menu items!
15.7 C
Munich
Sunday, April 19, 2026

ಕುಂದಲಹಳ್ಳಿ ಬಳಿ ಭೀಕರ ಅಪಘಾತ, ತಪ್ಪಿದ ದುರಂತ: ಇಬ್ಬರಿಗೆ ಸಣ್ಣ ಗಾಯ

Must read

ಕುಂದಲಹಳ್ಳಿ ಬಳಿ ಭೀಕರ ಅಪಘಾತ, ತಪ್ಪಿದ ದುರಂತ: ಇಬ್ಬರಿಗೆ ಸಣ್ಣ ಗಾಯ

ಬೆಂಗಳೂರು: ನಗರದ ವರ್ತೂರು ಸಮೀಪದ ಕುಂದಲಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ತಪ್ಪಿದ ಘಟನೆ ನಡೆದಿದೆ. ಇದೇ ತಿಂಗಳ 18ರಂದು ಈ ಘಟನೆ ಸಂಭವಿಸಿದೆ.ಇಂಡಿಕೇಟರ್ ನೀಡದೇ ಸಾಗುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಇಬ್ಬರು ಬೈಕ್ ಸವಾರರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಬ್ಬರು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ರಸ್ತೆಯಲ್ಲಿ ಸ್ಪೀಡ್ ಬ್ರೇಕರ್‌ಗಳು (ಹಂಪ್ಸ್) ಇಲ್ಲದೇ ಇರುವುದೇ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ತಿಳಿದುಬಂದಿದೆ.ಈ ಘಟನೆ ಹೆಚ್.ಎ.ಎಲ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article