No menu items!
16.9 C
Munich
Monday, June 15, 2026

ಕೊರೊನಾಗೆ ತುಂಬು ಗರ್ಭಿಣಿ ಬಲಿ – ಮಗುವಿನ ಜೀವ ಉಳಿಸಿದ ವೈದ್ಯರು

Must read

ಬೆಂಗಳೂರು: ತುಂಬು ಗರ್ಭಿಣಿಯೊಬ್ಬರು ಕೋವಿಡ್​ ಸೋಂಕಿಗೆ ಬಲಿಯಾಗಿರುವ ಘಟನೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ನಡೆದಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯುವ ಮೂಲಕ ವೈದ್ಯರು ಕಾಪಾಡಿದ್ದಾರೆ.

ದೊಡ್ಡಬಳ್ಳಾಪುರ ಮೂಲದ ಅಶ್ವಿನಿ ಎಂಬ 8 ತಿಂಗಳ ತುಂಬು ಗರ್ಭಿಣಿ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಮೊದಲು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಆಕೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ದೊಡ್ಡಬಳ್ಳಾಪುರದ ಆಸ್ಪತ್ರೆ ದಾಖಲಿಸಲಾಗಿತ್ತು. ಅಲ್ಲಿಂದ ವೈದ್ಯರ ಸೂಚನೆಯಂತೆ ನಗರದ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಬೌರಿಂಗ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶ್ವಿನಿ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿದ್ದರಿಂದ, ವೈದ್ಯರು ಆಪರೇಶನ್ ಮಾಡಿ ಮಗುವನ್ನು ಹೊರತೆಗೆದಿದ್ದರು. ಇದಾದ, 3 ದಿನಗಳ ನಂತರ ಚಿಕಿತ್ಸೆ ಫಲಿಸದೆ ಅಶ್ವಿನಿ ಇಹಲೋಕ ತ್ಯಜಿಸಿದ್ದಾರೆ.

ಕೇವಲ ಹಸುಗೂಸು ಮಾತ್ರವಲ್ಲದೆ, ಮೃತ ಅಶ್ವಿನಿಯ 3 ವರ್ಷದ ಹೆಣ್ಣು ಮಗು ಕೂಡ ತಾಯಿಯನ್ನು ಕಳೆದುಕೊಂಡಿದೆ. ಇನ್ನೊಂದೆಡೆ ಹುಟ್ಟಿದ ಬಳಿಕ ತಾಯಿಯ ಜೊತೆ ಬೆಚ್ಚಗೆ ಮಲಗಬೇಕಿದ್ದ ಹಸುಗೂಸು ವೆಂಟಿಲೇಟರ್​​ನಲ್ಲಿ ಉಸಿರಾಡುತ್ತಿದೆ.

‘ನನ್ನ ಮಗಳ ಪರಿಸ್ಥಿತಿ ಯಾರಿಗೂ ಬರುವುದು ಬೇಡ. ಎಲ್ಲರೂ ಮನೆಯಲ್ಲೇ ಇರಿ, ಹೊರಗೆ ಓಡಾಡಬೇಡಿ. ಈಗಿನ ನನ್ನ ಪರಿಸ್ಥಿತಿ ಯಾವ ಶತ್ರುವಿಗೂ ಬರುವುದು ಬೇಡ’ ಎಂದು ಮಗಳನ್ನು ನೆನೆದು ಅಶ್ವಿನಿ ತಾಯಿ ಸರಸ್ವತಿ ಕಣ್ಣೀರಾದರು.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article