No menu items!
6.3 C
Munich
Friday, May 1, 2026

ಕೋಟಿ ಕೋಟಿ ದುಡ್ಡಿದ್ರೂ ಆತ ಕೂಲಿ ಆಗಿದ್ಹೇಕೆ?

Must read

ಕೋಟಿ ಕೋಟಿ ದುಡ್ಡಿದ್ರೂ ಆತ ಕೂಲಿ ಆಗಿದ್ಹೇಕೆ?

ಕೋಟ್ಯಾಧಿಪತಿ ತಂದೆಯೊಬ್ಬರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ ತಿಂಗಳ ಸಂಬಳಕ್ಕಾಗಿ ದುಡಿಯುವಂತೆ ಕೇರಳಕ್ಕೆ ಕಳುಹಿಸಿದ್ದಾರೆ!! ಆಶ್ಚರ್ಯವಾದರೂ ನೀವು ನಂಬಲೇ ಬೇಕು. ಹೌದು, ಇದು ಅಚ್ಚರಿಯನಿಸಿದರು ನಿಜ. ವಿಶ್ವದ ಸುಮಾರು 71 ದೇಶಗಳಲ್ಲಿ ಕಂಪನಿ ಹೊಂದಿರುವ ಸೂರತ್ ಮೂಲದ ಗುಜರಾತಿ ವಜ್ರ ವ್ಯಾಪಾರಿ ಸಾವಜಿ ಢೋಲಕಿಯ ಅವರು ತಮ್ಮ ಮಗನಾದ ದ್ರವ್ಯ ಢೋಲಕಿನ್ನು ತಿಂಗಳ ಸಂಬಳಕ್ಕೆ ದುಡಿಯಲು ಕಳುಹಿಸಿದ್ದರು.
ಅಮೆರಿಕದಲ್ಲಿ ಎಂಬಿಎ ವ್ಯಾಸಂಗ ಮಾಡಿದ ದ್ರವ್ಯ, ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿದ್ದರು. ಆದರೆ ಅವರ ತಂದೆ ರಜಾ ಅವಧಿಯಲ್ಲಿ ಎಲ್ಲಿಯಾದರೂ ಕೆಲಸ ಮಾಡು ಅಂತ ಹೇಳಿ, ಅಪ್ಪನ ಆಶಯಾದಂತೆ ದ್ರವ್ಯ ಡೋಲಕಿ 3 ಜೊತೆ ಬಟ್ಟೆ, 7000 ರೂಪಾಯಿ ಹಣದೊಂದಿಗೆ ಕೇರಳಕ್ಕೆ ಆಗಮಿಸಿ, ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಯಂತೆಯೇ ಕೂಲಿ ಮಾಡಿ ಕಷ್ಟ ಅರಿತುಕೊಂಡಿದ್ದಾರೆ.


ತಂದೆ ಸಾವಜಿ ಢೋಲಕಿಯ ಹೇಳುವಂತೆ “ನಾನು ನನ್ನ ಪುತ್ರನಿಗೆ ಮೂರು ಷರತ್ತುಗಳನ್ನು ವಿಧಿಸಿದ್ದು, ಎಲ್ಲಿಯೂ ಸಹ ನನ್ನ ಹೆಸರು ಬಳಸದೆ, ಫೋನ್ ಕೂಡ ಬಳಕೆ ಮಾಡದೆ ಒಂದೇ ಜಾಗದಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನ ಇರದೆ ಬೇರೆ ಬೇರೆ ಕಡೆ ಒಂದು ತಿಂಗಳು ಕೆಲಸ ಮಾಡಿ ಸಂಬಳ ಪಡೆದು ಮರಳಬೇಕು” ಎಂದು ಸಾಮಾನ್ಯ ಜನರ ಕಷ್ಟ, ಬವಣೆ ಅರಿತು ಹಣದ ಮೌಲ್ಯದ ಬಗ್ಗೆ ತಿಳುವಳಿಕೆ ಬರಲಿ ಎಂದು ಈ ರೀತಿ ಮಾಡಿರುವುದಾಗಿ ಹರೆ ಕೃಷ್ಣ ವಜ್ರ ವ್ಯಾಪಾರ ಕಂಪನಿ ಮಾಲೀಕ ಸಾವಜಿ ಢೋಲಕಿಯ ತಿಳಿಸುತ್ತಾರೆ.
ಮೊದ ಮೊದಲು ಕೆಲಸ ಸಿಗುತ್ತದೆ ಎಂಬ ಹುಮ್ಮಸ್ಸಿನಲ್ಲಿ ಇದ್ದ ದ್ರವ್ಯ ಢೋಲಕಿ 6 ದಿನಗಳಾದರೂ ಕೆಲಸ ಸಿಗದಿದ್ದಾಗ ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡಿ ದಿನಕ್ಕೆ 250 ರೂಪಾಯಿ ಬಾಡಿಗೆಯ ಲಾಡ್ಜ್ನಲ್ಲಿ ನೆಲೆಸಿ ಊಟಕ್ಕೆ ಪರದಾಡಿ ಕಡೆಗೂ ಕಷ್ಟ ಅಂದರೆ ಏನೆಂದು ಅರಿತುಕೊಂಡು ಬಳಿಕ ಸೂರತ್ನ ತನ್ನ ಮನೆಗೆ ವಾಪಸ್ಸಾದರು. ಶ್ರೀಸಾಮಾನ್ಯರು ಎದುರಿಸುವ ದೈನಂದಿನ ಬವಣೆಗಳನ್ನು ಚೆನ್ನಾಗಿ ಅರಿತರು.


ತಂದೆ ಸಾವಜಿ ಢೋಲಕಿಯ ಹೇಳಿದಂತೆ ಪುತ್ರ ದ್ರವ್ಯ ಢೋಲಕಿ ನಡೆದುಕೊಂಡಿದ್ದಾರೆ. ಬಡತನ, ಸಿರಿತನ ಏನು ಅನ್ನೊಂದನ್ನು ಚೆನ್ನಾಗಿ ಅರಿತಿದ್ಧಾರೆ. ಇಂದು ದೇಶ-ವಿದೇಶದಲ್ಲಿ ದ್ರವ್ಯ ಢೋಲಕಿ ತಮ್ಮ ತಂದೆಯ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇವರ ಉದ್ಯಮದಲ್ಲಿ ದುಡಿಯುತ್ತಿರುವವರನ್ನು ಕೂಡ ತಮ್ಮ ಸಂಬಂಧಿಗಳೆಂದು ಅವರಿಗೆ ಇರಲು ಮನೆ, ಓಡಾಡಲು ಕಾರು ನೀಡಿದ್ದಾರೆ.
ಅಳಾಗಿ ದುಡಿ ಅರಸನಾಗಿ ಬದುಕು ಎಂಬ ದೊಡ್ಡವರ ಮಾತಿನಂತೆ ನಡೆದಕೊಂಡ ಕೋಟ್ಯಾಧಿಪತಿ ಸಾವಜಿ ಢೋಲಕಿ ಅವರ ಪುತ್ರ ದ್ರವ್ಯ ಢೋಲಕಿ ನಡೆದುಕೊಂಡ ಪರಿ ನಿಜಕ್ಕೂ ಆದರ್ಶನೀಯ. ಯುವ ಜನರಿಗೆ ಸ್ಫೂರ್ತಿದಾಯಕ .

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article