No menu items!
13.9 C
Munich
Wednesday, April 29, 2026

ಜಾತಿ ಜಾತಿ ಎನ್ನುವ ನಟರ ಚಳಿ ಬಿಡಿಸಿದ ಡಿಬಾಸ್!

Must read


ಜಾತಿ ಪದ್ಧತಿ.. ಸದ್ಯ ಎಲ್ಲೆಡೆ ಹರಡಿಕೊಂಡಿರುವ ಈ ಒಂದು ಜಾತಿ ಪದ್ದತಿಯು ಜನರ ನಡುವೆ ಮುನಿಸು , ವಿವಾದ ಮತ್ತು ಜಗಳಗಳು ಉಂಟಾಗಲು ಕಾರಣವಾಗಿದೆ. ಹೌದು ಜಾತಿ ವಿಷಯದಿಂದ ಅನೇಕ ಸ್ನೇಹಿತರು ಕಿತ್ತಾಡಿಕೊಂಡಿದ್ದಾರೆ ಜಾತಿ ವಿಷಯದಿಂದ ಹಲವಾರು ಕುಟುಂಬಗಳು ಕಷ್ಟಕ್ಕೀಡಾಗಿವೆ. ಅಷ್ಟೇ ಅಲ್ಲದೆ ಜಾತಿಗಳಿಂದ ದೊಡ್ಡದೊಡ್ಡ ಜಗಳಗಳು ಕೊಲೆಯ ಮಟ್ಟವನ್ನು ಸಹ ತಲುಪಿವೆ. ಇಂತಹ ಜಾತಿ ವಿರುದ್ಧ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದನಿ ಎತ್ತಿದ್ದಾರೆ.

 

 

ಹೌದು ಹುಬ್ಬಳ್ಳಿಯಲ್ಲಿ ರಾಬರ್ಟ್ ಪ್ರೀ ರಿಲೀಸ್ ಇವೆಂಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾತನಾಡುವ ವೇಳೆ ಜಾತಿ ಜಾತಿ ಎಂದು ಹೇಳುವ ಜನರಿಗೆ ಟಾಂಗ್ ನೀಡಿದ್ದಾರೆ. ನಾವು ಜಾತಿ ಕಟ್ಟಿಕೊಂಡು ಇಲ್ಲ ನಾವು ಯಾವ ಜಾತಿಗೂ ಸೇರಿದವರಲ್ಲ ನಾವು ಕೇವಲ ಒಂದು ಧರ್ಮವನ್ನು ಗೌರವಿಸುತ್ತಿಲ್ಲ ಎಲ್ಲಾ ಧರ್ಮವನ್ನೂ ಗೌರವಿಸುತ್ತೇವೆ ಎಂದು ದರ್ಶನ್ ಅವರು ಹೇಳಿದರು. ನಾನು ಯಾವುದೇ ಒಂದು ಜಾತಿಗೋಸ್ಕರ ಹುಟ್ಟಿದವನಲ್ಲ , ಎಲ್ಲಾ ಜಾತಿ ಧರ್ಮದವರು ಹಾಕಿದ ಕೂಳಿನಿಂದ ನಾನು ಇವತ್ತು ಇದ್ದೇನೆ , ಅವರಿಂದಲೇ ನಾನು ಎಂದು ದರ್ಶನ್ ಅವರು ಹೇಳಿದರು ಆ ವಿಡಿಯೋ ಮುಂದೆ ಇದೆ ನೋಡಿ..

 

 

 

ನಾನು ಎಲ್ಲಾ ಧರ್ಮಕ್ಕೂ ಮತ್ತು ಎಲ್ಲ ಜಾತಿಗೆ ಸೇರಿದವನು ನಾನು ನಿರ್ದಿಷ್ಟ ಜಾತಿಗೆ ಮೀಸಲಲ್ಲ ಎಂದು ದರ್ಶನ್ ಅವರು ಹೇಳಿದರು. ಹಿಂದೂ ಮುಸ್ಲಿಮ್ ಕ್ರೈಸ್ತ ಎಲ್ಲಾ ಸಹ ಒಂದೇ ನಾನು ಎಲ್ಲ ಜನರಿಗೂ ಸಹ ಆಪ್ತ ಎಂದು ದರ್ಶನ್ ಅವರು ಈ ಮೂಲಕ ಜಾತಿ ಜಾತಿ ಎಂದು ಹೇಳಿಕೊಳ್ಳುವ ನಟರಿಗೆ ಟಾಂಗ್ ನೀಡಿದರು.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article