No menu items!
5.4 C
Munich
Thursday, April 30, 2026

ಜೂಜಾಟಕ್ಕೆ ಪತ್ನಿಯನ್ನೇ ಅಡವಿಟ್ಟ ಭೂಪ… ಇದು ಕಲಿಯುಗದ ಗಂಡನ ಕರ್ಮಕಾಂಡ..!

Must read

ನೀವು ಮಹಾಭಾರತದಲ್ಲಿ ಧರ್ಮರಾಯ ದ್ರೌಪದಿಯನ್ನು ಜೂಜಾಟದಲ್ಲಿ ಅಡವಿಟ್ಟ ಕಥೆಯನ್ನು ಕೇಳಿದ್ದೀರಿ. ಮಹಾಭಾರತದ ಆ ಘಟನೆಯನ್ನೇ ಹೋಲುವಂತೆ ಉತ್ತರ ಪ್ರದೇಶದಲ್ಲೊಂದು ಘಟನೆ ನಡೆದಿದೆ.
ಜೂಜಾಟ ಮತ್ತು ಮದ್ಯ ವ್ಯಸನಕ್ಕೆ ದಾಸನಾಗಿದ್ದ ವ್ಯಕ್ತಿ ತನ್ನಲ್ಲಿ ಹಣವಿಲ್ಲದೇ ಇರುವಾಗ ತನ್ನ ಪತ್ನಿಯನ್ನೇ ಅಡವಿಟ್ಟು ಜೂಜಾಡಿದ್ದಾನೆ..! ಆತ ಆಟದಲ್ಲಿ ಸೋತಿದ್ದರಿಂದ ಆತನ ಸ್ನೇಹಿತರು ಆತನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಘಟನೆ ನಡೆದ ನಂತರದಲ್ಲಿ ಸಂತ್ರಸ್ತೆ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾಳೆ.. ಆಗ ಆಕೆಯನ್ನು ಹಿಂಬಾಲಿಸಿದ ಗಂಡನೆಂಬ ಭೂಪ ನನ್ ತಪ್ಪಿನಿಂದ ಹಿಂಗಾಗಿದೆ.. ನನ್ನ ಕ್ಷಮಿಸು ಅಂತ ಆಕೆಯಲ್ಲಿ ಬೇಡಿಕೊಂಡಿದ್ದಾನೆ. ಆಗ ಆಕೆ ಅವನನ್ನು ಕ್ಷಮಿಸಿ.. ಅವನ ಕಾರಲ್ಲೇ ಮನೆಗೆ ಅವನೊಡನೆ ಹೊರಟಿದ್ದಾಳಂತೆ..! ಆಗಲೂ ತನ್ನ ಕೊಳಕು, ನೀಚ ಬುದ್ಧಿಯನ್ನು ಬಿಡದ ಭೂಪ ಪತಿರಾಯ ದಾರಿ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತನ್ನ ಸ್ನೇಹಿತರಿಗೆ ಆಕೆ ಮೇಲೆ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟಿದ್ದಾನಂತೆ..!


ನಂತರ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ..! ತನ್ನ ಪತಿಯ ಗೆಳೆಯರಾದ ಅರುಣ್ ಮತ್ತು ಸಂಬಂಧಿ ಅನಿಲ್ ಮದ್ಯಪಾನಕ್ಕೆ ಹಾಗೂ ಜೂಜಾಟಕ್ಕೆ ನಮ್ ಮನೆಗೆ ಬರ್ತಿದ್ರು. ಪತಿ ಜೂಜಾಟದಲ್ಲಿ ಸೋತಿದ್ದಕ್ಕೆ ನನ್ನ ಮೇಲೆ ಅತ್ಯಾಚಾರವೆಸಗಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾನೆ ಅಂತ ಕಂಪ್ಲೇಂಟ್ ಕೊಟ್ಟಿದ್ದಾರೆ. ಆದರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರ್ಲಿಲ್ಲ. ನಂತರ ಸಂತ್ರಸ್ತೆ ನ್ಯಾಯಲಯದ ಮೊರೆ ಹೋದಾಗ ಕೋರ್ಟ್ ಆದೇಶದಂತೆ ಜಪ್ಪರಾಬಾದ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆಂದು ವರದಿಯಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article