No menu items!
12.1 C
Munich
Saturday, September 12, 2026

ದಾಖಲೆ ಇಲ್ಲದ ಹಣ ಹಾಗೂ ಗೋಲ್ಡ್ ಸೀಜ್

Must read

ದಾಖಲೆ ಇಲ್ಲದ ಹಣ ಹಾಗೂ ಗೋಲ್ಡ್ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ತುಮಕೂರು: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯ ಪ್ರವೃತ್ತವಾಗಿರುವ ಚುನಾವಣಾ ಅಧಿಕಾರಿಗಳು, ದಾಖಲೆ ಇಲ್ಲದ ಹಣ ಹಾಗೂ ಗೋಲ್ಡ್ ಸೀಜ್ ಮಾಡಿದ್ದಾರೆ. ಖಾಸಗಿ ಬಸ್ ನಲ್ಲಿ ಸಾಗಿಸುವಾಗ ಹಣ ಮತ್ತು ಗೋಲ್ಡ್ ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶದ ಅನಂತಪುರ ಮೂಲದ ವಾಡ್ಲಾ ನಾಗಭೂಷಣ ಎಂಬಾತ ಸಾಗಿಸುತ್ತಿದ್ದ ಹಣ ಹಾಗೂ ಗೋಲ್ಡ್ ಸೀಜ್ ಸ ಮಾಡಲಾಗಿದೆ.
ಬೆಂಗಳೂರು ಕಡೆಯಿಂದ ತುಮಕೂರು ಮೂಲಕ ಬಂದಾಗ ಬಸ್ ಪರಿಶೀಲನೆ ವೇಳೆ ವ್ಯಕ್ತಿ ಸಿಕ್ಕಬಿದ್ದಿದ್ದಾನೆ. ತುಮಕೂರಿನ ಬಟವಾಡಿ ಚೆಕ್ ಪೊಸ್ಟ್ ನಲ್ಲಿ ಹಣ ವಶಕ್ಕೆ ಪಡೆಯಲಾಗಿದೆ. 14 ಲಕ್ಷದ 63,530 ರೂ ಹಣ ಹಾಗೂ 128 ಗ್ರಾಂ ಗೋಲ್ಡ್ ಅನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದು, ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

- Advertisement -spot_img

More articles

- Advertisement -spot_img

Latest article