No menu items!
7.8 C
Munich
Thursday, April 30, 2026

ಕಾಂಗ್ರೆಸ್ ನಾಯಕರ ಜೊತೆ ಆತ್ಮೀಯ ಸಂಬಂಧವಿದೆ: ವಿ ಶ್ರೀನಿವಾಸ್ ಪ್ರಸಾದ್

Must read

ಮೈಸೂರು: ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರ ಜೊತೆ ತಮಗೆ ಆತ್ಮೀಯ ಸಂಬಂಧವಿದೆ ಎಂದು ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿದರು. ನಗರದ ತಮ್ಮ ನಿವಾಸದಲ್ಲಿ ಮಾತಾನಾಡಿದ ಅವರು, ತಾನು ಸಂಸತ್ತಿಗೆ 6 ಬಾರಿ ಆಯ್ಕೆಯಾಗಿದ್ದು ಅರದಲ್ಲಿ 4 ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದಾಗಿ ಹೇಳಿದ ಅವರು ವಿಧಾನ ಸಭೆಗೂ ಎರಡು ಬಾರಿ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾಗಿದ್ದನ್ನು ನೆನಪು ಮಾಡಿಕೊಂಡರು. ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರ ಜೊತೆ ತಮಗೆ ಆತ್ಮೀಯ ಸಂಬಂಧವಿದೆ ಎಂದು ಪ್ರಸಾದ್ ಹೇಳಿದರು.
ತಾವು ರಾಜಕೀಯದಲ್ಲಿ ಅರ್ಧ ಶತಮಾನ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಕರೆ ಮಾಡಿ ಅಭಿನಂದಿಸಲಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು. ಇನ್ನೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳನ್ನು ಮತದಾನದ ಮೂಲಕ ಅಯ್ಕೆ ಮಾಡಬೇಕು ಮತ್ತು ಜನರು ತಮ್ಮ ಪ್ರತಿನಿಧಿಯನ್ನು ಮುಕ್ತವಾಗಿ ಅಂದರೆ ಯಾವುದೇ ಆಸೆ-ಆಮಿಶಗಳಿಗೆ ಒಳಗಾಗದೆ ಆರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಪ್ರಸಾದ್ ಹೇಳಿದರು.

- Advertisement -spot_img

More articles

- Advertisement -spot_img

Latest article