No menu items!
12.4 C
Munich
Wednesday, April 29, 2026

ದ್ರಾವಿಡ್ ಸಿನಿಮಾದಲ್ಲಿ ಕಿಚ್ಚ ಸುದೀಪ್

Must read

ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಅಜರುದ್ದೀನ್ ಅಂತವರ ಬಯೋಪಿಕ್ ಚಿತ್ರಗಳು ಬಾಲಿವುಡ್‌ನಲ್ಲಿ ಬಂದಿದೆ. ಈಗ ಬಂಗಾಳದ ಹುಲಿ ಸೌರವ್ ಗಂಗೂಲಿ ಅವರ ಬಯೋಪಿಕ್ ಘೋಷಣೆಯಾಗಿದೆ. ಈ ಕಡೆ ದಕ್ಷಿಣದಲ್ಲಿ ಕರ್ನಾಟಕದ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಬಯೋಪಿಕ್ ಮಾಡಬೇಕು ಎಂಬ ಚರ್ಚೆ ಆಗಾಗ ಕೇಳಿ ಬರುತ್ತಲೇ ಇದೆ. ಕೇವಲ ಕನ್ನಡ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ತಮಿಳು, ತೆಲುಗು ಇಂಡಸ್ಟ್ರಿಯಲ್ಲೂ ದ್ರಾವಿಡ್ ಬಯೋಪಿಕ್ ಬಗ್ಗೆ ಆಸಕ್ತಿ ವ್ಯಕ್ತವಾಗಿದೆ.

ಈ ನಡುವೆ ಕಿಚ್ಚ ಸುದೀಪ್ ಬಯೋಪಿಕ್ ಚಿತ್ರಕ್ಕೆ ಚಾಲನೆ ಕೊಡಬಹುದು ಎಂಬ ನಿರೀಕ್ಷೆಯೂ ಇದೆ. ಕ್ರಿಕೆಟ್ ಆಟದ ಜೊತೆ ಹೆಚ್ಚು ನಂಟು ಹೊಂದಿರುವ ಸುದೀಪ್, ದಿ ವಾಲ್ ಅವರ ಜೀವನ ಆಧರಿತ ಚಿತ್ರದಲ್ಲಿ ನಟಿಸುಬಹುದೇ, ನಟಿಸಲು ತಯಾರಿ ಮಾಡ್ತಿದ್ದಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಈಗ ದುಬೈನಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಣೆ ತೆರಳಿರುವ ಸುದೀಪ್ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದ್ದಾರೆ. ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಭಾರತ-ಪಾಕಿಸ್ತಾನ ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡುವುದಾಗಿ ಹೇಳಿದ್ದಾರೆ. ಹೀಗೆ, ಕ್ರಿಕೆಟ್ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಸುದೀಪ್, ದ್ರಾವಿಡ್ ಬಯೋಪಿಕ್‌ಗೆ ಸೂಕ್ತ ಆಯ್ಕೆ ಎನ್ನುವ ಅಭಿಪ್ರಾಯ ಇದೆ. ಮುಂದೆ ಓದಿ…

ಸಿಸಿಎಲ್, ಐಪಿಎಲ್, ವಿಶ್ವಕಪ್ ಹಾಗೂ ಚಂದನವನ ಕಪ್ ಸೇರಿದಂತೆ ಬಹಳಷ್ಟು ಕಡೆ ಕಿಚ್ಚ ಸುದೀಪ್ ಕ್ರಿಕೆಟ್ ಮೇಲಿನ ಆಸಕ್ತಿ ವ್ಯಕ್ತಪಡಿಸಿದ್ದಾರೆ. ತಾನೊಬ್ಬ ಉತ್ತಮ ಕ್ರಿಕೆಟ್ ಅಟಗಾರನಾಗಿದ್ದು, ರಾಷ್ಟ್ರೀಯ ತಂಡಕ್ಕೆ ಆಡಬೇಕು ಎಂಬ ಅಸೆಯನ್ನು ಸಹ ಹೊಂದಿದ್ದರು ಎಂದು ಖುದ್ದು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ದ್ರಾವಿಡ್ ಅವರ ಬಯೋಪಿಕ್ ವಿಚಾರ ಬಂದಾಗಲೆಲ್ಲಾ ಸುದೀಪ್ ಮಾಡಲಿ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರ್ತಿದೆ. ಆದರೆ, ಸುದೀಪ್ ಈ ಕುರಿತು ತಯಾರಾಗ್ತಿದ್ದಾರಾ? ನಿಜಕ್ಕೂ ಅವರಿಗೆ ದ್ರಾವಿಡ್ ಬಯೋಪಿಕ್ ಮಾಡುವ ಆಸೆ ಇದ್ಯಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article