No menu items!
11.1 C
Munich
Wednesday, April 29, 2026

ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲು; ದಿಢೀರ್ ಅನಾರೋಗ್ಯಕ್ಕೆ ಕಾರಣ?

Must read

ಚಂದನವನದ ಟಾಪ್ ನಟಿಯರಲ್ಲಿ ಒಬ್ಬರಾದ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಹೆಚ್ಚಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸದೇ ಇದ್ದ ರಚಿತಾ ರಾಮ್ ಇದೀಗ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ಇದಕ್ಕೂ ಮುನ್ನಾ ರಚಿತಾರಾಮ್ ನಟಿಸಿ ಬಿಡುಗಡೆಗೆ ಸಿದ್ಧವಿರುವ ಕೆಲ ಚಿತ್ರಗಳಿದ್ದರೆ, ಶೂಟಿಂಗ್ ಹಂತದಲ್ಲೇ ಅನೇಕ ಚಿತ್ರಗಳಿವೆ. ಹೀಗಿರುವಾಗಲೇ ರಚಿತಾರಾಮ್ ದಿಢೀರನೆ ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ಶೀತ ಜ್ವರ ಹಾಗೂ ಸುಸ್ತಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗೆ ಜ್ವರದ ಮಟ್ಟ ಏರಿಕೆಯಾಗಿದ್ದರಿಂದ ನಟಿ ರಚಿತಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹಾಗೂ ರಚಿತಾ ರಾಮ್ ಶೀಘ್ರದಲ್ಲಿಯೇ ಗುಣಮುಖರಾಗಲಿದ್ದು ಆದಷ್ಟೂ ಬೇಗ ಚಿತ್ರೀಕರಣ ಮತ್ತು ಚಿತ್ರದ ಪ್ರಮೋಷನ್ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ.

ಇನ್ನು ಲವಲವಿಕೆಯಿಂದ ಇದ್ದ ರಚಿತಾರಾಮ್ ದಿಢೀರನೆ ಅಸ್ವಸ್ಥರಾಗಲು ಕಾರಣ ಬಿಡುವಿಲ್ಲದೆ ಚಿತ್ರೀಕರಣ ಮತ್ತು ಚಿತ್ರದ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಎನ್ನಲಾಗುತ್ತಿದೆ. ಹೌದು, ನಟಿ ರಚಿತಾ ರಾಮ್ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಈ ವರ್ಷದ ಕೊನೆಯ ವಾರದಲ್ಲಿ ಬಿಡುಗಡೆಯಾಗುತ್ತಿರುವ ತಮ್ಮ ಅಭಿನಯದ ಲವ್ ಯೂ ರಚ್ಚು ಸಿನಿಮಾದ ಪ್ರಚಾರಕ್ಕಾಗಿ ಸಾಕಷ್ಟು ಸಮಯವನ್ನು ನೀಡಿದ್ದರು. ಹೀಗೆ ಚಿತ್ರೀಕರಣ ಮತ್ತು ಪ್ರಚಾರ ಎರಡರಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರಚಿತಾರಾಮ್ ತೀವ್ರ ಸೃಷ್ಟಿಗೆ ಒಳಗಾಗಿನಂತರ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article