No menu items!
15.9 C
Munich
Saturday, September 12, 2026

ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ: ಶ್ರೀರಾಮುಲು

Must read

ಗದಗ: ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿವಾಗಿದ್ದೆ. ಪ್ರಯತ್ನ ಮಾಡಿದ್ದೇ. ಆದರೆ ನನ್ನ ಪ್ರಯತ್ನ ಫಲಿಸಿಲ್ಲ. ಅದು ಆಗಲ್ಲ ಅಂತಾ ಗೊತ್ತಾಯಿತು ಎಂದು ಶ್ರೀರಾಮುಲು ಹೇಳಿದರು. ಗದಗನಲ್ಲಿಂದು ಸುದ್ದಿಗಾರದೊಂದಿಗೆ ಮಾತನಾಡಿದ ಶ್ರೀರಾಮುಲು, ಹೀಗಾಗಿ ಪ್ರಯತ್ನ ಕೈಬಿಟ್ಟೆ ಎಂದು ಪರೋಕ್ಷವಾಗಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಅಸೆಂಬ್ಲಿ ಎಲೆಕ್ಷನ್ ನಲ್ಲಿ ಸೋತ್ತಿದ್ದೇನೆ. ಹೀಗಾಗಿ ಪಾರ್ಟಿಯ ಕೆಲಸ ಮಾಡಿಕೊಂಡು ಹೋದ್ರೆ ಆಯಿತು ಅಂತ ಮಾಡಿದ್ದೆ. ಖಾಲಿ ಇದೇನಲ್ಲ ಅದಕ್ಕೆ ಪಕ್ಷದ ಕಾರ್ಯಕರ್ತರನಾಗಿ ದುಡಿಯುತ್ತೇನೆ. ಈಗ ಎಲೆಕ್ಷನ್ ಸಮಯ ಇದೆ. ಹೀಗಾಗಿ ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನದ ಗುಟ್ಟು ಬಿಟ್ಟ ಕೊಟ್ಟರು.

- Advertisement -spot_img

More articles

- Advertisement -spot_img

Latest article