No menu items!
20.3 C
Munich
Friday, August 21, 2026

ನಿಂತಿದ್ದ ಕಾರುಗಳಿಗೆ ಲಾರಿ ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು

Must read

ಹುಬ್ಬಳ್ಳಿ: ಇಂದು ಬೆಳಂ ಬೆಳಗ್ಗೆ ಅಪಘಾತ ಸಂಭವಿಸಿದೆ. ನಿಂತಿದ್ದ ಎರಡು ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಿನ ಜಾವ ಸಂಭವಿಸಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳಿಗಟ್ಟಿ ಕ್ರಾಸ್ ನ ಬಳಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಹಾಸನ ಮೂಲದ ಮೂವರು ಹಾಗೂ ಬೆಂಗಳೂರಿನ ಒಬ್ಬರು ಮೃತ ಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ.

ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ನಿಂತಿದ್ದಾಗ ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಶವಗಳನ್ನು ಹೊರ ತೆಗೆಯದ ಸ್ಥಿತಿಯಲ್ಲಿದೆ.
ಹೆದ್ದಾರಿ ಪೆಟ್ರೋಲಿಂಗ್ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.

- Advertisement -spot_img

More articles

- Advertisement -spot_img

Latest article