No menu items!
24.3 C
Munich
Tuesday, September 1, 2026

ಪಾಸ್‌ ಪೋರ್ಟ್ ರದ್ದಾಗುವ ಹಿನ್ನೆಲೆಯಲ್ಲಿ ಪ್ರಜ್ವಲ್‌ ರಾಜ್ಯಕ್ಕೆ ವಾಪಸ್: ಸಚಿವ ಜಿ.ಪರಮೇಶ್ವರ್

Must read

ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅತ್ಯಾಚಾರಗಳ ಆರೋಪಿ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ಬಳಿಕ ಕೊನೇಗೂ ಪ್ರತ್ಯಕ್ಷವಾಗಿದ್ದಾರೆ. ವಿದೇಶದಿಂದಲೇ ವಿಡಿಯೋ ಮೂಲಕ ಹೇಳಿಕೆ ಕೊಟ್ಟಿರುವ ಪ್ರಜ್ವಲ್ ನಾನೇ ಭಾರತಕ್ಕೆ ಬರುತ್ತೇನೆ ಎಂದಿದ್ದಾರೆ.. ಇನ್ನೂ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನ ಅಂತ್ಯವಾಗಲಿದೆ. ಸಂಸದ ಸ್ಥಾನ ಅಂತ್ಯವಾದರೆ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಕ್ಯಾನ್ಸಲ್ ಆಗಲಿದೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ತನಿಖೆಗಾಗಿ ಎಸ್‌ಐಟಿ ಎಲ್ಲ ಪ್ರಯತ್ನ ಮಾಡುತ್ತಿದೆ. ವಾರೆಂಟ್ ಮೂಲಕ ಕೇಂದ್ರ ವಿದೇಶಾಂಗ ಇಲಾಖೆಗೆ ತಿಳಿಸಿದ್ದೇವೆ. ಬ್ಲೂ ಕಾರ್ನರ್ ನೋಟಿಸ್ ಕೊಟ್ಟಿದ್ದೂ ಗೊತ್ತಿದೆ. ಆದರೀಗ ಅವರ ಪಾಸ್‌ ಪೋರ್ಟ್ ರದ್ದಾಗುವ ಹಿನ್ನೆಲೆಯಲ್ಲಿ ಎಲ್ಲವನ್ನೂ ತಿಳಿದು ವಾಪಸ್ ಬರುತ್ತೇನೆ ಅಂತಾ ವೀಡಿಯೋ ಮೂಲಕ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಅದೆನ್ನೆಲ್ಲಾ ನೋಡೋಣ. ಎಸ್‌ಐಟಿ ಅವರು ಗಮನಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article