No menu items!
21.7 C
Munich
Thursday, July 9, 2026

ಪ್ರೀತಿಗೆ ಪೋಷಕರ ವಿರೋಧ: ಮನನೊಂದು ಅಪ್ರಾಪ್ತೆ ಯುವತಿ ಆತ್ಮಹತ್ಯೆ

Must read

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲ ಅಪ್ರಾಪ್ತೆಯೊಬ್ಬಳು ತನ್ನ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಸಂಗೀತಾ (17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆಯಾಗಿದ್ದು, ಸಂಗೀತಾಗೆ ಕಾರ್ ಡ್ರೈವರ್ ಕೃಷ್ಣ ಎಂಬಾತನ ಜೊತೆಗೆ ಪ್ರೇಮಾಂಕುರವಾಗಿತ್ತು. ಈ ಹಿಂದೆ 2 ಬಾರಿ ಕೃಷ್ಣನ ಜೊತೆಗೆ ಈಕೆ ಮನೆಬಿಟ್ಟು ಹೋಗಿದ್ದಳು. ಆಗ ಹೆತ್ತವರು ಬುದ್ದಿವಾದ ಹೇಳಿ ಮನೆಗೆ ಕರೆತಂದಿದ್ದರು.
ಕೊನೆಗೆ ಮನನೊಂದು ಮನೆಯಲ್ಲಿಯೇ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿದ್ದ ಸೀರೆಯಿಂದ ನೇಣುಬಿಗಿದುಕೊಂಡು ಸಂಗೀತಾ ಸಾವಿಗೆ ಶರಣಾಗಿದ್ದಾಳೆ. ಈಕೆಯ ಮೃತದೇಹವನ್ನು ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪ್ರಾಪ್ತೆಯ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಆರೋಪಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article