No menu items!
13.9 C
Munich
Wednesday, April 29, 2026

ಪ್ರೇಮ್ ಜೊತೆ ದರ್ಶನ್ ಮುಂದಿನ ಚಿತ್ರ; ನಿಜನಾ, ಸುಳ್ಳಾ?

Must read

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಸಿನಿಮಾ ಬಳಿಕ ಯಾವ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಿರ್ಮಾಪಕ ರಾಕ್ ಲೈಕ್ ವೆಂಕಟೇಶ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಯಾವಾಗ? ನಿರ್ದೇಶಕ ಯಾರು? ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ.

 

ದರ್ಶನ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಎಂದು ಕುತೂಹಲ ಮೂಡಿಸಿರುವ ಬೆನ್ನಲ್ಲೇ ನಿರ್ದೇಶಕ ಪ್ರೇಮ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಬಂದ ಟ್ವೀಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಟ್ವೀಟ್ ನಲ್ಲಿ ದರ್ಶನ್ ಜೊತೆ ಮುಂದಿನ ಸಿನಿಮಾ ಮಾಡುವುದಾಗಿ ಪ್ರೇಮ್ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ದರ್ಶನ್ ಗೆ ಪ್ರೇಮ್ ನಿರ್ದೇಶನ ಮಾಡ್ತಾರೆ ಎನ್ನುವ ಸುದ್ದಿ ಹೊಸದಲ್ಲ. ಕಳೆದ ಎರಡು ವರ್ಷಗಳಿಂದ ಈ ಸುದ್ದಿ ಕೇಳಿಬರುತ್ತಿದೆ. ಆದರೀಗ ಪ್ರೇಮ್ ಹೆಸರಿನ ಖಾತೆಯಿಂದ ಬಂದಿರುವ ಟ್ವೀಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಮುಂದೆ ಓದಿ..

 

‘ಪ್ರತಿಯೊಬ್ಬರು ಮುಂದಿನ ಸಿನಿಮಾ ಯಾವುದು ಎಂದು ಕೇಳುತ್ತಿದ್ದೀರಿ. ಏಕ್ ಲವ್ ಯಾ ಬಳಿಕ ನಾನು ನನ್ನ ಗೆಳೆಯ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ. ಇವತ್ತು ಸಿನಿಮಾ ಘೋಷಣೆ ಮಾಡುತ್ತೇೆನೆ. ದರ್ಶನ್ ಅವರ 55ನೇ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ಮತ್ತು ಟೈಟಲ್ ಸದ್ಯದಲ್ಲೇ ಅನೌನ್ಸ್ ಮಾಡುತ್ತೆ’ ಎಂದು ಟ್ವೀಟ್ ಮಾಡಿ, ರಾಕ್ ಲೈನ್ ವೆಂಕಟೇಶ್ ಹೆಸರಿಗೆ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ನಿರ್ದೇಶಕ ಪ್ರೇಮ್ ಖಾತೆಯಿಂದ ಟ್ವೀಟ್ ಎಂದು ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿತ್ತು. ಈ ವೈರಲ್ ಆಗುತ್ತಿದ್ದಂತೆ ನಟಿ ರಕ್ಷಿತಾ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಚರ್ಚೆಗೆ ಬ್ರೇಕ್ ಹಾಕಿದ್ರು. ಇದು ಪ್ರೇಮ್ ಅವರ ನಕಲಿ ಟ್ವಿಟ್ಟರ್ ಖಾತೆ, ಈ ಟ್ವೀಟ್ ಮಾಡಿದ್ದು ಪ್ರೇಮ್ ಅಲ್ಲ ಎಂದು ರಕ್ಷಿತಾ ಸ್ಪಷ್ಟಪಡಿಸಿದ್ದಾರೆ.

ಟ್ವೀಟ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ರಕ್ಷಿತಾ, ‘ಇದು ಪ್ರೇಮ್ ಖಾತೆಯಲ್ಲ. ಯಾರು ಇದನ್ನೆಲ್ಲ ಹೇಳಿದ್ದಾರೋ ಅವರಿಗೆ ದೇವರು ಒಳ್ಳೆಯದು ಮಾಡಲಿ. ಸದ್ಯದಲ್ಲೇ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಇದು ನಿಜವಲ್ಲ’ ಎಂದು ಹೇಳಿದ್ದಾರೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article