No menu items!
12.4 C
Munich
Wednesday, April 29, 2026

ಬಿಗ್ ಬಾಸ್ ಜಯಶ್ರೀ ಇನ್ನಿಲ್ಲ!

Must read

ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಇಹ ಲೋಕವನ್ನು ತ್ಯಜಿಸಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ಜಯಶ್ರೀ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

 

ಬಿಗ್ ಬಾಸ್ ಮೂರನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ಅವರು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಎರಡು ಬಾರಿಯೂ ಸಹ ಜಯಶ್ರೀ ಅವರು ಸೂಕ್ತ ಚಿಕಿತ್ಸೆಯಿಂದ ಬದುಕುಳಿದರು. ಈ ಹಿಂದೆ ಒಮ್ಮೆ ಫೇಸ್ ಬುಕ್ ಲೈವ್ ಮುಖಾಂತರ ನಾನು ಸಾಯುತ್ತೇನೆ ಎಂದು ಜಯಶ್ರೀ ಅವರು ಹೇಳಿದ್ದರು. ಆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ಜಯಶ್ರೀ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿ ಜಯ ಶ್ರೀ ಅವರಿಗೆ ಸಮಾಧಾನ ಮಾಡಿ ಸರಿ ಮಾಡಿದ್ದರು.

 

 

ಆದರೆ ಈ ಬಾರಿ ಯಾವುದೇ ಸುಳಿವು ನೀಡದೇ ಜಯಶ್ರೀ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಜಯಶ್ರೀ ಅವರ ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುದು ಇದುವರೆಗೆ ತಿಳಿದುಬಂದಿಲ್ಲ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article