No menu items!
9.2 C
Munich
Friday, May 1, 2026

ಲಾಕ್ ಡೌನ್ ಉಲ್ಲಂಘಿಸಿ‌ ಜಾಲಿ ರೈಡ್ ಹೋದ ಪತಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ ..!

Must read

ಲಾಕ್ ಡೌನ್ ಉಲ್ಲಂಘಿಸಿ‌ ಜಾಲಿ ರೈಡ್ ಹೋದ ಪತಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ ..!

ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು , ಮಾರಣಾಂತಿಕ ವೈರಸ್ ವಿರುದ್ಧದ ಹೋರಟವಾಗಿ ಲಾಕ್ ಡೌನ್ ಮೊರೆ ಹೋಗಲಿದೆ . ಇಡೀ ದೇಶ ಸದ್ಯ ಲಾಕ್ ಡೌನ್ ಆಗಿದೆ .‌ ಕೊರೋನಾ ಹೆಮ್ಮಾರಿಯ ಮರಣಮೃದಂಗಕ್ಕೆ ಬ್ರೇಕ್ ಹಾಕಲು ಇದು ಅನಿವಾರ್ಯ . ಸಾಕಷ್ಟು ಸಂಕಷ್ಟ ಎದುರಾಗುತ್ತಿದ್ದರೂ ಕೊರೋನಾ ರಕ್ಕಸನ ನಿರ್ಣಾಮಕ್ಕೆ ಇದೊಂದೇ ಮಾರ್ಗ .

ಆದರೆ , ಕೆಲವರು ಲಾಕ್ ಡೌನ್ ಗೆ ಕ್ಯಾರೇ ಎನ್ನುತ್ತಿಲ್ಲ . ತಲೆ ಪ್ರತಿಷ್ಠೆ ಮಾಡುತ್ತಿರುವ ಅಂಥಾ ಅಧಿಕ ಪ್ರಸಂಗಿಗಳಿಗೆ ಖಾಕಿ ಪಡೆ ಬಿಸಿ ಮುಟ್ಟಿಸುತ್ತಿದೆ . ಆದರೂ ಕೆಲವರ ಮೊಂಡುತನಕ್ಕೆ ಬ್ರೇಕ್ ಬಿದ್ದಿಲ್ಲ .

ಇದೀಗ ಒಬ್ಬ ಅಂಥಾ ಅಧಿಕ ಪ್ರಸಂಗಿಗೆ ಆಕೆಯ ಪತ್ನಿಯೇ ಮೈ ಚಳಿ ಬಿಡಿಸಿದ್ದಾಳೆ . ಜಾಲಿ ರೈಡ್ ಹೋದ ಭೂಪನ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ ‌ .

ಹೌದು ಲಾಕ್ ಡೌನ್ ಉಲ್ಲಂಘಿಸಿ ಬೈಕಲ್ಲಿ ತಿರುಗಾಡುತ್ತಿದ್ದ ತಲೆಹರಟೆ ವ್ಯಕ್ತಿಗೆ ಆತನ ಪತ್ನಿ ಬಿಸಿ ಮುಟ್ಟಿಸಿದ್ದಾರೆ . ಲಾಕ್ ಡೌನ್ ಗೆ ಡೋಂಟ್ ಕ್ಯಾರ್ ಎಂದು ಜಾಲಿ ರೈಡ್ ಅಂತ ಬೈಕೇರಿ ಸುತ್ತುತ್ತಿದ್ದ ಮಹಾನುಭಾವನ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ .

ಈ ಸೋಜಿಗದ ಪ್ರಸಂಗ ನಡೆದಿರುವುದು ಕೇರಳದ ಎರ್ನಾಕುಲಂ ಜಿಲ್ಲೆಯ ಮೂವಾಟ್ಟುಪುಳದಲ್ಲಿ . ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಇದೆ ‌ . ಕೇರಳದಲ್ಲಿ ಕೊರೋನಾ ಹಾವಳಿ ಹೆಚ್ಚಿದೆ . ಈ ನಡುವೆ
ವ್ಯಕ್ತಿಯೊಬ್ಬ ತನಗೂ ಲಾಕ್ ಡೌನ್ ಗೂ ಸಂಬಂಧವಿಲ್ಲ ಎಂಬಂತೆ ಪ್ರತಿ ದಿನ ತನ್ನ ಪೋಷಕರ ಮನೆಗೆ ಬೈಕಲ್ಲಿ‌ ಓಡಾಡುತ್ತಿದ್ದ . ಮನೆಯಲ್ಲಿರೋದು ಬಿಟ್ಟು ಹೀಗೆ ಸುತ್ತುವ ಪತಿ ವಿರುದ್ಧ ಸಿಟ್ಟಾದ ಪತ್ನಿ ಸ್ಥಳೀಯ ಠಾಣಾಧಿಕಾರಿಗಳಿಗೆ ಕರೆ ಮಾಡಿ ,ಗಂಡ ಸುತ್ತಾಡುತ್ತಿದ್ದ ಬೈಕ್ ನೋಂದಣಿ ಸಂಖ್ಯೆ ನೀಡಿ ಲಾಕ್ ಡೌನ್ ಉಲ್ಲಂಘನೆ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದಾಳೆ .

ಮಹಿಳೆಯ ದೂರನ್ನು ಆಲಿಸಿದ ಪೊಲೀಸರು ಇದೊಂದು ಕೌಟುಂಬಿಕ ಕಲಹ ಇರಬಹುದು ಎಂದು ಮಹಿಳೆಯ ಮನವೊಲಿಸುವ ಪ್ರಯತ್ನ ಮಾಡಿದರು . ಆದರೆ, ಅದಕ್ಕೆ ಒಪ್ಪದ ಮಹಿಳೆ ಪತಿ ಹೊರಗಡೆ ಓಡಾಡುತ್ತಲೇ ಇದ್ದರೆ ಆತ ಕೂಡ ಕೊರೋನಾ ಸೋಂಕಿಗೆ ತುತ್ತಾಗಿ , ತನಗೂ ಸೋಂಕು ತಗುಲಬಹುದು . ಆದ್ದರಿಂದ ಆತನ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ . ಪತ್ನಿಯ ದೂರಿನ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪತಿರಾಯನಿಗೆ ಪೊಲೀಸರು ಆರಕ್ಷಕರು ನೋಟಿಸ್ ನೀಡಿದ್ದಾರೆ .

ಒಂದು ದೃಷ್ಟಿಯಲ್ಲಿ ಕೆಲವರು ಮಹಿಳೆಯ ವರ್ತನೆಯನ್ನು ಅತಿರೇಕ ಎನ್ನಬಹುದು .‌ ಆದರೆ ಇಂಥಾ ಸಂದರ್ಭದಲ್ಲಿ ಎಚ್ಚರ ಮುಖ್ಯ . ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು . ಸರ್ಕಾರ ಲಾಕ್ ಡೌನ್ ಘೋಷಿಸಿರುವುದು ತಮಾಷೆಗಲ್ಲ, ಬೇರೆ ಕೆಲಸ ಏನೂ ಇಲ್ಲ ಅಂತಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣ ಬೇಕು .

ಕೊರೋನಾ ಎಫೆಕ್ಟ್ : ಚ್ಯುಯಿಂಗ್ ಬ್ಯಾನ್ ಮಾಡಿದ ಸರ್ಕಾರ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article