ಸೋತು ಸುಮ್ಮನಾಗುವೆ ಹುಡುಗಾ… ಒಮ್ಮೆ ಮಾತನಾಡಿಸು ಬಾ!

0
825

ಹುಚ್ಚು ಕನಸುಗಳೆ ಇವು?

ಮುನಿಸೇಕೆ ನನ್ನೊಲವೇ
ಮದಿರೆ ಕಣ್ಗಳಾ ಚೆಲುವೆ
ಮುದ್ದು ಮಲ್ಲಿಗೆ ಹೂವೆ
ಮುನಿಸೇಕೆ ನನ್ನೊಲವೇ …
‌ ಹುಡುಗ.. ಕೋಪ ಬಂದಾಗಲೆಲ್ಲ ಹೀಗೆ ಹಾಡು ಹಾಡುತ್ತಲೇ ಮನ ಗೆದ್ದವನು ನೀನು. ಈ ಹಾಡಿನ ನೆನಪು ನನ್ನನ್ನೀಗ ಮತ್ತೆ ಮತ್ತೆ ಕೆಣಕುತ್ತಿದೆ. ಯಾವಾಗಲೂ ಆ ಸುಮಧುರ ದನಿಯಿಂದ ಉರುಳುವ ಪದಗಳ ಸವಿ ಇನ್ನೂ ನೆನಪಿನಿಂದ ಮಾಸಿಲ್ಲ. ಜೀವನ ಪೂರ್ತಿ ಮಾಸದಿರಲೆಂದು ಬಯಸಿದ್ದೇನೆ.
ನಿನ್ನ ಹಾಡು ಕೇವಲ ಹಾಡಾಗಿ ಕೇಳಿಸುತ್ತಿರಲಿಲ್ಲ. ಅದು ಪ್ರೀತಿಯ ದನಿಯಾಗಿತ್ತು. ಮನಸ್ಸು ಪೂರ್ತಿ ಮಾಗಿದೆ, ಕೊಟ್ಟುಬಿಡಲೇ? ನಿನ್ನನ್ನು ಒಪ್ಪಿಬಿಡಲೇ? ಎಂದು ಹೃದಯ ಪ್ರಶ್ನೆ ಒಡ್ಡಿದೆ.
ಈಗೀಗ ಹಾಗೆ, ಸಂಜೆಯ ತಂಪಾದ ಗಾಳಿಗೆ ಆಕಾಶವನ್ನು ನೋಡುತ್ತಾ ಒಬ್ಬಳೇ ನಗುತ್ತೇನೆ. ಹೂವಿನ ಅಂದಕ್ಕೆ ನಾಚಿ ದಿನವೂ ಗಿಡಗಳಿಗೆ ನೀರೆರೆಯುತ್ತ ಸಣ್ಣ ದನಿಯಲ್ಲಿ ಹಾಡುತ್ತೇನೆ. ಮಳೆಯಲ್ಲಿ ಮನ ತುಂಬಿ ಖುಷಿಯಿಂದ ಕುಣಿಯುತ್ತೇನೆ. ಗೊತ್ತಿಲ್ಲದೇ, ನನಗೆ ಈಗೀಗ ಏನೋ ಆಗಿದೆ.
ಚಂದಿರನ ನೋಡಿ ಪಿಸು ಮಾತಾಡುವ ಹಂಬಲ. ಚಂದಿರನ ಬೆಳಕಿಗೆ ನಾಚಿದಂತನಿಸುತ್ತೆ ಕೆಲವೊಮ್ಮೆ. ನಕ್ಷತ್ರಗಳ ನೋಡುತ್ತ ಕಾಲ ಕಳೆಯುತ್ತಿರುವೆ. ಕನಸು ಈಗೀಗ ಬಂದು ಬಾಗಿಲ ಬಡಿದಂತಿದೆ. ಹುಚ್ಚು ನೆಪ ತೋರಿ ಎಚ್ಚೆತ್ತು ಕುಳಿತಾಗ ಕಂಡಿದ್ದು ಕನಸು. ನೆಪ ಒಡ್ಡಿ ಕನಸು ಕರೆದರೂ, ನೀನಿಲ್ಲದ ಕ್ಷಣ ವಾಸ್ತವ. ಬೇಸರದ ಛಾಯೆ ಮುಖದಲ್ಲಿದ್ರೂ ಸಹ ವಾಸ್ತವಕ್ಕೆ ಬಾಗಲೇಬೇಕಲ್ವೇ.
ಮಂದಿರದ ಬಯಲಿನಲ್ಲಿ ಕಾಯುತ್ತಾ ನಿಂತಿದ್ದೇನೆ ನಿನಗಾಗಿ. ಮಿಂಚು ನಗೆಗೆ ನಾ ಸೋತಿಹೆನು ಎಂದು ಖಚಿತವಾಗಿದೆ. ಪ್ರೀತಿ ಕತೆ ಚಿಗುರೊಡೆದಿದೆ. ನಿನ್ನ ನೆನಪಿನ ಗಾಳಿ ಸೋಕಿದರೆ ಒಮ್ಮೆಲೆ‌ ಮನ ಬಿಚ್ಚಿ ಹಾಡಿದಂತೆ, ನೀ ಬಂದು ಎದುರು ನಿಂತರೆ ಹಾಡಿನಲಿ ಶೃತಿ ಸೇರಿ ಗಾಳಿಯೇ ನಾಚಿದಂತೆ. ನೆಪಕ್ಕಾದ್ರೂ ಒಮ್ಮೆ ನೋಡಬೇಕು ನಿನ್ನನ್ನು. ಒಮ್ಮೆ ಮಾತನಾಡಿಸು ಸಾಕು. ಸೋತು ಸುಮ್ಮನಾಗುವೆ ಪ್ರಿಯಾ.

ಶ್ರುತಿ ಹೆಗಡೆ ಹುಳಗೋಳ

ಜುಮುಕಿಯ ಚಮಕ್‌ಗೆ ಹೃದಯ ಜಾರಿ ಬಿತ್ತು!

ನಾನೇ ಯಾಕೆ ಪ್ರಪೋಸ್ ಮಾಡ್ಬೇಕು? ಅವ್ಳು ಯಾಕೆ ಮಾಡಲ್ಲ?

ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?

ನಿನ್ನ ಆ ಸ್ಪರ್ಷಕ್ಕೆ ನನ್ನ ಮೈಮನ ಕರಗಿ ಹೋಗಲಿ!

ನೆಪ ಹೂಡಿ ಬರುವ ಹಳೆಯ ನೆನಪುಗಳ ತಡೆಯಬಹುದೇ?

ಏನಿದು ವೈಟಲ್ ವೇಸ್ಟ್..? ಮಿಸ್ ಮಾಡ್ದೇ ಓದಲೇ ಬೇಕಾದ ಸ್ಟೋರಿ…ಯಾಕಂದ್ರೆ?

ಅವಳ ಪ್ರೀತಿಗಾಗಿ ಐದು ವರ್ಷ ಕಾದ..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

LEAVE A REPLY

Please enter your comment!
Please enter your name here