ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!

Must read

ಆಂಧ್ರ ರಾಜ್ಯದ ಯಾವುದೇ ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಪಡೆದುಕೊಂಡ್ರೆ ಅವರಿಗೆ 100 ಕೋಟಿ ನಗದು ಬಹುಮಾನ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದ ವಿಜ್ಞಾನಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ..! ತಿರುಪತಿಯಲ್ಲಿ ಈ ರೀತಿಯ ಘೋಷಣೆ ಮಾಡಿರುವ ಅವರು ವಿಜ್ಞಾನಿಗಳು ಇದನ್ನು ಸವಾಲಾಗಿ ಸ್ವೀಕರಿಸಿ ಎಂದು ಕರೆ ನೀಡಿದ್ದಾರೆ. ಭಾರತದಲ್ಲಿ ಪ್ರತಿಭಾವಂತ ವಿಜ್ಞಾನಿಗಳಿದ್ರೂ ಯಾರಿಗೂ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ. ಹೀಗೆ ಸಿಕ್ಕಿದವರೆಲ್ಲರೂ ಈಗ ಭಾರತದಲ್ಲಿ ನೆಲೆಸಿಲ್ಲ. ಹೀಗಾಗಿ ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಲು ನಾನು ಈ ಘೋಷಣೆ ಮಾಡಿದ್ದೇನೆ. ಇದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಅವರು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಬಹುಮಾನ ನೀಡುವ ಪದ್ದತಿ ನಮ್ಮ ದೇಶದಲ್ಲಿಲ್ಲ. ಕ್ರೀಡಾ ಸಾಧಕರಿಗೆ ಬಹುಮಾನ ನೀಡುವ ಪದ್ದತಿ ಇದೆ. ಆದ್ರೆ ನಾನು ಕೈಗೊಂಡಿರುವ ನಿರ್ಧಾರ ಎಲ್ಲಾ ಕ್ಷೇತ್ರಕ್ಕೂ ಮೀರಿಸುವಂತಹದ್ದು. ಒಂದು ವೇಳೆ ನಮ್ಮ ರಾಜ್ಯದ ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಪಡೆದುಕೊಂಡ್ರೆ ನೂರು ಕೋಟಿ ಬಹುಮಾನ ನೀಡುವುದಾಗಿ ಚಂದ್ರಬಾಬು ನಾಯ್ಡು ಶಪತ ಮಾಡಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?

ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!

ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

- Advertisement -spot_img

More articles

- Advertisement -spot_img

Latest article