No menu items!
11.1 C
Munich
Wednesday, April 29, 2026

11ರ ಪೋರ 8 ಮಕ್ಕಳ ಪ್ರಾಣರಕ್ಷಿಸಿದ ಧೀರ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕ..!

Must read

ಸುದ್ದಿ ಹಳೆಯದೇ..ಆದರೆ ನಿಜಕ್ಕೂ ಸ್ಪೂರ್ತಿದಾಯಕ..! ನೀವು ಈ ಮೊದಲೇ ಈ ಸ್ಟೋರಿಯನ್ನು ಎಲ್ಲೋ ಓದಿದ್ದರೆ ಸಂತೋಷ, ಓದದೇ ಇದ್ದರೆ ಈಗ ಓದ್ತಾ ಇದ್ದೀರಂತ ಖುಷಿ ಪಡಿ..! ಎರಡೇ ಎರಡು ನಿಮಿಷ ಬಿಡು ಮಾಡ್ಕೊಂಡು ಈ ಸ್ಟೋರಿ ಓದಿದ್ರೆ ಖಂಡಿತಾ ವಿಶ್ವದ ಮೂಲೆ ಮೂಲೆಗೂ ಸ್ಟೋರಿ ತಲುಪುವಂತೆ ಶೇರ್ ಮಾಡಿಯೇ ಮಾಡ್ತೀರ..! ಕಾರಣ, ಇದು 11 ವರ್ಷದ ಭಾರತೀಯ ಪುಟ್ಟ ಹುಡುಗನ ಸಾಹಸ..!
ಈ ಸಾಹಸಿ ಬಾಲಕನ ಹೆಸರು ಓಂ ಪ್ರಕಾಶ್..! ರಾಜಸ್ತಾನ್ದ ರೈತರೊಬ್ಬರ ಮಗ. ಅದು 2010 ಸೆಪ್ಟೆಂಬರ್04. ಹನ್ನೊಂದು ವರ್ಷದ ಹುಡುಗ ಓಂ ಪ್ರಕಾಶ್ ಹಾಗೂ ಅವನ ಸಹಪಾಠಿಗಳು ಮಾರುತಿ ವ್ಯಾನ್ನಲ್ಲಿ ಶಾಲೆಗೆ ಹೋಗ್ತಾ ಇರ್ತಾರೆ. ಆಗ ಇದ್ದಕ್ಕಿದ್ದಂತೆ ಹಠಾತ್ ವ್ಯಾನಿಗೆ ಬೆಂಕಿ ಹತ್ತುತ್ತೆ..! ಶಾರ್ಟ್ ಸರ್ಕ್ಯೂಟ್ ನಿಂದ ಅಪಘಾತ ಸಂಭವಿಸುತ್ತಿದ್ದಂತೇ ಕಾರಿನ ಚಾಲಕ ತಡಮಾಡದೇ ತನ್ನ ಕಡೆಯ ಡೋರ್ ಅನ್ನು ತೆಗೆದು ಅಲ್ಲಿಂದ ಕಾಲ್ಕೀಳುತ್ತಾನೆ..! ಮಕ್ಕಳನ್ನು ಕಾಪಡಲು ಪ್ರಯತ್ನಿಸದೇ ತನ್ನ ಪ್ರಾಣವನ್ನು ಉಳಿಸಿಕೊಳ್ಳೋಕೆ ಓಡ್ತಾನೆ..! ಆದರೆ ಹನ್ನೊಂದರ ಪೋರ ಪ್ರಕಾಶ್ ಹಾಗೆ ಮಾಡಲ್ಲ..! ತನ್ನ ಜೀವವವನ್ನೇ ಒತ್ತೆಯಾಗಿಟ್ಟು ಜೊತೆಗಾರರಜೀವ ಉಳಿಸ್ತಾನೆ..! ವ್ಯಾನ್ನ ಬಾಗಿಲನ್ನು ಮುರಿದು ಬೇರೆ ವಿದ್ಯಾರ್ಥಿಗಳನ್ನು ಅಲ್ಲಿಂದ ಹೊರ ದಬ್ಬುತ್ತಾನೆ..! ಬೇರೆ ವಿದ್ಯಾರ್ಥಿಗಳನ್ನು ಕಾಪಾಡುವಾಗ ಈತ ಮುಖ ಮತ್ತು ಹಿಂಬದಿಗೆ ಬೆಂಕಿ ತಗುಲುತ್ತೆ..! ಅದನ್ನೂ ಲೆಕ್ಕಿಸದೇ ಎಂಟು ಮಕ್ಕಳ ಜೀವ ಉಳಿಸುತ್ತಾನೆ..! ಈತನ ಸಾಹಸ ದೈರ್ಯಕ್ಕೆ ಸಂಜಯ್ ಚೋಪ್ರಾ ಅವಾರ್ಡ್ ಲಭಿಸಿದೆ. ಈತನ ಈ ಸಾಹಸ ಹಿಂದೊಮ್ಮೆ ಓದಿ ತಿಳಿದಿದ್ದೇ.. ಇವತ್ತೂ ಏನೋ ಹುಡುಕುತ್ತಿರುವಾಗ ಮತ್ತೆ ಈತನ ಮುಖದರ್ಶನವಾಯಿತು (ಫೋಟೋ ಸಿಕ್ಕಿತು) ಗೊತ್ತಿಲ್ಲದೇ ಇರೋರು ಈತನ ಬಗ್ಗೆ ಗೊತ್ತು ಮಾಡಿಕೊಳ್ಳಲಿ, ಗೊತ್ತಿರೋರು ಎಲ್ಲರಿಗೂ ಗೊತ್ತುಪಡಿಸುತ್ತೀರಿ ಎಂಬ ಆಶಯದೊಂದಿಗೆ ಈತನ ಸಾಹಸವನ್ನು ಇಲ್ಲಿ ನೆನಪು ಮಾಡಿಕೊಳ್ಳುತ್ತಿರುವೆ..! ತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ಸಹಪಾಠಿಗಳ ಪ್ರಾಣ ಉಳಿಸಿದ ಕೆಚ್ಚೆದೆಯ ಬಾಲಕನಿಗೊಂದು ಸೆಲ್ಯೂಟ್..!

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article