No menu items!
12.1 C
Munich
Wednesday, May 20, 2026

ಹುಬ್ಬಳ್ಳಿ ಮೇಲೆ ಲವ್ ಜಿಹಾದ್ ಕಾರ್ಮೋಡ ; ರೂಮ್‌ನಲ್ಲಿ ಯುವತಿ ಜೊತೆ ಸಿಕ್ಕಿಬಿದ್ದ ಸಾಜಿದ್‌ಗೆ ಬಿತ್ತು ಧರ್ಮದೇಟು

Must read

‘ಛೋಟಾ ಮುಂಬೈ’ ಎಂದೇ ಹೆಸರಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ತಿಂಗಳಷ್ಟೇ ನಡೆದಿದ್ದ ಲವ್ ಜಿಹಾದ್ ಆರೋಪದ ಕಿಡಿ ಇನ್ನು ಪೂರ್ಣವಾಗಿ ಆರಿಯೇ ಇಲ್ಲ. ಅಷ್ಟರಲ್ಲೇ ನಗರದಲ್ಲಿ ಮತ್ತೊಂದು ಭೀಕರ ‘ಲವ್ ಜಿಹಾದ್’ ಆರೋಪ ಕೇಳಿಬಂದಿದ್ದು, ಇಡೀ ನಗರ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ಹಿಂದೂ ಯುವತಿಯೊಬ್ಬಳನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದ ಮುಸ್ಲಿಂ ಯುವಕನಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದು, ಸದ್ಯ ಈ ಹಲ್ಲೆಯ ವಿಡಿಯೋ ಹಾಗೂ ಘಟನೆ ಹುಬ್ಬಳ್ಳಿಯಲ್ಲಿ ಭಾರೀ ಸಂಚಲನ ಮೂಡಿಸಿದೆ.

ಈ ಹೈಡ್ರಾಮಾ ನಡೆದಿರೋದು ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿ. ಇಲ್ಲಿನ ನಿವಾಸಿ ಸಾಜಿದ್ ಉಣಕಲ್ ಎಂಬ ಯುವಕ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ, ಕಂಪ್ಲೀಟ್ ಬ್ರೈನ್ ವಾಶ್ ಮಾಡಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಲರ್ಟ್ ಆದ ಬಜರಂಗದಳ ಹಾಗೂ ಇತರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ಸಾಜಿದ್ ಮನೆ ಮೇಲೆ ಮುಗಿಬಿದ್ದಿದ್ದಾರೆ.

ಹಿಂದೂ ಕಾರ್ಯಕರ್ತರು ಸಾಜಿದ್ ಮನೆಗೆ ನುಗ್ಗಿದಾಗ ಇಬ್ಬರೂ ಕೋಣೆಯೊಂದರ ಒಳಗೆ ಜೊತೆಯಾಗಿ ಇದ್ದದ್ದನ್ನು ಕಂಡು ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿದೆ. “ಯುವತಿಯನ್ನು ಬ್ರೈನ್ ವಾಶ್ ಮಾಡಿ ತಂದಿದ್ದಷ್ಟೇ ಅಲ್ಲದೆ, ಆಕೆಗೆ ಏನೋ ಮಾದಕ ವಸ್ತು (ಡ್ರಗ್ಸ್) ನೀಡಿ ಪ್ರಜ್ಞೆ ತಪ್ಪಿಸಿ, ಲೈಂಗಿಕ ದೌರ್ಜನ್ಯ ಎಸಗಲು ಈತ ಸಂಚು ರೂಪಿಸಿದ್ದ” ಎಂದು ಹಿಂದೂ ಸಂಘಟನೆಯ ಮುಖಂಡರು ಅತ್ಯಂತ ಗಂಭೀರವಾಗಿ ಆರೋಪಿಸಿದ್ದಾರೆ.

ಕೋಣೆಯೊಳಗೆ ಸಾಜಿದ್ ಸಿಕ್ಕಿಬೀಳುತ್ತಿದ್ದಂತೆಯೇ ಕಾರ್ಯಕರ್ತರು ಆತನಿಗೆ ಧರ್ಮದೇಟು ನೀಡಲು ಶುರು ಮಾಡಿದ್ದಾರೆ. ಯುವತಿಯ ಕಣ್ಣೆದುರೇ ಸಾಜಿದ್‌ನನ್ನು ಹಿಡಿದು ಮನಬಂದಂತೆ ಚಚ್ಚಿದ್ದಾರೆ. ಈ ವೇಳೆ ತಲ್ಲಣಗೊಂಡ ಯುವತಿ, ಆತನಿಗೆ ಹೊಡೆಯದಂತೆ, ಹಲ್ಲೆ ಮಾಡದಂತೆ ಹಿಂದೂ ಕಾರ್ಯಕರ್ತರ ಮುಂದೆ ಕೈಮುಗಿದು ಅಳುತ್ತಾ ಜಬರ್ದಸ್ತ್ ಆಗಿ ಒತ್ತಾಯಿಸಿದ್ದಾಳೆ. ಆದರೆ ಯುವತಿಯ ಮನವಿಗೆ ಸೊಪ್ಪು ಹಾಕದ ಕಾರ್ಯಕರ್ತರು ಯುವಕನಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಇದಾದ ಬಳಿಕ ಸ್ಥಳಕ್ಕೆ ಯುವತಿಯ ಹೆತ್ತವರನ್ನು ತುರ್ತಾಗಿ ಕರೆಯಿಸಿಕೊಂಡ ಹಿಂದೂ ಸಂಘಟನೆಯ ಮುಖಂಡರು, ಯುವತಿಯನ್ನು ಅವರ ವಶಕ್ಕೆ ಒಪ್ಪಿಸಿ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ಇತ್ತ ರಕ್ತಸಿಕ್ತನಾಗಿದ್ದ ಆರೋಪಿ ಸಾಜಿದ್ ಉಣಕಲ್‌ನನ್ನು ಕಾರ್ಯಕರ್ತರು ಎಳೆದೊಯ್ದು ನೇರವಾಗಿ ಅಶೋಕ ನಗರ ಪೊಲೀಸ್ ಠಾಣೆಯ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಅಶೋಕ ನಗರ ಠಾಣೆ ಪೊಲೀಸರು ಸಾಜಿದ್‌ನನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ಠಾಣೆಯ ಮುಂದೆ ಜಮಾಯಿಸಿದ್ದು, ಆತನ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಕ್ಷಣವೇ ಅಧಿಕೃತವಾಗಿ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಾಸ್ತವವಾಗಿ, ಹುಬ್ಬಳ್ಳಿಯಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲೂ ಇಂತದ್ದೇ ಒಂದು ಪ್ರಕರಣ ಸಖತ್ ಸದ್ದು ಮಾಡಿತ್ತು. ವಿಜಯನಗರದ ನಿವಾಸಿ ಸಮೀರ್ ಎಂಬ ಮುಸ್ಲಿಂ ಯುವಕ ಹಿಂದೂ ಯುವತಿಯ ಜೊತೆ ಓಡಾಡುತ್ತಿದ್ದಾಗ ಇದೇ ರೀತಿ ಹಿಂದೂ ಸಂಘಟನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆ ಘಟನೆಯಿಂದ ಸೃಷ್ಟಿಯಾಗಿದ್ದ ಉದ್ವಿಗ್ನ ವಾತಾವರಣ ತಿಳಿಯಾಗುವ ಮುನ್ನವೇ, ಈಗ ಸಾಜಿದ್ ಪ್ರಕರಣ ಮುನ್ನೆಲೆಗೆ ಬಂದಿರುವುದು ಹುಬ್ಬಳ್ಳಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -spot_img

More articles

- Advertisement -spot_img

Latest article