No menu items!
16.3 C
Munich
Thursday, April 30, 2026

ರಾಜ್ ಕುಮಾರ್ ಪಾತ್ರದಲ್ಲಿ ಶಿವಣ್ಣ…ಮಂಜುಳ ಪಾತ್ರದಲ್ಲಿ ಆಮಿ ಜಾಕ್ಸನ್…!

Must read

ಡಾ. ರಾಜ್ ಕುಮಾರ್ ಅವರ ಪಾತ್ರದಲ್ಲಿ ಶಿವಣ್ಣ, ಮಂಜುಳಾ ಅವರ ಪಾತ್ರದಲ್ಲಿ ಆಮಿ ಜಾಕ್ಸನ್ ಕಾಣಿಸಿಕೊಳ್ಳಲಿದ್ದಾರೆ.


ಹೌದು, ಪ್ರೇಮ್ ನಿರ್ದೇಶನದ ‘ದಿ ವಿಲನ್‌ ‘ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಆಮಿ ಜಾಕ್ಸನ್ ಹೀಗೆ‌ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಬಹಿರಂಗವಾಗಿದೆ.


ಅಭಿನಯ ಚಕ್ರವರ್ತಿ ಸುದೀಪ್ , ಹ್ಯಾಟ್ರಿಕ್ ಹೀರೋ‌ ಶಿವರಾಜಕುಮಾರ್ ದಿ ವಿಲನ್ ನಲ್ಲಿ ‌ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಗೊತ್ತೇ ಇದೆ. ನಿರ್ದೇಶಕ ಪ್ರೇಮ್ ಈ ಚಿತ್ರದಲ್ಲಿ ಮತ್ತೊಂದು ಪ್ರಯೋಗ ಮಾಡುತ್ತಿದ್ದಾರೆ.


ರಾಜ್ ಕುಮಾರ್ ಮತ್ತು ಮಂಜುಳ ಅಭಿನಯದ ಜೀವ ಹೂವಾಗಿದೆ ಭಾವ ಜೇನಾಗಿದೆ‌ ಸಾಲನ್ನು ದಿ ವಿಲನ್ ನಲ್ಲಿ‌ ಅಳವಡಿಸಲು ಪ್ರೇಮ್ ಮುಂದಾಗಿದ್ದಾರೆ.
ಇದ ಫೋಟೋವೊಂದು‌ ಸಿಟಿ ಎಕ್ಸ್ ಪ್ರೆಸ್ ಗೆ ಸಿಕ್ಕಿದ್ದು, ಎಲ್ಲೆಡೆ‌ ಸುದ್ದಿ ವೈರಲ್ ಆಗ್ತಿದೆ. ರಾಜ್ ಪಾತ್ರದಲ್ಲಿ ಶಿವಣ್ಣ, ಮಂಜುಳ‌ ಪಾತ್ರದಲ್ಲಿ ಆಮಿ ಜಾಕ್ಸನ್ ದಿ ವಿಲನ್ ನಲ್ಲಿ ಕಾಣಿಸಲಿದ್ದಾರೆ. ಇದನ್ನು ರಹಸ್ಯವಾಗಿಟ್ಟು ಕೊಳ್ಳಬೇಕೆಂದೆನಿಸಿದರೂ ಆಗಲಿಲ್ಲ ಎನ್ನುತ್ತಾರೆ ಪ್ರೇಮ್.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article