ಮಹಿಳಾ ಐಪಿಎಲ್ ಗೆ ಭರ್ಜರಿ ತಯಾರಿ

admin
By admin
1 Min Read

ಭಾರತದಲ್ಲಿ ಈಗಾಗಲೇ ಪುರುಷರ ಐಪಿಎಲ್ ದೊಡ್ಡಮಟ್ಟಿನ ಯಶಸ್ಸುಗಳಿಸಿದೆ. ಇದರ ಬೆನ್ನಲ್ಲೇ ಮಹಿಳಾ ಐಪಿಎಲ್ ನಡೆಸಲು ಚಿಂತನೆ ನಡೆದಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಪ್ರಯೋಗಾತ್ಮಕವಾಗಿ ಇಂದು ಮಹಿಳಾ ಟಿ20 ಚಾಲೆಂಜ್ ಪ್ರದರ್ಶನ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ.


ಈ‌ ಪಂದ್ಯಕ್ಕೆ ಬಿಸಿಸಿಐ ಟಿ20 ಚಾಲೆಂಜ್ ಗೇಮ್ ಎಂದು ಹೆಸರಿಟ್ಟಿದೆ. ಈ ಗೇಮ್ ನಲ್ಲಿ ವಿಶ್ವದ ಪ್ರಸಿದ್ಧ ಮಹಿಳಾ ಕ್ರಿಕೆಟಿಗರು ಪಾಲ್ಗೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಸ್ಮೃತಿ ಮಂದಾನಾ ನಾಯಕತ್ವದ ಐಪಿಎಲ್ ಟ್ರಯಲ್ ಬ್ಲೇಜರ್ಸ್ ಮತ್ತು ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಐಪಿಎಲ್ ಸೂಪರ್ ನೋವಾಸ್ ತಂಡಗಳು ಎದುರಾಳಿಗಳು.
ಎರಡೂ ತಂಡದಲ್ಲೂ ತಲಾ ಐದು ಮಂದಿ ವಿದೇಶಿ ಆಟಗಾರ್ತಿಯರು ಇದ್ದಾರೆ.

ತಂಡಗಳು ಇಂತಿವೆ

ಟ್ರಯಲ್‌ಬ್ಲೇಜರ್ಸ್‌: ಸ್ಮೃತಿ ಮಂದಾನಾ(ನಾಯಕಿ), ಅಲಿಸಾ ಹೀಲಿ(ವಿಕೆಟ್‌ ಕೀಪರ್‌), ಸುಜೀ ಬೇಟ್ಸ್‌, ದೀಪ್ತಿ ಶರ್ಮಾ, ಬೆಥ್‌ ಮೂನಿ, ಜೆಮಿಮಾ ರಾಡ್ರಿಗಸ್‌, ಡೇನಿಯೆಲ್‌ ಹೇಜಲ್‌, ಶಿಖಾ ಪಾಂಡೆ, ಲೀ ತಹುಹು, ಜೂಲನ್‌ ಗೋಸ್ವಾಮಿ, ಏಕ್ತಾ ಬಿಷ್ಟ್‌, ಪೂನಂ ಯಾದವ್‌, ದಯಾಳನ್‌ ಹೇಮಲತಾ; ಕೋಚ್‌: ತುಷಾರ್‌ ಅರೋಠೆ.

ಸೂಪರ್‌ನೋವಾಸ್‌: ಹರ್ಮನ್‌ಪ್ರೀತ್‌ ಕೌರ್‌(ನಾಯಕಿ), ಮಿಥಾಲಿ ರಾಜ್‌, ಡೇನಿಯೆಲ್‌ ವ್ಯಾಟ್‌, ಮೆಗ್‌ ಲ್ಯಾನಿಂಗ್‌, ಸೋಫೀ ಡಿವೈನ್‌, ಎಲೀಸ್‌ ಪೆರಿ, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್‌, ಪೂಜಾ ವಸ್ತ್ರಕರ್‌, ಮೆಗಾನ್‌ ಶುಟ್‌, ರಾಜೇಶ್ವರಿ ಗಾಯಕ್ವಾಡ್‌, ತಾನಿಯಾ ಭಾಟಿಯಾ(ವಿಕೆಟ್‌ ಕೀಪರ್‌), ಅನುಜಾ ಪಾಟೀಲ್‌; ಕೋಚ್‌: ಬಿಜು ಜಾರ್ಜ್‌.

Share This Article