No menu items!
11.9 C
Munich
Thursday, April 30, 2026

ಮಂಡ್ಯದ ಕುರಿಗಾಹಿ ಬಗ್ಗೆ ವಿವಿಎಸ್ ಟ್ವೀಟ್…!

Must read

ಸಕ್ಕರೆ ನಾಡು ಮಂಡ್ಯದ ಕುರಿಗಾಹಿ ಕಾಮೇಗೌಡರ ಸಾಧನೆ ಬಗ್ಗೆ ಮಾಜಿ ಕ್ರಿಕೆಟಿಗರ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಬರಡು ಪ್ರದೇಶದಲ್ಲಿ ಕೆರೆಗಳನ್ನು ನಿರ್ಮಿಸಿ ಹಸಿರು ನಂದನವನ ನಿರ್ಮಿಸಿದ 82ವರ್ಷದ ಕುರಿಗಾಹಿ ಕಾಮೇಗೌಡರ ಬಗ್ಗೆ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು‌ 15ಲಕ್ಷ ರೂ ಖರ್ಚುಮಾಡಿ 14ಕೆರೆಗಳನ್ನು ನಿರ್ಮಾಣ ಮಾಡಿರುವ‌ ಕಾಮೇಗೌಡರನ್ನು ಲಕ್ಷ್ಮಣ್ ಕೊಂಡಾಡಿದ್ದಾರೆ.

“ಕರ್ನಾಟಕದ ಮಂಡ್ಯದ 82ವರ್ಷ ಕಾಮೇಗೌಡರು 14ಕ್ಕೂ ಹೆಚ್ಚು ಕೊಳಗಳನ್ನು ನಿರ್ಮಿಸಿದ್ದಾರೆ. ಇವು ಬೇಸಿಗೆಯಲ್ಲಿಯೂ ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ಇವುಗಳನ್ನು ಸ್ವತಃ ಅವರೇ ನಿರ್ವಹಣೆ ಮಾಡುತ್ತಾರೆ. ಇದಕ್ಕಾಗಿ ದುಡಿದ ವಿವಿಧ ಪುರಸ್ಕಾರಗಳಿಂದ ಸಂಗ್ರಹಿಸಿದ 15ಲಕ್ಷ ರೂಪಾಯಿಗೂ ಅಧಿಕ ಹಣ ವ್ಯಯಿಸಿದ್ದಾರೆ. ಅವರಿಗೆ ನನ್ನ ಪ್ರಣಾಮಗಳು ಅಂತಾ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.‌

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article