No menu items!
20.8 C
Munich
Sunday, July 26, 2026

ಸ್ಯಾಂಡಲ್ ವುಡ್ ನ ಈ ಖ್ಯಾತ ನಟನ ವಿರುದ್ಧ ಮಹಿಳೆ‌ಯಿಂದ ದೂರು

Must read

ಸ್ಯಾಂಡಲ್ ವುಡ್ ನ ಖ್ಯಾತ ನಟನ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ತಂಪು ಪಾನೀಯದಲ್ಲಿ ಮತ್ತು ಬರೋ ಔಷಧಿ ಸೇರಿಸಿ ಕುಡಿಸಿ , ಆಕೆಯೊಡನೆ ಇದ್ದ ಅಶ್ಲೀಲ ವೀಡಿಯೋ ತೋರಿಸಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಸರಾಂತ ನಟ ಧರ್ಮೇಂದ್ರ ಆರೋಪಿ. ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮಹಿಳೆಯನ್ನು ಕರೆಸಿಕೊಂಡಿದ್ದ ಧರ್ಮೇಂದ್ರ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಊಟಕ್ಕೆ ಹೋಟೆಲ್ ಗೆ ಕರೆಸಿಕೊಂಡು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಆರ್ ಆರ್ ನಗರದ ಹೋಟೆಲ್ ಗೆ ಕಾರು ಚಾಲಕ ನವೀನ್ ಮೂಲಕ ಮಹಿಳೆಯನ್ನು ಧರ್ಮೇಂದ್ರ ಕರೆಸಿಕೊಂಡಿದ್ದಾನೆ. ಊಟದ ನಂತರ ಕೂಲ್ ಡ್ರಿಂಕ್ಸ್ ನಲ್ಲಿ ಮತ್ತು ಬರೋ ಔಷಧ ಹಾಕಿ ಕುಡಿಸಿದ್ದಾನೆ. ನಂತರ ಅವಳೊಂದಿಗಿನ‌ ಅಶ್ಲೀಲ ವೀಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಕುಟುಂಬಕ್ಕೆ ತೋರಿಸುವುದಾಗಿ ಹೇಳಿ 14ಲಕ್ಷ ಹಣ ಸುಲಿಗೆ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article