No menu items!
12.4 C
Munich
Wednesday, April 29, 2026

ಆತ 200 ಹುಡುಗಿಯರಿಗೆ ಮೋಸ ಮಾಡಿದ್ದ..! ಫೇಸ್ ಬುಕ್ ಬಳಕೆಗೂ ಮುನ್ನ ಈ ಸ್ಟೋರಿ ಓದಲೇಬೇಕು..!

Must read

ದುಡ್ಡು ಮಾಡಲು ಜನರು ಎಂಥೆಂಥದ್ದೋ ಅಡ್ಡ ದಾರಿಗಳನ್ನು ಕಂಡುಹಿಡಿದಿರುತ್ತಾರೆ. ಕಳ್ಳತನ, ಸುಲಿಗೆ, ಡಕಾಯಿತಿ ಸೇರಿದಂತೆ ಹತ್ತಾರು ಅಡ್ಡ ಮಾರ್ಗಗಳ ಮೂಲಕ ಹಣ ಮಾಡಿದವರನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬನಿದ್ದಾನೆ. ಈತ ದುಡ್ಡು ಮಾಡುವುದು ಫೇಸ್ ಬುಕ್ ಮೂಲಕ..! ಆತನ ಟಾರ್ಗೆಟ್ ಅಮಾಯಕ ಕಾಲೇಜು ಯುವತಿಯರು..!
ಯೆಸ್.. ಬಹುತೇಕ ಜನರು ಇಷ್ಟಪಡುವ ಫೇಸ್ ಬುಕ್ ಈಗ ಕೇವಲ ಮಾಹಿತಿ, ಮನೊರಂಜನೆ ನೀಡುವ ತಾಣವಾಗಿ ಉಳಿದುಕೊಂಡಿಲ್ಲ. ಬದಲಿಗೆ ಮೋಸದ ಜಾಲವಾಗಿ ಬದಲಾಗುತ್ತಿದೆ ಎನ್ನಲು ಅಬ್ದುಲ್ ಮಜೀದ್ ಎಂಬ ಈ ವ್ಯಕ್ತಿಯೇ ಸಾಕ್ಷಿ..! ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಈತ ಫೇಸ್ ಬುಕ್ ಮೂಲಕವೇ ಮೋಸದ ಜಾಲದಲ್ಲಿ ತೊಡಗಿಸಿಕೊಂಡಿದ್ದ..! ನೂರಾರು ಹುಡುಗಿಯರಿಗೆ ಮೋಸ ಮಾಡಿದ್ದ.
ಫೇಕ್ ಅಕೌಂಟ್ ತೆರೆದು, ಅದರ ಮೂಲಕ ಹತ್ತಾರು ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಂತರ ಅವರ ಜೊತೆ ಅಶ್ಲೀಲವಾಗಿ ಚಾಟ್ ಮಾಡುವುದನ್ನು ಮಾಡುತ್ತಿದ್ದ. ಬಳಿಕ ಅದನ್ನೇ ಬಂಡವಾಳವಾಗಿಸಿಕೊಂಡು ಹುಡುಗಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಕೆಲವು ಅಮಾಯಕ ಯುವತಿಯರು ಈತನಿಗೆ ಹಣ ನೀಡರಬಹುದು ಎನ್ನುತ್ತಿವೆ ಪೊಲೀಸ್ ಮೂಲಗಳು. ಒಂದು ಬಾರಿ ಓರ್ವ ಯುವತಿಯಿಂದ ಬರೋಬ್ಬರಿ 86,000 ರೂಪಾಯಿ ಹಣ ಪಡೆಯುತ್ತಿದ್ದಾಗಲೇ ಈತ ಸಿಕ್ಕಿಹಾಕಿಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಅಬ್ದುಲ್ ಮಜೀದ್ ನ ತಂದೆ ಪಾನ್ ಶಾಪ್ ನಡೆಸುತ್ತಿದ್ದಾರೆ. ಆದರೆ ಇಂಜಿನಿಯರಿಂಗ್ ಓದುವ ನೆಪದಲ್ಲಿ ಅಬ್ದುಲ್ ಮಜೀದ್ ಮಾಡಿರುವ ಕೆಲಸದಿಂದ ಆತನ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಆದರೆ ಮುಂದಿನ ದಿನಗಳಲ್ಲಿ ಅಬ್ದುಲ್ ಮಜೀದ್ ಮಾಡಿರುವ ಇನ್ನಷ್ಟು ಮೋಸದ ಕೆಲಸಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ.
ಯಾವುದೋ ಅನಾಮಿಕರನ್ನು ಸ್ನೇಹಿತರನ್ನಾಗಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೆಲ ಯುವತಿಯರು ಇಂದು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನಾದರೂ ನಮ್ಮ ಯುವ ಪೀಳಿಗೆ ಇಂತಹ ಜಾಲದಲ್ಲಿ ಸಿಲುಕಿಕೊಳ್ಳುವ ಮುನ್ನ ಎಚ್ಚರಗೊಳ್ಳಬೇಕಿದೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article