ಮಕರ ಜ್ಯೋತಿ ದರ್ಶನಕ್ಕೆ ಭಕ್ತರಲ್ಲಿ ಹೆಚ್ಚಿದ ಕಾತರ..!! ಇಂದೇ ಮಕರವಿಲಕ್ಕು ದರ್ಶನ..

Must read

ವಿಶ್ವವಿಖ್ಯಾತ ಶಬರಿಮಲೆಯ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯ ಪೊನ್ನಂಬಲಮೇಡು ಬೆಟ್ಟದಲ್ಲಿ ಇಂದು ಮಕರ ಜ್ಯೋತಿಯ ದರ್ಶನಕ್ಕೆ ಭಕ್ತಾಧಿಗಳು ಕಾತುರರಾಗಿದ್ದಾರೆ.. ಪ್ರತಿವರ್ಷದಂತೆ ಈ ವರ್ಷ ಸಹ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಅಯ್ಯಪ್ಪನ ಭಕ್ತರು ಆಗಮಿಸಿದ್ದು, ಸೂಕ್ತ ವ್ಯವಸ್ಥೆಯನ್ನ ಕೈಗೊಳ್ಳಲಾಗಿದೆ..

ಇಂದು ಸಂಜೆ 6.30ಕ್ಕೆ ಅಯ್ಯಪ್ಪನ ಆಭರಣಗಳನ್ನ ಮೆರವಣಿಗೆ ಮೂಲಕ ದೇವಸ್ಥಾಕ್ಕೆ ತರಲಿದ್ದು, ಮಕರವಿಲಕ್ಕು ಅಂದ್ರೆ ಮಕರ ಜ್ಯೋತಿಯನ್ನ ಕಣ್ತುಂಬಿಕೊಳ್ಳಲು ಭಕ್ತ ವೃಂದ ಕಾದಿದೆ.. ಪ್ರತೀ ವರ್ಷ ಕೇರಳದ ವಿವಿಧಡೆಗಳಿಂದ ಮಾತ್ರವಲ್ಲದೇ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ಉತ್ತರಭಾರತ ಹಲವಡೆಗಳಿಂದರೂ ಭಕ್ತರು ಸನ್ನಿಧಾನಕ್ಕೆ ತಲುಪುತ್ತಾರೆ. ಆದರೆ ಈ ಬಾರೀ ಯುವತಿ ಪ್ರವೇಶದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.

ಮಕರ ಜ್ಯೋತಿ ಮಹೋತ್ಸವದಂಗವಾಗಿ ಜ.19ರ ತನಕ ಮಾತ್ರ ಭಕ್ತರಿಗೆ ದರ್ಶನ ಅವಕಾಶವಿರುವುದು. ಅಂದು ಸಂಜೆ 5 ಗಂಟೆಗೆ ಪಂಪಾಕ್ಕೆ ತಲುಪುವರಿಗೆ ದರ್ಶನ ಲಭಿಸುವುದು. ರಾತ್ರಿ 9.30ಕ್ಕೆ ಅತ್ತಾಳ ಪೂಜೆ ಬಳಿಕ ಗರ್ಭಗುಡಿ ಮುಚ್ಚಲಾಗುತ್ತದೆ.

- Advertisement -spot_img

More articles

- Advertisement -spot_img

Latest article