ಯಾರಿಗಾದರೂ ಹಾವು ಕಚ್ಚಿದರೆ ಏನ್ ಮಾಡ್ತಾರೆ..? ಸಹಜವಾಗಿ ಕೂಡಲೇ ನಾಟಿ ಔಷಧ ತಗೋತಾರೆ. ವಿಷ ಏರದಂತೆ ಪ್ರಥಮ ಚಿಕಿತ್ಸೆ ಪಡೀತಾರೆ. ಇಲ್ಲ ತಕ್ಷಣವೇ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಭೂಪ ತಾನು ಎಲ್ಲರಂತಲ್ಲಾ,. ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು ಸಾವನ್ನಪ್ಪಿದ್ದಾನೆ.
ಹಾವು ಕಚ್ಚಿದರೆ ಆಸ್ಪತ್ರೆಗೆ ಹೋಗುವ ಬದಲು ಹಾವು ನನಗೇ ಕಚ್ಚಿತು ಎಂದು ಕೋಪಗೊಂಡು ಆ ಹಾವಿಗೆ ಕಚ್ಚಿದ್ದಾನೆ..! ಅದಲ್ಲದೆ ಆ ಹಾವನ್ನು ತಿನ್ನಲು ಪ್ರಯತ್ನ ಪಟ್ಟಿದ್ದಾನೆ. ಈ ವಿಚಿತ್ರ ಘಟನೆ ನಡೆದಿರುವುದು ಗುಜರಾತಿನಲ್ಲಿ.
70 ವರ್ಷದ ಪರ್ವತ್ ಗಲಾ ಬರಿಯಾ ಎನ್ನುವ ವ್ಯಕ್ತಿ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ಆಗ ಆತ ಹಾವಿನ ಮೇಲೆ ಕೋಪಗೊಂಡು ಅದಕ್ಕೆ ವಾಪಸ್ ಕಚ್ಚಿದ್ದಾನೆ..! ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಹಾವನ್ನು ಸುಟ್ಟು ಹಾಕಿ..ಪರ್ವತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪರ್ವತ್ ಚಿಕಿತ್ಸೆಗೆ ಸ್ಪಂದಿಸಿಲ್ಲ. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ತನ್ನನ್ನು ಕಚ್ಚಿದ ಹಾವಿಗೆ ಈ ಪುಣ್ಯಾತ್ಮ ಏನ್ ಮಾಡ್ದಾ ಗೊತ್ತಾ? ಅವನ ಕಥೆ ಏನಾಯ್ತು?
Date: