ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಟ್ವಿಟ್ಟರ್ ನಲ್ಲಿ ಇತ್ತೀಚೆಗಷ್ಟೇ ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ವಿಜಯಲಕ್ಷ್ಮಿ ಅವರು ಸಂಡೇ ಕ್ವೋಟ್ ಎಂದು ವಿಶೇಷವಾದ ಕ್ವೋಟ್ ಒಂದನ್ನು ಶೇರ್ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರು ಮಾಡಿರುವ ಈ ಒಂದು ಟ್ವೀಟ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಕರ್ಮ ಎಂಬುದು ಯಾರನ್ನೂ ಸುಮ್ಮನೆ ಬಿಡುವುದಿಲ್ಲ , ನಮಗೆ ಕೇಡನ್ನು ಮಾಡಿದವರಿಗೆ ಪ್ರತೀಕಾರ ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ ಬದಲಾಗಿ ಸುಮ್ಮನೆ ಕುಳಿತು ಕಾದರೆ ಸಾಕು ಮುಂದೊಂದು ದಿನ ನಮಗೆ ಕೇಡು ಬಯಸಿದರೆ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಸೋಲುತ್ತಾರೆ ಅದನ್ನು ನಾವು ಅದೃಷ್ಟವಿದ್ದರೆ ಕಣ್ಣಿನಿಂದ ನೋಡಬಹುದು ಎಂದು ವಿಜಯಲಕ್ಷ್ಮಿ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ವಿಜಯಲಕ್ಷ್ಮಿ ಅವರು ಈ ರೀತಿಯ ಟ್ವೀಟ್ ಅನ್ನು ಯಾರಿಗೆ ಮಾಡಿದ್ದಾರೆ ಎಂಬುದು ಮಾತ್ರ ತಿಳಿದಿಲ್ಲ.. ಯಾರ ಹೆಸರನ್ನು ಸಹ ಹಾಕದೆ ನಿಗೂಢವಾಗಿ ಈ ಟ್ವೀಟ್ ಅನ್ನ ಮಾಡಿದ್ದಾರೆ.