ಖರ್ಗೆ ಮುಖ್ಯಮಂತ್ರಿ ಆಗುವ ಮೊದಲು ನಾವು ಉಪ ಚುನಾವಣೆಯಲ್ಲಿ ಗೆಲ್ಲಬೇಕು ?

admin
By admin
1 Min Read

ಉಪಚುನಾವಣೆ ಮುಗಿದಿದೆ ಆದರೆ ಎಲ್ಲರ ಕಣ್ಣು ಫಲಿತಾಂಶದ‌ಮೇಲೆ ಇದೆ ಆದರೆ ಇತ್ತ ಸಿದ್ದರಾಮಯ್ಯ ಅವರು ಈ 15 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ನಿಶ್ಚಿತವಾಗಿ ಗೆಲ್ಲಲಿದೆ. ಫಲಿತಾಂಶಕ್ಕೂ ಮೊದಲೇ ಮೈತ್ರಿ ಸರಕಾರ ರಚನೆ ಕುರಿತು ಮಾತನಾಡುವುದು ಸರಿಯಲ್ಲ ಅದನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಚರ್ಚಿಸಿ ನಂತರ ನಿರ್ಧರಿಸಬೇಕಿದೆ ಅಲ್ಲಿಯವರೆಗೂ ಆ ವಿಚಾರವನ್ನು ಮಾತನಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ .

ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಲು ಯಾರ ವಿರೋಧವೂ ಇಲ್ಲ. ಆದರೆ, ಫಲಿತಾಂಶಕ್ಕೂ ಮೊದಲೇ ಮೈತ್ರಿ, ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡುವುದು ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತೆ ಆಗುತ್ತದೆ’ ಎಂದು ಸಿದ್ದರಾಮಯ್ಯ ಅವರು  ಪ್ರತಿಕ್ರಿಯೆ ನೀಡಿದರು.

Share This Article