ಶಿಲ್ಪಾ ಶೆಟ್ಟಿಗೆ ಏನ್ರೀ ಆಯ್ತು ‘ಚಪ್ಪಲಿ’ ತಿನ್ತಿದ್ದಾರೆ..!

admin
By admin
1 Min Read

ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ… ವಯಸ್ಸು 44 ಆದ್ರೂ ಇನ್ನೂ ನಿನ್ನೆ ಮೊನ್ನೆ ಇಂಡಸ್ಟ್ರಿಗೆ ಬಂದ ಹೀರೋಯಿನ್​ ಗಳಂತೆ ಮುದ್ದು ಮುದ್ದಾಗಿ ಕಾಣ್ತಾರೆ..! ಆ ಮಟ್ಟಿಗೆ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. ಫಿಟ್ನೆಸ್​ ಮಂತ್ರವನ್ನು ಚಾಚು ತಪ್ಪದೆ ಪಾಲಿಸಿ ಇನ್ನೂ ಹೊಸ ತಮ್ಮ ಚಿಕ್ಕ ವಯಸ್ಸಿನ ಸೌಂದರ್ಯದಲ್ಲೇ ಕಂಗೊಳಿಸುತ್ತಿರುವ ಶಿಲ್ಪಾ ಶೆಟ್ಟಿ ಚಪ್ಪಲಿ ತಿಂದಿದ್ದಾರೆ..! ಆ ವಿಡಿಯೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.
ಅರೆ ಡಯಟ್ ಗಿಯಟ್ ಮಾಡಿ ಫಿಟ್ನೆಸ್​​ ಕಾಪಾಡಿಕೊಂಡಿರೋ ಕನ್ನಡದ ಚೆಲುವೆ ಎಲ್ಲಾ ಬಿಟ್ಟು ಚಪ್ಪಲಿ ತಿನ್ತಿರೋದು ಯಾಕೆ? ಯಾವ್ದಾದ್ರು ಸಿನಿಮಾದಲ್ಲಿ ಕಡುಬಡತನದ ಯಾವ್ದಾದ್ರು ಪಾತ್ರ ಮಾಡ್ತಿದ್ದಾರಾ,… ಹೀಗೆ ಕೆಲವು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಅದ್ಯಾವುದೂ ಅಲ್ಲ. ಶಿಲ್ಪಾ ಶೆಟ್ಟಿ ತಿಂದಿರೋದು ಚಪ್ಪಲಿ ಆಕಾರದ ಚಾಕೋಲೇಟ್ ಅನ್ನು. ಅಸಹಜ ಭಾನುವಾರದಂದು ಅಸಹಜ ರೀತಿಯ ಚಾಕೋಲೆಟ್​ ತಿನ್ನುತ್ತಿದ್ದೇವೆ ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಚಪ್ಪಲಿ ಚಾಕೋಲೇಟ್ ತಿನ್ನೋ ವಿಡಿಯೋ ವೈರಲ್ ಆಗಿದೆ..!

https://www.instagram.com/p/B8D3RUDBZ-A/?utm_source=ig_web_copy_link

Share This Article