ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ತನ್ನ ಸುಮಧುರ ಕಂಠದ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿರೋ ಇವರು ನವೀನ್ ಸಜ್ಜು. ಇಂದು ಸಿನಿಲೋಕದ ಹೆಸರಾಂತ ಗಾಯಕ. ಆದರೆ, ಆ ಹೆಸರು ಪಡೆಯಲು ಅವರು ಪಟ್ಟ ಶ್ರಮ, ಅವರು ಎದುರಿಸಿದ ಪರಿಸ್ಥಿತಿಗಳು ಸಿನಿ ಕಹಾನಿಗಿಂತ್ಲೂ ರೋಚಕ. ಎದುರಾದ ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿ ಅನುಭವಿಸಿದ ರೀತಿ ಇದೆಯಲ್ಲ, ಅದೇ ಅವರ ಜೀವನವನ್ನು ಸಾರ್ಥಕತೆಯ ಕಡೆಗೆ ನಡೆಸಿದೆ.
ನವೀನ್ ಸಜ್ಜು ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳೆಕೆರೆಯವರು. ಅವಿಭಕ್ತ ಕುಟುಂಬದಿಂದ ಬಂದ ಅವರದ್ದು ಸಾಮಾನ್ಯರಲ್ಲೇ ಸಾಮಾನ್ಯ ಕುಟುಂಬ. 4ನೇ ತರಗತಿಯವರೆಗೆ ಪಕ್ಕದ ಊರಿನಲ್ಲೇ ಓದಿದ ಅವರು, ಪ್ರೌಢ ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದರು. ಆದರೆ ಓದುವುದಕ್ಕಿಂತ ತೋಟದ ಕೆಲಸ, ಮರ ಹತ್ತೋದು ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲೇ ಆಸಕ್ತಿ ಹೆಚ್ಚಾಗಿತ್ತು. ಅದಕ್ಕೆ ಓದಿನ ಬಗ್ಗೆ ಅಷ್ಟೇನು ಗಮನ ನೀಡಲಿಲ್ಲ. ಆದರೆ ಬಿಡುವು ಸಿಕ್ಕಾಗ್ಲೆಲ್ಲಾ ಹಾಡೋದು ಅಂದ್ರೆ ಇವರಿಗೆ ಪಂಚಪ್ರಾಣ ಆಗಿತ್ತು.
ಇನ್ನು ನವೀನ್ ಸಜ್ಜುಗೆ ಚಿಕ್ಕಂದಿನಲ್ಲೂ ಶಾಲೆಯ ಕಂಠಪಾಠ ಸ್ಪರ್ಧೆ, ಚಿತ್ರಗೀತೆಗಳ ಸ್ಪರ್ಧೆಯಲ್ಲಿ ದೊರೆತ ಬಹುಮಾನಗಳು ಮತ್ತಷ್ಟು ಪ್ರೇರಣೆ ನೀಡಿದವು. ಹಾಗೇನೆ ಬೆಳೆಯುತ್ತ ಬಂದಂತೆ ಪೌರಾಣಿಕ ನಾಟಕಗಳ ತಂಡಗಳ ಜೊತೆ ಸೇರಿದರು. ಇನ್ನು ಊರಲ್ಲಿ ಯಾರಾದರೂ ಸತ್ತರೆ ಹನ್ನೊಂದು ದಿನದ ಕಾರ್ಯಕ್ಕೆ ಏರ್ಪಡಿಸುವ ತಿಥಿ ಸಂದರ್ಭದಲ್ಲಿ ಹರಿಕಥೆ, ಭಜನೆಯಲ್ಲಿ ಭಾಗಿಯಾಗ್ತಿದ್ರು. ಸಾವಿನ ಪದಗಳನ್ನು ಹಾಡುತ್ತಾ ತಮ್ಮ ಹಾಡಿನ ಆಸಕ್ತಿಯನ್ನು ತಣಿಸಿಕೊಳ್ಳುತ್ತಿದ್ದರು.
ನವೀನ್ ಸಜ್ಜು 10ನೇ ತರಗತಿ ಆದ್ಮೇಲ್ ಬೆಳಗ್ಗೆ ಕೇಬಲ್ ಅಂಗಡಿ, ರಾತ್ರಿ ಫ್ಲೆಕ್ಸ್ ಮಾಡುವ ಕೆಲಸದಲ್ಲಿ ಸೇರಿದರು. ಇದರ ಜೊತೆಗೆ ಹಾಡುವ ಆಸೆ ಪೂರೈಸಿಕೊಳ್ಳಲು ಆರ್ಕೆಸ್ಟ್ರಾ ಸೇರಿದರು. ಆದರೆ ನಾಲ್ಕು ವರ್ಷಗಳ ಕಠಿಣ ಶಮ್ರದ ನಂತರವೂ ಅವರಿಗೆ ಸರಿಯಾಗಿ ಹಾಡುವ ಅವಕಾಶವೇ ಅಲ್ಲಿ ಸಿಗಲಿಲ್ಲ. ಅಲ್ಲಿಂದ ಹೊರಬಂದು ತಾವೇ ಇತರರ ಸಹಾಯದಿಂದ ಒಂದು ತಂಡ ಕಟ್ಟಿ ಆರ್ಕೆಸ್ಟ್ರಾ ಆರಂಭಿಸಿಯೇ ಬಿಟ್ಟರು.
ಆರಂಭದಲ್ಲಿ ಅವಕಾಶಗಳು ಕಡಿಮೆಯಿದ್ದರೂ ಹಾಡುತ್ತಾ ತಮ್ಮ ಆರ್ಕೆಸ್ಟ್ರಾ ನಡೆಸಿದರು. ಕೆಲವೇ ದಿನಗಳಲ್ಲಿ ಒಳ್ಳೆಯ ಹೆಸರು ಪಡೆದರು. ಮದುವೆ ಕಾರ್ಯಕ್ರಮಗಳಲ್ಲಿ ಹಾಡತೊಡಗಿದರು. ಅದರಿಂದ ಅಷ್ಟೇನೂ ನಿರೀಕ್ಷಿತ ಹೆಸರು ಸಿಗಲಿಲ್ಲವಾದಾಗ, ಒಬ್ಬ ಹೆಸರಾಂತ ಕಲಾವಿದರ ಡ್ರೈವರ್ ಅದರು. ಕಲಾವಿದರು ಇವರ ಕಲೆಯನ್ನು ಗುರುತಿಸುವರೆಂಬ ಆಸೆಯಿಂದ ಹೋದ ನವೀನ್ ಅವರಿಗೆ ಅಲ್ಲೂ ನಿರಾಸೆ ಎದುರಾಯಿತು. ಆ ಹೆಸರಾಂತ ಕಲಾವಿದ ಕೇವಲ ತನ್ನ ವೈಯಕ್ತಿಕ ಕೆಲಸಗಳಿಗೆ ಇವರನ್ನು ನೇಮಿಸಿದ್ದನೇ ಹೊರತು, ನವೀನ್ ಒಳಗಿನ ಗಾಯಕರನ್ನು ಕಲಾವಿದನನ್ನು ಗುರುತಿಸಲಿಲ್ಲ.
ಕೊನೆಗೆ ಖ್ಯಾತ ಕಲಾವಿದರ ಹತ್ತಿರ ಕೆಲಸ ಬಿಟ್ಟು ನವೀನ್ ಮತ್ತೆ ಆರ್ಕೆಸ್ಟ್ರಾ ಸೇರಿದರು. ಇದೆಲ್ಲಾ ಮುಗಿದ ಮೇಲೆ ನಿರಂತರ ಎಂಬ ರಂಗ ತಂಡ ಸೇರಿದರು. ಅಲ್ಲಿಂದ ನವೀನ್ ಅವರ ಸಾಧನೆಗೆ ಒರೆಹಚ್ಚುವ ಅವಕಾಶದ ಹಾದಿ ತೆರೆಯಿತು. ಅಲ್ಲಿ ಪರಿಚಯವಾದ ಪೂರ್ಣಚಂದ್ರ ತೇಜಸ್ವಿ ಹಾಗೂ ಪವನ್ ಅವರು ನವೀನ್ ಪ್ರತಿಭೆ ಗುರುತಿಸಿದರು. ಅವರ ಗಾಯನವನ್ನು ಕೇಳಿ ಮೆಚ್ಚಿಕೊಂಡರು.
ಆಮೇಲೆ, ನವೀನ್ ಸಜ್ಜು ಅವರಿಗೆ ಲೂಸಿಯಾ ಚಿತ್ರಕ್ಕೆ ಅವಕಾಶ ದೊರೆಯಿತು. ಅದರಲ್ಲಿ ಅದ್ಭುತ ಸಿರಿಕಂಠದಿಂದ ಹಾಡಿದ ಜಮ ಜಮ ಹಾಡು ಇತಿಹಾಸ ಮೂಡಿಸಿತು. ನವೀನ್ ಸ್ಯಾಂಡಲ್ವುಡ್ನ ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕರಾಗಿ ಬೆಳೆದರು. ಇಂದು ಹಲವಾರು ಕನ್ನಡ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಗಾಯಕ ನವೀನ್ ಸಜ್ಜು ಅವರ ಅವಿರತ ಶ್ರಮ ಹಾಗೂ ತಾಳ್ಮೆಯೇ ಅವರನ್ನು ಗೆಲ್ಲಿಸಿತು. ಸಾಧನೆ ಮಾಡಲೇಬೇಕೆಂದು ನಿರ್ಧರಿಸಿದ ಅವರಿಗೆ, ಹಾದಿಯಲ್ಲಿ ಎದುರಾದ ಮುಳ್ಳುಗಳೇ ಛಲ ಮೂಡಿಸಿತು. ಇತರರಿಗೆ ಮಾದರಿಯಾಯಿತು. ಅಲ್ಲವೇ?
ಧ್ರುವಾ ಸರ್ಜಾ ದಂಪತಿಗೆ ಕೊರೋನಾ …!
ಅಂದು ಸೈಕಲ್ ನಲ್ಲಿ ಮನೆಗೆ ಹಾಲು ಹಾಕ್ತಿದ್ದವರು ಇಂದು…?
ಸರ್ಕಾರಿ ಕೆಲಸಬಿಟ್ಟು ರೈತನಾದ ಇಂಜಿನಿಯರ್ ಸ್ಟೋರಿ ..!
ನಿತ್ಯ ಭವಿಷ್ಯ : ಈ ರಾಶಿಯವರಿಗೆ ಮಾತೇ ಸಮಸ್ಯೆ ತಂದೊಡ್ಡುತ್ತದೆ ..!
ಹುಡುಗರು ಹೆಚ್ಚು ಆಕರ್ಷಿತರಾಗೋದು ಚಂದದ ಹುಡ್ಗೀರಿಲ್ಲ..! ಮತ್ತೆ?
ದ್ವಿತೀಯ ಪಿಯುಸಿ ಫಲಿತಾಂಶ : ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ..! ಯಾವ ಜಿಲ್ಲೆ ಫಸ್ಟ್? ಯಾವ್ದು ಲಾಸ್ಟ್?
ಯಾರ್ ಬೇಕಿದ್ರು ಕೃಷಿ ಭೂಮಿ ಖರೀಸಬಹುದೆಂಬ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ..!
ಕೊರೋನಾ ದೆಸೆಯಿಂದ ಸೆಕ್ಯುರಿಟಿ ಗಾರ್ಡ್ ಆದ ಸ್ಯಾಂಡಲ್ ವುಡ್ ಜನಪ್ರಿಯ ನಟ ..!
ನಿತ್ಯಭವಿಷ್ಯ : ಈ ಶುಭ ಮಂಗಳವಾರದ ರಾಶಿ ಭವಿಷ್ಯ
ಇಲ್ಲಿದೆ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿ ..! ಏನಿರುತ್ತೆ ? ಏನಿರಲ್ಲ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಕಪ್ ಮ್ಯಾನ್ ವಿಧಿವಶ
ಭಾರತ ಕ್ರಿಕೆಟ್ ನ ಆ ಐತಿಹಾಸಿಕ ಕ್ಷಣಕ್ಕೆ ಇಂದಿಗೆ 18 ವರ್ಷ …!
ಇವರೆಂಥಾ ಹೃದಯವಂತ ಉದ್ಯಮಿ …! ಅಷ್ಟಕ್ಕೂ ಇವರು ಮಾಡಿದ್ದೇನು?
ನಿತ್ಯಭವಿಷ್ಯ : ಈ ದಿನ ಯಾವ ರಾಶಿಗೆ ಯಾವ ಫಲ?
ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!
ಲಾಕ್ ಡೌನ್ ವಿಸ್ತರಣೆಯಾದ್ರೂ ಆಗ್ಬಹುದು…ಬೆಂಗಳೂರು ಬಿಟ್ಟು ಹೋಗೋರು ನಾಳೆಯೇ ಹೋಗಲಿ
ಅಂದು ರುಬ್ಬುವ ಕಲ್ಲು ಮಾರುತ್ತಿದ್ರು, ಇಂದು ಖಡಕ್ ಪೊಲೀಸ್ ಅಧಿಕಾರಿ..!
ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಾಗೂ ಕೊರೋನಾ ..!
ಶಿವಣ್ಣನ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಕ್ತು ‘ಭಜರಂಗಿ -2 ‘ ಗಿಫ್ಟ್ ..!
ವಾರಭವಿಷ್ಯ : ಜುಲೈ 12 ರಿಂದ 18ರವರಗೆ ಹೇಗಿರಲಿದೆ ನಿಮ್ಮ ಭವಿಷ್ಯ?
ಸಚಿವ ಸಿ .ಟಿ ರವಿಗೂ ತಗುಲಿದ ಕೊರೋನಾ ..?
ತಂದೆಯ ನೆನಪಿಗಾಗಿ ಅವರು ರಸ್ತೆ ನಿರ್ಮಿಸಿದ್ರು ..! ಕಾರಣ ಗೊತ್ತಾ?
ಹೀಗೆಲ್ಲಾ ದುಡ್ಡು ಮಾಡ್ಬಹುದು..! ನೀವೇಕೆ ಟ್ರೈ ಮಾಡ್ಬಾರ್ದು?
ನಿತ್ಯ ಭವಿಷ್ಯ : ಈ ದಿನ ಯಾರಿಗೆ ಶುಭ ,ಯಾರಿಗೆ ಅಶುಭ?
ಇಡೀ ಜೀವನದಲ್ಲಿ ವಿದ್ಯುತ್ ಬಳಸದ ಪ್ರಾಧ್ಯಾಪಕಿ.. ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ..!
ಕರ್ನಾಟಕದಲ್ಲಿ ಎಂಜಿನಿಯರಿಂಗ್, ಪದವಿ ಪರೀಕ್ಷೆಗಳು ರದ್ದು ..!
ಸಿಎಂ ಮನೆಗೂ ವಕ್ಕರಿಸಿದ ಕೊರೋನಾ – ಯಡಿಯೂರಪ್ಪ ಕ್ವಾರಂಟೈನ್
ರಾಬರ್ಟ್ ರಿಲೀಸ್ ಸದ್ಯಕ್ಕಿಲ್ಲ … ಆದ್ರೂ ಡಿ.ಬಾಸ್ ಅಭಿಮಾನಿಗಳಿಗೆ ಸರ್ಪ್ರೈಸ್ ಕಾದಿದೆ ..!
ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ TRP? ಯಾವ ಚಾನಲ್ ಗೆ ಎಷ್ಟೆಷ್ಟು ರೇಟಿಂಗ್ಸ್ ?
ಕೊಹ್ಲಿಗೆ ಮನೆಯಿಂದ ನೀರ್ ದೋಸೆ ತಂದುಕೊಟ್ಟ ಶ್ರೇಯಸ್ ಅಯ್ಯರ್ !
ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮಲ್ಲಿ ಹೀಗೆಲ್ಲಾ ಆಗಿತ್ತಾ? ಅಬ್ಬಾ.. ಏನ್ರೀ ಇದು…!
ಶ್ರೀಮಂತರಾಗಬೇಕು ಅಂತಿರೋರು ಇದನ್ನು ಓದಿ …!
ಕೊರೋನಾ ವಾರಿಯರ್ಸ್ ಗೆ ಮಾಸ್ಕ್, ದಿನಸಿ ವಿತರಿಸಿ ಕೆಂಪರಾಜು ಹುಟ್ಟುಹಬ್ಬ ಆಚರಣೆ
ಬಸ್ ಕಂಡಕ್ಟರ್ ಮಗಳು ಕ್ರೀಡಾ ತಾರೆ ಆದ ಇಂಟ್ರೆಸ್ಟಿಂಗ್ ಸ್ಟೋರಿ
39ನೇ ವಸಂತಕ್ಕೆ ಕಾಲಿಟ್ಟ ಧೋನಿ – ‘ಬ್ರಾವೂ ಬಿಡುಗಡೆ ಮಾಡಿದ ‘ನಂಬರ್ 7’ ಹಾಡು ಹೇಗಿದೆ ಗೊತ್ತಾ?
ನಿತ್ಯ ಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಅನಿರೀಕ್ಷಿತ ಧನಾಗಮನವಾಗಲಿದೆ
ಅತ್ಯಾಚಾರ ಆರೋಪಿ ಬಳಿ 35 ಲಕ್ಷ ರೂ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಮಹಿಳಾ ಪೊಲೀಸ್ ಅಧಿಕಾರಿ!
ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಈಕೆಯೇ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಜಾರಿ ಹಿಂದಿರೋ ನಾಯಕಿ ..!
ಕೊರೋನಾ ಸೋಂಕು ದೃಢ ; ಕೋವಿಡ್ ಆಸ್ಪತ್ರೆಗೆ ಹೋಗಲು JDS ಮುಖಂಡನ ಹೈಡ್ರಾಮಾ ..!
ವಾರ ಭವಿಷ್ಯ : ಈ ವಾರದ ದ್ವಾದಶ ರಾಶಿಗಳ ಫಲಾಫಲಗಳೇನು?
14 ದಿನಗಳ ಕಾಲ ಹಾಸನದಲ್ಲಿ ಲಾಕ್ ಡೌನ್ ..!
ಸ್ಕ್ಯಾಟ್ಲೆಂಡ್ನಲ್ಲಿ ಭಾರತೀಯ ಮೂಲದ ಪೊಲೀಸ್ ಹವಾ ..!
ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಿ : ದುಬೆ ತಾಯಿ ಆಕ್ರೋಶ
ಅವರು ಹೊಲದಲ್ಲಿ ಬೆಳೆದಿದ್ದು ಬರೀ ಬೆಳೆಯಲ್ಲ ತಂದೆಯ ಕನಸನ್ನು!
ನಿತ್ಯ ಭವಿಷ್ಯ : ದ್ವಾದಶ ರಾಶಿಗಳ ಇಂದಿನ ಫಲಾಫಲಗಳು ಹೇಗಿವೆ?
ಅಭಿಮಾನಿಯ ಹುಡುಕಾಟದಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ..! ಕಾರಣ ಏನ್ ಗೊತ್ತಾ?
ಸಾಧಿಸಬೇಕೆಂಬ ಹಸಿವಿನ ಮುಂದೆ ಹೊಟ್ಟೆ ಹಸಿವು ಏನೂ ಅಲ್ಲ – IAS ಅಧಿಕಾರಿಯ ರೋಚಕ ಕಥೆ!
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡುವ 26ರ ಪಾಕಪ್ರವೀಣ
ನಿತ್ಯಭವಿಷ್ಯ : ಈ ಎಲ್ಲಾ ರಾಶಿಯವರಿಗೆ ಉತ್ತಮ ಅವಕಾಶಗಳು, ಉದ್ಯೋಗ ಸಿಗಲಿದೆ!
ಮೂರು ಬೆಟ್ಟ ದಾಟಿ, 17 ಸಾವಿರ ಅಡಿ ಎತ್ತರ ಏರಿ ಮಕ್ಕಳ ಬಾಳಿಗೆ ಬೆಳಕಾದ ಪರ್ವತಾರೋಹಿ
ಕೆಪಿಸಿಸಿ ಅಧ್ಯಕ್ಷರಾಗಿ ಟ್ರಬಲ್ ಶೂಟರ್ ಡಿಕೆಶಿ ಪಟ್ಟಾಭಿಷೇಕ
ಹೇಗಿದೆ ಗೊತ್ತಾ ಕನ್ನಡ ನ್ಯೂಸ್ ಚಾನಲ್ ಗಳ TRP ?
ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ
ನಿತ್ಯ ಭವಿಷ್ಯ : ಸಿಂಹ, ಕುಂಭ, ಮೀನ ರಾಶಿಯವರಿಗೆ ಧನಾಗಮನ – ಉಳಿದ ರಾಶಿಗಳ ಫಲಾಫಲ?
ಇವರು 57 ವರ್ಷಗಳ ಕಾಲ 7 ಗುಡ್ಡಗಳನ್ನು ಕಡಿದು 40 ಕಿ.ಮೀ ರಸ್ತೆ ನಿರ್ಮಿಸಿದ ಶಿಕ್ಷಕ
ಹೋದ್ರೆ ಹೋಗ್ಲಿ ರೀ … ಚೀನಿ ಆ್ಯಪ್ ಗಳಿಗೆ ಬದಲಿ ಆ್ಯಪ್ ಗಳಿವೆ
50 ವರ್ಷದಲ್ಲಿ 4.58 ಕೋಟಿ ಭಾರತೀಯ ಮಹಿಳೆಯರು ನಾಪತ್ತೆ!
ಮದ್ವೆಯಾದ ಕೆಲವೇ ದಿನಗಳಲ್ಲಿ ಅನೈತಿಕ ಸಂಬಂಧ – 17 ವರ್ಷದ ಮಗಳನ್ನು ಕೊಂದ ತಂದೆ
ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!
Tik tok ಬ್ಯಾನ್ ಬಳಿಕ ಮೇಡ್ ಇನ್ ಇಂಡಿಯಾ Roposo ಹವಾ!
80 ಕೋಟಿ ಬಡವರ ಪರ ಪ್ರಧಾನಿ ಮೋದಿ ಮಹತ್ವದ ಘೋಷಣೆ
ಕೊರೋನಾ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಸೃಷ್ಟಿ!
ಬಾಲಿವುಡ್ ನಟ ಅಮಿರ್ ಖಾನ್ ಮನೆ ಕೆಲಸದವರಿಗೆ ಕೊರೋನಾ
ಅಮೆರಿಕಾ ಅಧ್ಯಕ್ಷ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್
ನಿತ್ಯ ಭವಿಷ್ಯ : ಈ ರಾಶಿಯವರು ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸುದಿನ!
Tik tok ಸೇರಿದಂತೆ 59 ಆ್ಯಪ್ ಗಳ ಬಳಕೆ ನಿಷೇಧ ..!
ವಿದ್ಯುತ್ ಇಲ್ಲದ ಪುಟ್ಟ ಕೋಣೆಯಲ್ಲಿ ಕುಟುಂಬ – ಅಂಥಾ ಬಡತದಲ್ಲಿ ಬೆಳೆದ ಅವರಿಂದು ಕೋಟಿ ಕೋಟಿ ಒಡೆಯ!
ಅಗಲಿದ ಚಿರು ಸಿನಿಮಾಕ್ಕೆ ತಮ್ಮ ಧ್ರುವಾ ಮಾತ್ರವಲ್ಲ ದರ್ಶನ್ ಕೂಡ ಸಾಥ್!
ಸರ್ಕಾರದ ರೂಲ್ಸ್ ಹೆಂಡ್ತಿ ರೂಲ್ಸಂತಿದೆ ಅಂದ ಯಶ್!
ಸೈಕಲ್ ಏರಿದ ಸಿದ್ದರಾಮಯ್ಯ ! ಕಾರಣ ಏನ್ ಗೊತ್ತಾ?
ನಿತ್ಯ ಭವಿಷ್ಯ : ಪ್ರೇಮ ಸಂಬಂಧಗಳಲ್ಲಿ ಈ ರಾಶಿಯವರಿಗೆ ಆಹ್ಲಾದಕರ ದಿವಸ
ನೀವು ಹೀಗಿದ್ದೀರಾ? ಹಾಗಾದ್ರೆ ಹುಡುಗಿಯರಿಗೆ ನೀವಿಷ್ಟ!
ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..!
ಅಂದು 15 ದೇಶ 430 ಟೀಮ್ , ಇವರೇ ನಾಯಕ ! ಇಂದು..?
RBI ಅಧೀನಕ್ಕೆ ಸಹಕಾರಿ ಬ್ಯಾಂಕ್ ಗಳು
ನಿತ್ಯ ಭವಿಷ್ಯ : ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?
ಜಿಮ್ನಾಸ್ಟಿಕ್ ದೀಪಾ ಲೈಫ್ ಕಹಾನಿ… ಮಿಸ್ ಮಾಡ್ದೆ ಓದ್ಲೇ ಬೇಕು
ಇನ್ಮುಂದೆ ಪ್ರತಿ ಭಾನುವಾರ ಲಾಕ್ಡೌನ್ – ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರತನಕ ಕರ್ಫ್ಯೂ! ಏನಿರುತ್ತೆ ? ಏನಿರಲ್ಲ?
SSLC ಪರೀಕ್ಷೆ ಬರೆದ ಕೊರೋನಾ ಸೋಂಕಿತ – ಕಣ್ಣೀರಾಕುತ್ತಾ ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿಗಳು
ಅತ್ತೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟು, ಬಿಯರ್ ಬಾಟಲಿ ಹಾಕಿ ಕ್ರೌರ್ಯಮೆರೆದ ಅಳಿಯ!
ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್
ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!
ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!
ಈ ವ್ಯಕ್ತಿಗೆ 46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!
ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..
146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!
ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ
ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ
ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?
ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !
ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ
ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್ – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?
ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!
ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!
‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!
ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್
ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!
IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ
ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!
ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!
ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!
ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!
ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ
ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!
ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ
“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ
ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..!
ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!
ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!