No menu items!
10.9 C
Munich
Sunday, September 27, 2026

ಯಶ್ ಎದುರು ತೊಡೆ ತಟ್ಟಿ ನಿಂತ ನಟ!!

Must read

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರಕ್ಕೆ ಇಡೀ ದೇಶವೇ ಕಾದು ಕುಳಿತಿದೆ. ಇತ್ತೀಚಿಗಷ್ಟೆ ಟೀಸರ್ ಬಿಡುಗಡೆ ಮಾಡಿ ಕಾತುರತೆಯನ್ನು ಹೆಚ್ಚು ಮಾಡಿದ್ದ ಕೆಜಿಎಫ್ 2 ಚಿತ್ರ , ತದನಂತರ ಬಿಡುಗಡೆಯ ದಿನಾಂಕವನ್ನ ಘೋಷಿಸಿ ಚಿತ್ರಮಂದಿರಕ್ಕೆ ಲಗ್ಗೆ ಇಡಲು ತಯಾರಾಗಿದೆ.

 

 

ಜುಲೈ 16 ರಂದು ಕೆಜಿಎಫ್ ಚಾಪ್ಟರ್ 2ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಕನ್ನಡ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬರುತ್ತಿರುವ ಕೆಜಿಎಫ್ ಚಾಪ್ಟರ್ 2ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇನ್ನು ಕೆಜಿಎಫ್ ಚಾಪ್ಟರ್ 2ಚಿತ್ರದ ಬಿಡುಗಡೆ ದಿನಾಂಕ ಹೊರ ಬಿದ್ದ ನಂತರ ಆ ವಾರ ಯಾವುದೇ ಚಿತ್ರ ಬಿಡುಗಡೆ ಮಾಡಲು ಮುಂದೆ ಬರಲಿಲ್ಲ.

 

 

ಆದರೆ ಇದೀಗ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಹೀರೋಪಂತಿ 2 ಚಿತ್ರ ಕೆಜಿಎಫ್ ಚಾಪ್ಟರ್ 2ಚಿತ್ರ ಬಿಡುಗಡೆಯಾಗುವ ದಿನವೇ ಬಿಡುಗಡೆಯಾಗಲು ಮುಂದೆ ಬಂದಿದೆ. ಈ ಮೂಲಕ ಬಾಲಿವುಡ್ ನಲ್ಲಿ ಕೆಜಿಎಫ್ ಚಾಪ್ಟರ್ 2ಮತ್ತು ಹೀರೋಪಂತಿ 2 ಚಿತ್ರಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article