No menu items!
11.1 C
Munich
Wednesday, April 29, 2026

ಬಾಲಿವುಡ್ ಸೂಪರ್‍ಸ್ಟಾರ್‍ಗಳ ಸಂಭಾವನೆ ಎಷ್ಟು ಗೊತ್ತಾ..?

Must read

ಬಾಲಿವುಡ್ ಸಿನಿಮಾರಂಗ ಅತೀ ದೊಡ್ಡ ಮಾರುಕಟ್ಟೆಯನ್ನ ಹೊಂದಿದೆ.. ಇಲ್ಲಿರೋ ನಟರ ಫೇಸ್ ವ್ಯಾಲ್ಯೂ ಸಹ ಚಿತ್ರ ಗೆಲ್ಲೋಕೆ ಕಾರಣವಾಗುತ್ತೆ.. ಕೆಲವೊಮ್ಮೆ ನಟನ ಹೆಸರಿನಲ್ಲೆ ಸಿನಿಮಾಗಳು ಗೆದ್ದು ಹಾಕಿರೋ ದುಡ್ಡಿಗೆ ಮೋಸ ಇಲ್ಲ ಅನ್ನೋ ಹಾಗೆ ಮಾಡುತ್ತೆ.. ಮತ್ತೆ ಕೆಲವು ಬಾರಿ ಕೋಟಿ ಕೋಟಿ ದುಡ್ಡನ್ನ ಕೊಳ್ಳೆ ಹೊಡೆಯುತ್ತೆ.. ಹಾಗಿದ್ರೆ ತನ್ನ ಚಿತ್ರ 100 ಕೋಟಿ ಕ್ಲಬ್ ಸೇರುತ್ತಿದೆ ಅಂದ್ರೆ ಆ ನಾಯಕನ ಸಂಭಾವನೆ ಎಷ್ಟಿರಬಹುದು ಅನ್ನೋ ಅಂದಾಜು ಇರ್ಬೇಕಲ್ವ..? 2015ರ ಸಾಲಿನಲ್ಲಿ ಅತೀ ಹೆಚ್ಚು ಸಂಭಾವನೆಯನ್ನ ಪಡೆದ ನಟರು ಇಲ್ಲಿದ್ದಾರೆ ನೋಡಿ..

ಅಜಯ್ ದೇವಗನ್
ಸದ್ಯಕ್ಕೆ ತಾನೆ ನಿರ್ಮಾಣ ಮಾಡಿ ನಿರ್ದೇಶಿಸಿ-ನಟಿಸ್ತಿರೋ `ಶಿವೈ’ ಚಿತ್ರದಲ್ಲಿ ಬ್ಯೂಸಿಯಾಗಿದ್ಧಾನೆ ಈ ನಟ.. ಆಕ್ಷನ್-ಜಾಕ್ಸನ್ ಪ್ಲಾಪ್ ಆದ್ರೂ ದೃಶ್ಯಂ ಸಿನಿಮಾ ಈ ನಟನ ಕೈ ಹಿಡಿತು.. ಸದ್ಯಕ್ಕೆ ಬಾಲಿವುಡ್‍ನ ಮಟ್ಟಿಗೆ ಅಲ್ಪ ಸಂಭಾವನೆಯನ್ನ ಪಡೆದುಕೊಳ್ತಿದ್ದು ಬರೀ 25ಕೋಟಿಯನ್ನ ಪಡಿತಾರಂತೆ
ರಣ್‍ಬೀರ್ ಕಪೂರ್
ಬಿ-ಟೌನ್‍ನ ಚಾಕಲೇಟ್ ಬಾಯ್ ರಣ್‍ಬೀರ್ ಕಪೂರ್ ಸದ್ಯಕ್ಕೆ ಬ್ಯಾಕ್ ಟೂ ಬ್ಯಾಕ್ ಸಿನಿಮಾ ಆಫರ್‍ಗಳನ್ನ ಕೈಲಿಟ್ಟುಕೊಂಡಿದ್ದಾನೆ.. ಈತ ತನ್ನ ಸಿನಿಮಾಗೆ 30 ಕೋಟಿಯನ್ನ ಚಾರ್ಚ್ ಮಾಡ್ತಾನಂತೆ..

ಹೃತಿಕ್ ರೋಷನ್
40 ಕೋಟಿ ಸಂಭಾವನೆಯನ್ನ ಪಡಿತಾನೆ ಅಂತಾ ಹೇಳಲಾಗಿದ್ರು ಇದು ಸುಳ್ಳು ಈತ ಒಂದು ಚಿತ್ರಕ್ಕೆ ಪಡೆಯೋದು 50 ಕೋಟಿ ಅಂತಾ ಹೇಳಲಾಗಿದೆ.. ಸದ್ಯಕ್ಕೆ ಆಶುತೋಷ್ ಗೋವಾರಿಕರ್ ನಿರ್ದೇಶನದಲ್ಲಿ ಅಭಿನಯಿಸ್ತಿರೋ ಈ ನಟ ಮೆಹೆಂಜೊದಾರೊ ಸಿನಿಮಾಗೆ 50 ಕೋಟಿ ಪಡೆದುಕೊಂಡಿದ್ದಾನಂತೆ…

ಅಕ್ಷಯ್ ಕುಮಾರ್
ಬಾಲಿವುಡ್ ಕಿಲಾಡಿಯಾದ ಅಕ್ಷಯ್ ಕುಮಾರ್ ಸಂಖ್ಯಾಶಾಸ್ತ್ರವನ್ನ ನಂಬ್ತಾರಂತೆ.. ಹೀಗಾಗೆ 9 ಈತನ ಲಕ್ಕಿ ನಂಬರ್ ಆಗಿರೋದ್ರಿಂದ ತನ್ನ ಸಂಭಾವನೆಯಿಂದ 9 ಕೋಟಿಯಿಂದ 18 ಕೋಟಿಗೆ 27 ಕೋಟಿ ಈಗ 45 ಕೋಟಿಗೆ ಏರಿಸಿದ್ದಾರಂತೆ..

ಶಾರುಕ್‍ಖಾನ್
ಬಾಲಿವುಡ್‍ನ ಬಾದ್ ಷಾ ಶಾರುಖ್ ಸಿನಿಮಾದಿಂದ ಹೇಗೆ ಹಣವನ್ನ ಗಳಿಸ್ತಾರೋ ಹಾಗೆ ಜಾಹೀರಾತಿನ ಮೂಲದಿಂದ ಕೂಡ ಕೋಟಿ ಕೋಟಿ ಸಂಭಾವನೆಯನ್ನ ಎಣಿಸಿಕೊಳ್ತಾರೆ.. ಸದ್ಯಕ್ಕೆ ಈ ನಟ ತನ್ನ ಚಿತ್ರಕ್ಕೆ 40ರಿಂದ 50 ಕೋಟಿವರೆಗೂ ಸಂಭಾವನೆಯನ್ನ ಪಡಿತಾರಂತೆ.. ಇದ್ರ ಜೊತೆಗೆ ತನ್ನದೇ ಬ್ಯಾನರ್‍ನಲ್ಲಿ ಸಿನಿಮಾವನ್ನ ನಿರ್ಮಾಣ ಕೂಡ ಮಾಡೋದ್ರಿಂದ ಹಣ ಗಳಿಸೋದ್ರಲ್ಲಿ ಹಿಂದೆ ಬಿದಿಲ್ಲ..

ಅಮೀರ್‍ಖಾನ್
ಬಾಲಿವುಡ್ ಸೂಪರ್ ಹೀರೊ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್‍ಖಾನ್ ತನ್ನ ಚಿತ್ರಕ್ಕಾಗಿ ಹಾಗೆ ಅದರಲ್ಲಿನ ಪಾತ್ರಕ್ಕಾಗಿ ಎಂತಹ ರಿಸ್ಕ್ ತೆಗೆದುಕೊಳ್ಳೊದಕ್ಕು ಹಿಂದೆ ಮುಂದೆ ನೋಡೋದಿಲ್ಲ.. ವರ್ಷಕ್ಕೆ ಒಂದೇ ಚಿತ್ರ ಮಾಡಿದ್ರು ಅದು ತನ್ನ ಅಭಿಮಾನಿಗಳಿಗೆ ಇಷ್ಟವಾಗಬೇಕು ಅಂತಹ ಚಿತ್ರವನ್ನ ನೀಡೋದ್ರಲ್ಲಿ ಎತ್ತಿದ ಕೈ.. ಹೀಗಾಗೆ ಈತ ಕೂಡ ತನ್ನ ಚಿತ್ರವೊಂದಕ್ಕೆ 50 ಕೋಟಿ ಸಂಭಾವೆಯನ್ನ ಪಡಿತಾರಂತೆ

ಸಲ್ಮಾನ್‍ಖಾನ್
ಈಗೇನಿದ್ರು ಬಾಲಿವುಡ್ ತುಂಬಾ ಬಾಯ್‍ಜಾನ್‍ದೆ ಹವಾ.. ಈತ ನಟಿಸೋ ಸಿನಿಮಾ ಚೆನ್ನಾಗಿ ಇರ್ಲಿ ಅಥವಾ ಇಲ್ದೇ ಇರ್ಲಿ ನೂರು ಕೋಟಿ ಕ್ಲಬ್ ಸೇರಿ ಬಿಡುತ್ತೆ.. ಜೊತೆಗೆ ದುಡ್ಡು ಹಾಕೋ ನಿರ್ಮಾಪಕ ಈತನ ಸಿನಿಮಾದ ಮೂಲಕ ಸೇಫ್ ಆಗೋದು ಮಾತ್ರವಲ್ಲದೆ ಲಾಭವನ್ನ ಸಹ ಪಡಿತಾನೆ.. ಹೀಗಾಗೆ ತನ್ನ ಇಮೇಜ್ ಗೆ  ತಕ್ಕಹಾಗೆ ಸಂಭಾವನೆಯನ್ನ ಸಲ್ಲು ಭಯ್ ಪಡಿತಿದ್ದಾರೆ.. ಸದ್ಯಕ್ಕೆ ಈತ ಒಂದು ಸಿನಿಮಾಗೆ 60 ಕೋಟಿ ಸಂಭಾವನೆಯನ್ನ ಪಡಿತಾರಂತೆ.. ಈ ಮೂಲಕ ಬಾಲಿವುಡ್‍ನಲ್ಲಿ ಅತೀ ಹೆಚ್ಚು ಸಂಭಾವನೆಯನ್ನ ಪಡೆಯೊ ನಟರಲ್ಲಿ ಸಲ್ಮಾನ್‍ಖಾನ್ ಮುಂಚುಣಿಯಲ್ಲಿದ್ಧಾರೆ..

  •  ಅಶೋಕ್ ರಾಜ್

POPULAR  STORIES :

ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!

ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article