ನಿನ್ನೆಯಷ್ಟೆ ಬಸವ ಜಯಂತಿ ಮತ್ತು ರಂಜಾನ್ ಹಬ್ಬಗಳು ಮುಗಿದಿವೆ. ಬಹುತೇಕ ಸೆಲೆಬ್ರಿಟಿಗಳು ಬಸವ ಜಯಂತಿ ಹಾಗೂ ರಂಜಾನ್ ಎರಡೂ ಹಬ್ಬಗಳಿಗೂ ಸಹ ಸಾಮಾಜಿಕ ಜಾಲತಾಣದಲ್ಲಿ ಶುಭಾಶೇಯವನ್ನು ಕೋರಿದ್ದಾರೆ.
ಆದರೆ ನಟಿ ರಶ್ಮಿಕಾ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ತನ್ನ ಅರೆಬೆಂದ ಬುದ್ಧಿಯ ತಲೆಹರಟೆಯನ್ನು ಮತ್ತೆ ಮುಂದುವರಿಸಿದ್ದಾಳೆ. ಈಕೆ ಮಾಡಿದ ಒಂದೇ ಒಂದು ಪೋಸ್ಟ್ ನಿಂದ ಕಾಮೆಂಟ್ ವಿಭಾಗದಲ್ಲಿ ಹಲವಾರು ಮಂದಿ ಕಿತ್ತಾಡತೊಡಗಿದ್ದರು.
ಬಸವ ಜಯಂತಿ ಇದ್ದರೂ ಸಹ ಕ್ಯಾರೇ ಎನ್ನದ ರಶ್ಮಿಕಾ ಈದ್ ಮುಬಾರಕ್ ಎಂದು ಉದ್ದುದ್ದ ಸಾಲುಗಳನ್ನು ಬರೆದುಕೊಂಡು ಶುಭಾಶಯ ಕೋರಿ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಬಸವಣ್ಣ ಕೊಡುಗೆ ಎಂತಹದ್ದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ, ಅಂತಹ ಮಹಾನ್ ವ್ಯಕ್ತಿಯ ಜನ್ಮ ದಿನದಂದು ಒಂದು ಪೋಸ್ಟ್ ಹಾಕುವ ಯೋಗ್ಯತೆ ಇಲ್ಲದ ನಟಿ ರಶ್ಮಿಕಾ ಮಂದಣ್ಣ ಎಂದು ಕಾಮೆಂಟ್ ವಿಭಾಗದಲ್ಲಿ ರಶ್ಮಿಕಾ ಅವರ ಜನ್ಮವನ್ನು ಕನ್ನಡಿಗರು ಜಾಲಾಡಿದ್ದಾರೆ.
ಈ ಹಿಂದೆ ಸಾಕಷ್ಟು ಬಾರಿ ಕನ್ನಡಿಗರಿಂದ ಉಗಿಸಿಕೊಂಡಿರುವ ರಶ್ಮಿಕಾ ಮತ್ತೊಮ್ಮೆ ಕನ್ನಡಿಗರಿಂದ ಉಗಿಸಿಕೊಂಡಿದ್ದಾಳೆ. ಇಲ್ಲಿ ನೀನು ಈದ್ ಮುಬಾರಕ್ ಶುಭಾಶಯವನ್ನು ಕೋರಿದ್ದು ತಪ್ಪಲ್ಲ, ಆದರೆ ಅದೇ ದಿನ ಪವಿತ್ರವಾದ ಬಸವಜಯಂತಿಯ ಶುಭಾಶಯವನ್ನು ಕೋರದೇ ಇರುವುದು ತಪ್ಪು ಎಂದು ರಶ್ಮಿಕಾಳಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ ಕನ್ನಡಿಗರು. ಏನೇ ಆಗಲಿ ಹತ್ತಿದ ಏಣಿಯನ್ನು ಎಲ್ಲರೂ ಒಂದು ಬಾರಿ ಉತ್ತರ ರಶ್ಮಿಕಾ ಮಾತ್ರ ಪದೇ ಪದೇ ಪದೇ ಒದೆಯುತ್ತಾನೆ ಇದ್ದಾಳೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕೆಗೆ ಕನ್ನಡಕ್ಕೆ ಗೌರವ ನೀಡು ಎಂದು ಕಾಮೆಂಟ್ ಮಾಡುವುದು ಕೋಣನ ಮುಂದೆ ಕಿಂದರಿ ಬಾರಿಸಿದಂತೆ ಅಷ್ಟೆ..