No menu items!
9.9 C
Munich
Wednesday, May 6, 2026

ಬೀದಿ ನಾಯಿಗಳ ರಕ್ಷಣೆ ಹಾಗೂ ಸಾಕಾಣಿಕೆಗೆ ವಿಶೇಷ ಯೋಜನೆ

Must read

ಬೆಂಗಳೂರು : ರಾಜ್ಯದಲ್ಲಿ ಬೀದಿ ನಾಯಿಗಳ ರಕ್ಷಣೆ ಹಾಗೂ ಸಾಕಾಣಿಕೆಗೆ ವಿಶೇಷ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬೀದಿ ನಾಯಿಗಳ ರಕ್ಷಣೆ ಮತ್ತು ಸಾಕಾಣಿಕೆಗೆ ವಿಶೇಷ ಯೋಜನೆ ಜಾರಿಗೊಳಿಸಲಾಗುವುದು. ಬೀದಿ ನಾಯಿಗಳ ಬಗ್ಗೆ ಜನರು ಕಾಳಜಿ ಮಾಡಬೇಕಿದೆ.

ಜನರು ಬೀದಿ ನಾಯಿಗಳನ್ನು ದತ್ತು ಸ್ವೀಕರಿಸಲು ಮುಂದಾಗಬೇಕು ಎಂದರು. ಬೀದಿ ನಾಯಿಗಳ ರಕ್ಷಣೆ ಹಾಗೂ ದತ್ತು ಸ್ವೀಕರಿಸಿ ಸಾಕುವವರಿಗೆ ಉತ್ತೇಜನ ನೀಡುವ ಸಲುವಾಗಿ ವಿಶೇಷ ಯೋಜನೆಯನ್ನು ರೂಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಶೀಘ್ರವೇ ತಜ್ಞರ ಜೊತೆ ಸಮಾಲೋಚನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article