ಈದ್ಗಾ ಮೈದಾನ ವಿವಾದ ಬಂದ್ ಗೆ ಕರೆ

Date:

ಬೆಂಗಳೂರು :ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ವಿವಾದ ಸಂಬಂಧ ಜುಲೈ 12 ರಂದು ನಾಗರಿಕ ಒಕ್ಕೂಟದಿಂದ ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ. ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನ ಮಾಲೀಕತ್ವದ ವಿವಾದ ಸಂಬಂಧ ಬಿಬಿಎಂಪಿ ಹಾಗೂ ವಕ್ಫ್ ಬೋರ್ಡ್ ಗೆ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ಇದೀಗ ಬಕ್ರೀದ್ ಹಬ್ಬದ ಬಳಿಕ ಜಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ.

 

 

ವಕ್ಫ್ ಬೋರ್ಡ್ ದ್ದೇ ಸ್ವತ್ತು ಎಂದು ಪಾಲಿಕೆ ಹೇಳಿದ ಬೆನ್ನಲ್ಲೇ, ಜಂಗಮ ಮಠದಲ್ಲಿ ಸಭೆ ನಡೆದಿದ್ದು, ಕಾನೂನಾತ್ಮಕವಾಗಿ ಬಿಬಿಎಂಪಿಯದ್ದೇ ಸ್ವತ್ತು ಎಂದು ಸಾಬೀತುಪಡಿಸಲು ಕಾನೂನು ಹೋರಾಟ ಮಾಡಲು ಒಕ್ಕೂಟದ ವೇದಿಕೆ ನಿರ್ಧಾರ ಮಾಡಿದೆ. ಇನ್ನೂ ರಕ್ತ ಬೇಕಾದ್ರೂ ಕೊಡ್ತೀವಿ, ಆದ್ರೆ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಹಿಂದುಗಳನ್ನ ಕೆಣಕಬೇಡಿ, ಎಲ್ಲೋ ಕೂತು ಆಪರೇಟ್ ಮಾಡಿ ಇಲ್ಲಿ ಆಟವಾಡೋದು ಬೇಡ ಜಮೀರ್ ಅಹಮ್ಮದ್ ಅವರೇ ಹುಷಾರಾಗಿರಿ ಎಂದು ನಾಗರೀಕ ಒಕ್ಕೂಟದ ವೇದಿಕೆ ಸದಸ್ಯರು ಶಾಸಕ ಜಮೀರ್ ಗೆ ನೇರ ಸವಾಲ್ ಹಾಕಿದ್ದಾರೆ. ಈ ಹಿನ್ನೆಲೆ ಈದ್ಗಾ ಮೈದಾನದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುವಂತಾಗಿದೆ.

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...