No menu items!
14.8 C
Munich
Tuesday, June 16, 2026

ಎಲ್ಲಾ 28 ಕ್ಷೇತ್ರದಲ್ಲಿ ಮೋದಿ ಪರವಾದ ಅಲೆ ಇದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Must read

ಬೆಂಗಳೂರು: ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ನಮ್ಮ ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದ್ರೆ ಚುನಾವಣೆಗೆ ಸಚಿವರನ್ನೇ ಕಣಕ್ಕಿಳಿಸಲು ನಿರ್ಧರಿಸಿದರು. ಈ ಮೂಲಕ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಕನಸು ಇತ್ತು. ಆದ್ರೆ, ಅವರಿಗೂ ಸತ್ಯಾಂಶ ಗೊತ್ತಾಗಿದೆ. BJP ಅಲೆ ಇದೆ, ಸ್ಪರ್ಧಿಸಿದ್ರೆ ಸೋಲ್ತೇವೆಂದು ಗೊತ್ತು. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ನಮ್ಮ ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸ್ತೇವೆ ಎಂದರು.
ಎಲ್ಲವೂ ಶಾಂತಿಯುತವಾಗಲಿದೆ. ಎಲ್ಲಾ ಸಮಸ್ಯೆ ಶಮನವಾಗಲಿದೆ, ತಿಳಿಯಾಗಲಿದೆ. ಎಲ್ಲಾ 28 ಕ್ಷೇತ್ರದಲ್ಲಿ ಮೋದಿ ಪರವಾದ ಅಲೆ ಇದೆ. ಕರ್ನಾಟಕದಲ್ಲಿ ಸುಭದ್ರವಾಗಿದೆ ಅಂತ ತಿಳಿಸಬೇಕಿದೆ. ನಮ್ಮ ಮುಂದೆ ಎರಡು ಗುರಿ ಇದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲೆಡೆ ವಿಜಯಪತಾಕೆ ಹಾರಿಸಬೇಕಿದೆ. ಮುಂದಿನ ಬಾರಿ ಸ್ಪಷ್ಟ ಬಹುಮತ ಬರಬೇಕಿದೆ. ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ಪಕ್ಷದಿಂದ ಕೆಲಸ‌ ಆಗಬೇಕಿದೆ. ವಿಧಾನಸಭಾ ಚುನಾವಣೆಯಲ್ಲಿ ಕೂಡ ಉತ್ತಮ‌ ಗೆಲುವಾಗಬೇಕು. ಆ ನಿಟ್ಟಿನಲ್ಲಿ ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಮಾಡಿದೆ ಎಂದು ಹೇಳಿದರು.

- Advertisement -spot_img

More articles

- Advertisement -spot_img

Latest article